OMG! ಮಾಲೀಕರ ಮಗುವನ್ನು ನೋಡಿ ಜೊಲ್ಲು ಸುರಿಸುತ್ತಿದ್ದ ನಾಯಿ: ಅವಕಾಶ ಸಿಕ್ಕ ಕೂಡಲೇ ಮಗುವನ್ನು ತಿನ್ನಲು ಮುಂದಾಯ್ತು

ಬೇರೆಲ್ಲ ಪ್ರಾಣಿಗಳಿಗಿಂತ ನಾಯಿಗಳು ಹೆಚ್ಚು ಪ್ರಾಮಾಣಿಕ ಹಾಗೂ ನಿಯತ್ತನ್ನು ಪ್ರದರ್ಶಿಸುವ ಪ್ರಾಣಿಗಳು ಎಂಬುದಾಗಿ ಹೇಳಲಾಗಿದೆ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎನ್ನುವುದು ಬಹಳ ಪ್ರಚಲಿತದಲ್ಲಿರುವ ಮಾತಾಗಿದೆ. ಆದರೆ ತಜ್ಞರು ಮಾತ್ರ ನಾಯಿಗಳ ಜೊತೆಗೆ ಸಣ್ಣ ಮಕ್ಕಳನ್ನು ಒಂಟಿಯಾಗಿ ಬಿಡಬಾರದು ಎಂದು ಸಲಹೆಯನ್ನು ನೀಡುತ್ತಾರೆ. ಏಕೆಂದರೆ ನಾಯಿಗಳು ಪುಟ್ಟ ಮಕ್ಕಳನ್ನು ಯಾವಾಗಲೂ ತಮ್ಮ ಬೇಟೆ ಎನ್ನುವಂತಹ ದೃಷ್ಟಿಯಿಂದಲೇ ನೋಡುತ್ತದೆ ಎನ್ನುವುದು ತಜ್ಞರ ಅಧ್ಯಯನದಿಂದ ತಿಳಿದು ಬಂದಿರುವಂತಹ ವಿಷಯವಾಗಿದೆಯಂತೆ. ನಾಯಿಗಳು ಪುಟ್ಟ ಮಕ್ಕಳ ಮೇಲೆ ಯಾವಾಗ ಆಕ್ರಮಣ ಮಾಡುತ್ತವೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎನ್ನಲಾಗಿದ್ದು, ಆದ್ದರಿಂದಲೇ ಸಾಧ್ಯವಾದಷ್ಟು ಸಾಕಿರುವ ನಾಯಿಗಳ ಜೊತೆಗೇ ಆದರೂ ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಎನ್ನುತ್ತಾರೆ ತಜ್ಞರು. ಆದರೆ ಇದನ್ನು ಪಾಲಿಸದೇ ಆಸ್ಟ್ರೇಲಿಯಾದಲ್ಲಿ ದಂಪತಿ ತಮ್ಮ ಮಗುವನ್ನು ನಾಯಿಯ ಜೊತೆಗೆ ಒಂಟಿಯಾಗಿ ಬಿಟ್ಟದ್ದು ಅವರಿಗೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಆರು ವರ್ಷ ವಯಸ್ಸಿನ ಅಮೇರಿಕನ್ ಸ್ಟಾಫರ್ಡ್ಶೈರ್ ಟೆರಿಯರ್ ತಳಿಯ ನಾಯಿಯೊಂದು ತನ್ನ ಮಾಲೀಕರ ಐದು ವಾರಗಳ ಪುಟ್ಟ ಮಗುವನ್ನು ತಿನ್ನುವ ಪ್ರಯತ್ನವನ್ನು ಮಾಡಿದೆ. ಬೆಳಗಿನ ಹೊತ್ತಿನಲ್ಲಿ ಮಗುವಿನ ತಂದೆ ತಾಯಿ ಇಬ್ಬರು ಗಾಢನಿದ್ರೆಯಲ್ಲಿ ಇದ್ದಂತಹ ಸಮಯದಲ್ಲಿ ನಾಯಿ ಮಗುವನ್ನೇ ತನ್ನ ಬೆಳಗಿನ ಉಪಹಾರ ವನ್ನಾಗಿ ಮಾಡಿಕೊಳ್ಳಲು ಹೋಗಿದೆ. ಅದು ಮಗುವನ್ನು ತಿಂದು ಹಾಕುವ ಪ್ರಯತ್ನ ಮಾಡಿದೆ. ಮಗು ಅಳುವ ಶಬ್ಧವನ್ನು ಕೇಳಿಸಿಕೊಂಡು ತಂದೆ-ತಾಯಿ ಅಲ್ಲಿಗೆ ಬರುವ ವೇಳೆಗೆ ನಾಯಿ ಮಗುವನ್ನು ಬಹಳಷ್ಟು ಗಂಭೀರವಾಗಿ ಕಚ್ಚಿ ಹಾಕಿತ್ತು.

ತಂದೆ ತಾಯಿ ನಾಯಿಯನ್ನು ಓಡಿಸಿ ಮಗುವನ್ನು ಎತ್ತಿಕೊಂಡು ವೈದ್ಯರಿಗೆ ತೋರಿಸುವ ವೇಳೆಗೆ ತಡವಾಗಿ ಹೋಗಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಈ ಘಟನೆಯ ನಂತರ ಸ್ಥಳೀಯ ಅಧಿಕಾರಿಗಳು ನಾಯಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈಗ ಈ ಘಟನೆಯ ನಂತರ ಸಾಕು ನಾಯಿಗಳ ಜೊತೆಗೆ ಮಕ್ಕಳನ್ನು ಒಂಟಿಯಾಗಿ ಬಿಡುವುದು ಸರಿಯಲ್ಲ ಎನ್ನುವ ವಿಷಯವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವರದಿಗಳ ಪ್ರಕಾರ ಈ ಸತಿ ಪತಿ ಹಾಗೂ ಅವರು ತಮ್ಮ ಮನೆಯಲ್ಲಿ ಸಾಕಿದ ನಾಯಿಯ ನಡುವೆ ಬಹಳ ಉತ್ತಮವಾದ ಸಂಬಂಧವಿತ್ತು ಎನ್ನಲಾಗಿದೆ. ಅವರು ನಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ನಾಯಿ ದಂಪತಿಯ ಜೊತೆಗೆ ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿತ್ತು. ಆದರೆ ಮನೆಗೆ ಮಗು ಬಂದಾಗಿನಿಂದಲೂ ನಾಯಿಯ ವರ್ತನೆಯಲ್ಲಿ ಕೆಲವು ಬದಲಾವಣೆಗಳು ಕಂಡು ಬಂದಿತ್ತು ಎನ್ನಲಾಗಿದ್ದು, ಮಗುವನ್ನು ನೋಡಿ ಅದು ಬಾಯಿಂದ ಜೊಲ್ಲು ಸುರಿಸುತ್ತಿತ್ತು ಎನ್ನಲಾಗಿದೆ. ಆದರೆ ದಂಪತಿ ಬಹುಶಃ ಅದಕ್ಕೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿರಬಹುದು ಎಂದು ಭಾವಿಸಿದ್ದರಂತೆ. ಆದರೆ ಅಸಲಿ ವಿಷಯ ಈಗ ಅವರಿಗೆ ತಿಳಿದುಬಂದಿದೆ. ಇನ್ನು ತಜ್ಞರು ಈ ವಿಚಾರದಲ್ಲಿ ನಾಯಿ ಮಗುವು ಮನೆಗೆ ಬಂದಾಗಿನಿಂದಲೂ ಅದನ್ನು ತನ್ನ ಆಹಾರವೆಂದೇ ತಿಳಿದು ಸೂಕ್ತವಾದ ಸಮಯಕ್ಕಾಗಿ ಕಾಯುತ್ತಿತ್ತು ಎಂದು ಹೇಳಿದ್ದಾರೆ.

ಈ ವಿಷಯ ಸಾಕಷ್ಟು ಸುದ್ದಿಯಾದ ನಂತರ ನಾಯಿಗಳ ವರ್ತನೆಯ ಕುರಿತಾಗಿ ಅಧ್ಯಯನ ಮಾಡಿರುವಂತಹ ತಜ್ಞರಾದ ಬ್ಯಾಕ್ ಕ್ರೆಡಿ ಅವರು ನಾಯಿಗಳು ಎಳೆಯ ಮಕ್ಕಳನ್ನು ಮನುಷ್ಯರು ಎನ್ನುವಂತೆ ಭಾವಿಸುವುದಿಲ್ಲ. ಅವುಗಳಿಗೆ ಸಣ್ಣ ಮಕ್ಕಳು ಸುಲಭವಾದ ಭೇಟಿ ಎನಿಸಿಕೊಳ್ಳುತ್ತದೆ. ನೀವು ನಾಯಿಗೆ ಎಷ್ಟು ತರಬೇತಿಯನ್ನು ನೀಡಿದರೂ ಸಹಾ ಅದು ಅವಕಾಶ ಸಿಕ್ಕ ಕೂಡಲೇ ತನ್ನ ಬೇಟೆಯ ಮೇಲೆ ಆ ಕ್ರ ಮ ಣವನ್ನು ಮಾಡುತ್ತದೆ ಎಂದಿದ್ದಾರೆ. ಮತ್ತೊಬ್ಬ ತಜ್ಞರು ಸಹಾ ಮಕ್ಕಳು ವಿವಿಧ ಗಾತ್ರ ಮತ್ತು ವರ್ತನೆಯನ್ನು ಹೊಂದಿರುತ್ತಾರೆ. ನಾಯಿಗಳು ಅವರನ್ನು ತಮ್ಮ ಆಹಾರವೆಂದರೆ ಭಾವಿಸುತ್ತವೆ.

ಈ ಪ್ರಕರಣದಲ್ಲಿ ಕೂಡಾ ಅಂತಹದೇ ಒಂದು ಘಟನೆ ನಡೆದಿದೆ. ಮಕ್ಕಳು ತಂದೆ ತಾಯಿಯ ಜೊತೆ ಇರುವಾಗ ನಾಯಿಗಳು ಅವರ ಮೇಲೆ ಆಕ್ರಮಣ ಮಾಡುವ ಧೈರ್ಯ ಮಾಡುವುದಿಲ್ಲ. ಆದರೆ ಯಾವಾಗ ರಾತ್ರಿ ಒಂಟಿಯಾಗಿತ್ತೋ ಅದೇ ಸರಿಯಾದ ಸಮಯ ಎಂದು ನಾಯಿ ಆಕ್ರಮಣ ಮಾಡಿದೆ ಎಂದು ಹೇಳಿದ್ದಾರೆ.