OMG! ಮಳೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯ ಮೇಲೆ ಎರಗಿತು ಮಿಂಚು; ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆ!
ಅಪಾಯ ಎಂಬುದು ಯಾವಾಗ, ಹೇಗೆ ಬಂದೆರಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಹಾಗೇನಾದರೂ ಊಹಿಸಲು ಸಾಧ್ಯವಾಗಿದಿದ್ದರೆ ಬಹುಶಃ ಅನೇಕರು ಅಪಾಯದ ಮುನ್ಸೂಚನೆಯನ್ನು ಪಡೆದ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಿದ್ದರು, ಅನೇಕರು ಅಪಾಯದಿಂದ ಪಾರಾಗುತ್ತಿದ್ದರು. ಆದರೆ ಅಂತಹ ಅವಕಾಶ ನಮಗೆ ಇಲ್ಲ. ಅನಿರೀಕ್ಷಿತ ಅವಘಡ ಎದುರಾಗಿ ಅಪಾಯದಿಂದ ಯಾರಾದರೂ ಕೂದಲೆಳೆಯ ಅಂತರದಲ್ಲಿ ಪಾರಾದರೆ ಆಗ ಅಂತಹವರನ್ನು ಅದೃಷ್ಟವಂತನೆಂದೂ, ಆಯುಷ್ಯ ಇನ್ನೂ ಗಟ್ಟಿಯಾಗಿದೆಯೆಂದೂ ಜನರು ಹೇಳುವುದುಂಟು. ಈಗ ನಾವು ಅಂತಹುದೇ ಒಂದು ಘಟನೆಯ ಬಗ್ಗೆ ಹೇಳಲು ಹೊರಟಿದ್ದು, ಈ ಘಟನೆಯಲ್ಲಿ ಕೂಡಾ ವ್ಯಕ್ತಿಯೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಆ ಸನ್ನಿವೇಶ ಕ್ಯಾಮೆರಾ ಕಣ್ಣುಗಳಲ್ಲಿ ಸಂಗ್ರಹವಾಗಿದೆ.

ಘಟನೆ ಏನೆಂದರೆ ವ್ಯಕ್ತಿಯೊಬ್ಬರು ಮಳೆ ಬರುವಾಗ ಮಳೆಯಿಂದ ರಕ್ಷಣೆ ಪಡೆಯಲು ತನ್ನ ಕೈಯಲ್ಲಿ ಛತ್ರಿ ಹಿಡಿದು ನಡೆದು ಹೋಗುವಾಗ ಅವರ ಛತ್ರಿಗೆ ಬಲವಾಗಿ ಮಿಂಚು ಬಡಿದಿದೆ. ಆದರೆ ಅದು ಆತ ಹಿಡಿದ ಛತ್ರಿಗೆ ಸೋಕಿದ ಕೂಡಲೇ ದಿಕ್ಕು ಬದಲಿಸಿದೆ, ಇದರಿಂದಾಗಿ ಪ್ರಾಣಾಪಾಯದಿಂದ ಆತ ತಪ್ಪಿಸಿಕೊಂಡಿದ್ದಾರೆ. ಈ ಸನ್ನಿವೇಶದ ಚಿತ್ರ ಕ್ಯಾಮರಾ ದಲ್ಲಿ ಸೆರೆಯಾಗಿದ್ದು, ವ್ಯಕ್ತಿಯ ಮೇಲೆ ಮಿಂಚು ಹರಿದ ಸನ್ನಿವೇಶ ಸ್ಪಷ್ಟವಾಗಿ ಫೋಟೋ ಗಳಲ್ಲಿ ಕಾಣುತ್ತಿದೆ. ಇಂತಹುದೊಂದು ಅಪಾಯಕಾರಿಯಾದ ಸನ್ನಿವೇಶ ನಡೆದಿರುವುದು ಅಮೆರಿಕಾದ ಸೌತ್ ಕೈರೋಲಿನಾದಲ್ಲಿ. ಶುಕ್ರವಾರ ಸಂಜೆ ಇಂತಹುದೊಂದು ಭೀಕರವಾದ ಸನ್ನಿವೇಶ ನಡೆದಿದೆ ಎನ್ನಲಾಗಿದೆ.

ಶಾಲೆಯೊಂದರಲ್ಲಿ ಕೌನ್ಸಿಲರ್ ಆಗಿರುವ ರೋಮುಲಸ್ ಮೈಕನಿಲ್ ಅವರು ಶುಕ್ರವಾರದಂದು ಮಳೆಯಲ್ಲಿ ಛತ್ರಿ ಹಿಡಿದು ನಡೆದು ಹೋಗುತ್ತಿರುವಾಗಲೇ, ಮಿಂಚು ಹೊಡೆದಿದೆ. ಈ ವಿಷಯವನ್ನು ರೋಮುಲಸ್ ಕೂಡಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿವರಿಸಿದ್ದಾರೆ. ಮಿಂಚು ಹೊಡೆದ ಕೂಡಲೇ ಅವರ ಕೈಯಲ್ಲಿ ಇದ್ದ ಛತ್ರಿ ಕೆಳಗೆ ಬಿದ್ದಿದೆ. ಆಗಲೇ ಅಲ್ಲಿದ್ದು ಕ್ಯಾಮೆರಾಗಳಲ್ಲಿ ದೃಶ್ಯ ರೆಕಾರ್ಡ್ ಆಗಿದೆ. ರೋಮುಲಸ್ ಮಿಂಚಿನ ಹೊಡೆತಕ್ಕೆ ಬೆದರಿದ್ದಾರೆ. ಅನಂತರ ಅವರು ನಿಧಾನವಾಗಿ ನೆಲದ ಮೇಲೆ ಬಿದ್ದ ತಮ್ಮ ಛತ್ರಿಯನ್ನು ಎತ್ತಿ ಕೊಂಡಿದ್ದಾರೆ. ಈ ಘಟನೆಯ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿಡಿಯೋ ನೋಡಿ…..
Omg pic.twitter.com/BGlBZhriB0
— Crazy Panda (@CrazyPa50956318) August 22, 2020
ವೈರಲ್ ಆದ ಈ ಘಟನೆಯ ಫೋಟೋಗಳನ್ನು ನೋಡಿದ ನೆಟ್ಟಿಗರು ರೋಮುಲಸ್ ಅವರ ತಾಳ್ಮೆಯನ್ನು ಹೊಗಳಿದ್ದಾರೆ. ಅಲ್ಲದೇ ನಿಮ್ಮಲ್ಲೂ ಸೂಪರ್ ಪವರ್ ಇದೆ ಬಿಡಿ ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ. ಆದರೆ ರೋಮುಲಸ್ ವಾಸ್ತವವಾಗಿ ಆ ಘಟನೆ ನಡೆದಾಗ ನನಗೆ ಸಿಕ್ಕಾಪಟ್ಟೆ ಭಯವಾಗಿತ್ತು. ಹೊಡೆತ ಬಿದ್ದ ಕ್ಷಣದಲ್ಲಿ ನಾನು ಬೆದರಿದ್ದೆನೆಂದು ಹೇಳಿದ್ದಾರೆ. ರೋಮುಲಸ್ ನಿಜಕ್ಕೂ ಅದೃಷ್ಟವಂತರೇ ಸರಿ. ಸಾವು ಅವರ ಹತ್ತಿರ ಬಂದು ಕೂದಲೆಳೆಯ ಅಂತರದಲ್ಲಿ ಪಕ್ಕಕ್ಕೆ ಹರಿದಿದೆ. ಈ ಭಯಾನಕ ಅನುಭವ ನಿಜಕ್ಕೂ ಅವರಲ್ಲಿ ಭಯವನ್ನು ಹುಟ್ಟಿಸಿರುವುದರಲ್ಲಿ ಅನುಮಾನವೇ ಇಲ್ಲ. ಆದರೆ ಜೀವ ಉಳಿದ ಖುಷಿ ಕೂಡಾ ಮತ್ತೊಂದು ಸಂತಸವನ್ನು ತಂದಿರುವುದು ಕೂಡಾ ನಿಜವೇ ಆಗಿದೆ.