OMG! ಮುಂದಿನ ಶತಮಾನದಲ್ಲಿ (2100) ಮನುಷ್ಯ ಜೀವಿಸಲಿದ್ದಾನೆ 180 ವರ್ಷ; ವೈಜ್ಞಾನಿಕರು ಮಾಡಿದರು ಬೆಚ್ಚಿಬೀಳಿಸುವ ದಾವೆ!

ಸದ್ಯದ ಯುಗದಲ್ಲಿ ಮನುಷ್ಯನ ಜೀವಿತಾವಧಿ ತುಂಬಾ ಕಡಿಮೆಯಾಗುತ್ತಾ ಹೋಗುತ್ತಿರುವುದು ಕಂಡು ಬರುತ್ತಿದೆ. ಒಂದು ಸಮಯದಲ್ಲಿ ಮನುಷ್ಯನು ಸುಮಾರು 100 ವರ್ಷಗಳಿಗೂ ಮೇಲ್ಪಟ್ಟು ಬದುಕುತ್ತಿದ್ದನು. ಆದರೆ ಈಗ ಮನುಷ್ಯನ ವಯಸ್ಸು 60 ರಿಂದ 65 ಬಂದು ತಲುಪಿದೆ.

ಮನುಷ್ಯನ ಜೀವಿತಾವಧಿಯನ್ನು ಹೆಚ್ಚು ಮಾಡುವ ಸಲುವಾಗಿ ಅನೇಕ ವರ್ಷಗಳಿಂದ ವೈಜ್ಞಾನಿಕರು ಹಗಲು ರಾತ್ರಿ ಪ್ರಯತ್ನ ಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವೈಜ್ಞಾನಿಕನೊಬ್ಬ ಎಲ್ಲರೂ ಬೆಚ್ಚಿಬೀಳುವಂತಹ ದಾವೆ ಮಾಡಿದ್ದಾನೆ.

ಈ ವೈಜ್ಞಾನಿಕನು ಹೇಳುವ ಹಾಗೆ, ಮುಂದಿನ ಶತಮಾನದಲ್ಲಿ ಅಂದರೆ 2100 ರಿಂದ ಮನುಷ್ಯನ ವಯಸ್ಸು ಸುಮಾರು 180 ವರ್ಷಗಳವರೆಗೆ ಹೆಚ್ಚಾಗಲಿದೆ. ಜೊತೆಗೆ ಈ ಶತಮಾನದ ಕೊನೆಯವರೆಗೆ ಮನುಷ್ಯನು 130 ವರ್ಷಗಳವರೆಗೆ ಜೀವಿಸಲಿದ್ದಾನೆ ಎಂದೂ ಹೇಳಿದ್ದಾನೆ. ಈಗ ಒಬ್ಬ ಮನುಷ್ಯ 70 ಅಥವಾ 80 ವರ್ಷಗಳವರೆಗೆ ಜೀವಿಸಿದರೂ ಆತನ ಅನೇಕ ಆಸೆಗಳು ಅಪೂರ್ಣವಾಗಿಯೇ ಉಳಿಯುತ್ತವೆ. ಒಂದು ವೇಳೆ ಆತನ ವಯಸ್ಸು 180 ವರ್ಷಗಳವರೆಗೆ ಹೆಚ್ಚಾದರೆ ಅಪೂರ್ಣವಾಗಿ ಉಳಿದ ಆಸೆಗಳು ಪೂರ್ಣವಾಗಬಹುದು. ಕೆನಡಾದ HEC Montreal ನ ಪ್ರೊಫೆಸರ್ ಲಿಯೋ ಬೆಲ್ಜಿಲ್ ಅವರು ಈ ದಾವೆ ಮಾಡಿದ್ದಾರೆ. ಎಲ್ಲಕ್ಕೂ ಹಿರಿಯ ನಾಗರಿಕನ ದಾಖಲೆ 2100 ಶತಮಾನದಲ್ಲಿ ಮುರಿಯಲಿದೆ. ಸದ್ಯ ಫ್ರಾನ್ಸಿನ ಮಹಿಳೆಯೊಬ್ಬಳು 122 ವರ್ಷಗಳವರೆಗೆ ಜೀವಿಸಿದ ದಾಖಲೆ ಇದೆ. ಈಕೆ 1999 ರಲ್ಲಿ ತನ್ನ ಕೊನೆಯುಸಿರು ಎಳೆದಿದ್ದಳು.

ಲಿಯೋ ಬೆಲ್ಜಿಲ್ ಅವರು ಹೇಳುವ ಹಾಗೆ, ಕೆಲವು ಮಾಹಿತಿಗಳ ಪ್ರಕಾರ ಮಾನವನ ಜೀವಿತಾವಧಿಗೆ ಯಾವುದೇ ರೀತಿಯ ಮಿತಿಯಿಲ್ಲ. ಆದರೆ ಮನುಷ್ಯನ ವಯಸ್ಸು ಹೆಚ್ಚಾದಾಗ ಮಾತ್ರ ಮೆಡಿಕಲ್ ಸರ್ವೀಸಸ್ ನ ಅವಶ್ಯಕತೆ ಹೆಚ್ಚುತ್ತದೆ. ಹೀಗಾಗಿ ಆತನ ಖರ್ಚಿನಲ್ಲಿಯೂ ಹೆಚ್ಚಾಗುತ್ತದೆ. ವಯಸ್ಸು ಹೆಚ್ಚಾದಂತೆ ವೃದ್ಧರಿಗೆ ಹೆಚ್ಚಿನ ಆರೋಗ್ಯ ಸೌಲಭ್ಯಗಳ ಅವಶ್ಯಕತೆ ಇರುತ್ತದೆ. ಅವರಿಗೆ ಪೆಂಶನ್ ಅಥವಾ ಸರಕಾರಿ ಸ್ಕೀಮ್ ಗಳ ಮೇಲೆ ಅವಲಂಬಿಸಬೇಕಾಗುತ್ತದೆ. ವಯಸ್ಸು ಹೆಚ್ಚಾದಂತೆ ಮನುಷ್ಯನ ಹತ್ತಿರ ಎಲ್ಲ ಕೆಲಸಗಳನ್ನು ಮಾಡುವ ಯೋಗ್ಯ ಕ್ಷಮತೆ ಇರುವುದಿಲ್ಲ. ಮೀಡಿಯಾ ರಿಪೋರ್ಟ್ ಪ್ರಕಾರ ಮನುಷ್ಯನು ಬಹಳ ಕಾಲಗಳವರೆಗೆ ಜೀವಂತವಿದ್ದಾಗ ಆತನ ದೇಹದ ಕೆಲವು ಭಾಗಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತವೆ. ಆ ಸಮಯದಲ್ಲಿ ಮನುಷ್ಯನಿಗೆ ನಿರೋಗಿಯಾಗಿರಲು ಆರೋಗ್ಯ ವ್ಯವಸ್ಥೆಯ ಸೌಲಭ್ಯಗಳ ಅವಶ್ಯಕತೆ ಬೀಳುತ್ತದೆ. ಲಿಯೋ ಅವರು ಮಾಡಿದ
ಈ ದಾವೆಯಿಂದಾಗಿ ಎಲ್ಲರೂ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಮನುಷ್ಯ ಒಂದು ವೇಳೆ 180 ವರ್ಷಗಳವರೆಗೆ ಜೀವಂತವಿದ್ದರೆ ಆತ ಅನೇಕ ವ್ಯಾಧಿಗಳ ಜೊತೆಗೆ ಹೋರಾಡಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತಿದೆ.