OMG! ಮುಂಬೈಯಲ್ಲಿ 22 ನೇ ಅಂತಸ್ತಿನ ಕಿಟಕಿಯ ಪಕ್ಕದಲ್ಲಿ ಸ್ಟಂಟ್ ಮಾಡಿದ ಯುವಕನನ್ನು ಹುಡುಕುತ್ತಿರುವ ಪೊಲೀಸರು! ಬೆಚ್ಚಿ ಬೀಳಿಸುವ Video ವೈರಲ್!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದಾಗಿ ಅನೇಕ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಹೊರಗಿಡಲು ಸಾಧ್ಯವಾಗುತ್ತಿದೆ. ಎಲ್ಲೋ ಎಲೆ ಮರೆ ಕಾಯಿಗಳಂತೆ ತಮ್ಮ ಪ್ರತಿಭೆಗೆ ತಕ್ಕ ಅವಕಾಶ ಹಾಗೂ ತಮ್ಮ ಕೌಶಲ್ಯಕ್ಕೆ ತಕ್ಕ ಪುರಸ್ಕಾರ, ಪ್ರೇರಣೆ ದೊರೆಯದೆ ನಿರಾಶೆಯಾಗುತ್ತಿದ್ದ ನಿಜವಾದ ಪ್ರತಿಭಾವಂತರಿಗೆ ಸೋಶಿಯಲ್ ಮೀಡಿಯಾ ವರವಾಗಿದೆ‌ ಕೂಡಾ. ಆದ್ದರಿಂದಲೇ ಇರುಳು ಕಳೆದು ಹಗಲಾಗುವ ವೇಳೆಗೆ ಕೆಲವರು ತಮ್ಮ ಪ್ರತಿಭೆಯಿಂದ ದೇಶದಲ್ಲೊಂದು ಸಂಚಲನವನ್ನೇ ಸೃಷ್ಟಿಸಿ ಬಿಡುತ್ತಾರೆ. ಎಲ್ಲೆಲ್ಲೂ ಅವರದೇ ಸುದ್ದಿಯಾಗಿ ಕೆಲವೇ ದಿನಗಳಲ್ಲಿ ಅವರು ಜನಪ್ರಿಯರಾಗಿ ಬಿಡುತ್ತಾರೆ. ಉದಾಹರಣೆಗೆ ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತಿದ್ದ ರಾನು ಮಂಡಾಲ್, ಮುಂಬೈನ ರಸ್ತೆಗಳಲ್ಲಿ ಆತ್ಮ ರಕ್ಷಣ ಕಲೆ ಪ್ರದರ್ಶಿಸಿದ ವಾರಿಯರ್ ಅಜ್ಜಿ ಹೀಗೆ ಅನೇಕರಿದ್ದಾರೆ.

ಹೀಗೆ ಕೆಲವೇ ದಿನಗಳಲ್ಲಿ ಕೆಲವರು ಜನಪ್ರಿಯವಾಗುವುದನ್ನು ನೋಡಿದ ಕೆಲವರು ತಾವು ಕೂಡಾ ಹೀಗೆ ಇದ್ದಕ್ಕಿದ್ದಂತೆ ಜನಪ್ರಿಯವಾಗಿ ಬಿಡಬೇಕೆಂಬ ಧಾವಂತದಲ್ಲಿ ಅ ಪಾ ಯ ಕಾರಿ ಕಾರ್ಯಗಳನ್ನು ಮಾಡಲು ಮುಂದಾಗಿ ಬಿಡುತ್ತಾರೆ. ಅದರಲ್ಲೂ ಇಂದಿನ ಯುವ ಜನತೆ ಬೇಗ ಜನಪ್ರಿಯರಾಗಲು ಸೋಶಿಯಲ್ ಮೀಡಿಯಾಗಳಲ್ಲಿ ಏನಾದರೂ ಹೊಸದಾಗಿ, ಏನಾದರೂ ವಿಭಿನ್ನವಾಗಿ ಮಾಡುವ ಆಲೋಚನೆಯಲ್ಲಿ ಮಾಡುವ ಪ್ರಯತ್ನಗಳಿಂದೆಯೇ ತೊಂದರೆಗಳನ್ನು ತಾವೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಈಗಾಗಲೇ ಕೆಲವು ಘಟನೆ ಗಳಲ್ಲಿ ಕೆಲವರು ತಮ್ಮ ಪ್ರಾಣಕ್ಕೆ ಕೂಡಾ ಸಂ ಚ ಕಾರವನ್ನು ತಂದಿಟ್ಟುಕೊಂಡಿರುವುದು ಕೂಡಾ‌ ಉಂಟು.

ಈಗ ಜನಪ್ರಿಯತೆಯ ಗುಂಗಿಗೆ ಬಿದ್ದ ಯುವಕನೊಬ್ಬ ಮಾಡಿದ ಪ್ರಯತ್ನದ ವೀಡಿಯೋ ವೈರಲ್ ಏನೋ ಆಗಿದೆ, ಆದರೆ ವೀಡಿಯೋ ವೈರಲ್ ಆದ ಮೇಲೆ ಪೋಲಿಸರು ಆತನನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಹೌದು ಮುಂಬೈನ ಕಾಂಧಿವಲಿ ಪ್ರದೇಶದಲ್ಲಿ ಒಂದು ಬಹು ಮಹಡಿ ಕಟ್ಟಡದ 22 ನೇ ಅಂತಸ್ತಿನಲ್ಲಿ ಕಿಟಕಿಯ ಪಕ್ಕದಲ್ಲಿರುವ ಸಜ್ಜೆಯ ಮೇಲೆ ಯುವಕನೊಬ್ಬ ಅ ಪಾ ಯ ಕಾರಿ ಸ್ಟಂಟ್ ಒಂದನ್ನು ಮಾಡುತ್ತಿದ್ದು, ಅಲ್ಲಿ ಯಾವುದೇ ರೀತಿಯ ಸುರಕ್ಷತೆಯನ್ನು ಅಳವಡಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆದ ಕೂಡಲೇ ಅಲ್ಲಿನ ಪೋಲಿಸರು ಸ್ಥಳಕ್ಕೆ ತಲುಪಿ ವಿಚಾರಣೆ ಮಾಡಿದ್ದಾರೆ.

ಪೋಲಿಸರು ಹೇಳುವಂತೆ ಈಗಾಗಲೇ ಸ್ಟಂಟ್ ಮಾಡಿದ ಯುವಕನನ್ನು ಗುರುತಿಸಲಾಗಿದ್ದು, ಯುವಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆ ಯುವಕ ಇಂತಹ ಸ್ಟಂಟ್ ಮಾಡುವಾಗ ಇನ್ನಿಬ್ಬರು ಯುವಕರು ಅದನ್ನು ವೀಡಿಯೋ ಮಾಡುತ್ತಿದ್ದರು ಎನ್ನಲಾಗಿದ್ದು ಅವರು ಕೂಡಾ ಪರಾರಿಯಾಗಿದ್ದು ಮೂವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ವೀಡಿಯೋದಲ್ಲಿ ಯುವಕ ಮೊದಲು ಒಂದು ಸಾಫ್ಟ್ ಡ್ರಿಂಕ್ ಕುಡಿದು, ಅನಂತರ ಬಹಳ ಅ ಪಾ ಯ ಕಾರಿಯಾದ ಸ್ಥಾನದಲ್ಲಿ ತಲೆ ಕೆಳಗೆ ಕಾಲು ಮೇಲೆ ಹಾಕುವ ಸ್ಟಂಟ್ ಮಾಡಿದ್ದು, ಸ್ವಲ್ಪ ಏಮಾರಿದರೂ ಕೂಡಾ ಪ್ರಾ ಣ ಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ ಎನ್ನುವ ಹಾಗೆ ಇದೆ‌.

ವಿಡಿಯೋ ನೋಡಿ

ವೀಡಿಯೋ ನೋಡುಗನಿಗೆ ಭ ಯ ವನ್ನು ಹುಟ್ಟಿಸುವಂತೆ ಇದೆ. ಇಂತಹ ಭ ಯಾ ನ ಕ ವಾದ ಸ್ಟಂಟ್ ಮಾಡಲು ಕೈ ಹಾಕಿರುವ ಯುವಕರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಅನೇಕರು ಟೀ ಕೆ ಮಾಡಿದ್ದಾರೆ. ಹುಮ್ಮಸ್ಸಿನಲ್ಲಿ ಮಾಡಲು ಹೊರಡುವ ಕಾರ್ಯಗಳಿಂದ ಅ ಪಾ ಯ ಸಂಭವಿಸಿದರೆ ಮನೆಯವರಿಗೆ ಎಷ್ಟು ನೋ ವನ್ನು ಉಳಿಸುತ್ತದೆ ಎಂಬುದನ್ನು ಕಿಂಚಿತ್ತೂ ಆಲೋಚನೆ ಮಾಡದೆ ಇಂತಹ ಸಾಹಸಗಳಿಗೆ ಕೈ ಹಾಕುವ ಯುವಕರು ಒಮ್ಮೆ ಆಲೋಚನೆ ಮಾಡುವ ಅಗತ್ಯವಿದೆ. ಪ್ರತಿ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ಇಂತಹ ಪ್ರಯತ್ನಗಳಿಗೆ ಕೈ ಹಾಕಿ ಅನೇಕರು ಪ್ರಾಣ ಕಳೆದುಕೊಳ್ಳುವ ಸುದ್ದಿ ಗಳು ಬಂದರೂ ಇಂತಹ ಪ್ರಯತ್ನ ಮಾಡುವವರು ಕಡಿಮೆಯಾಗುತ್ತಿಲ್ಲ.