OMG! ಯುವಕನೊಬ್ಬ ಸ್ಟೇರ್ ಕೇಸ್ ಮೇಲಿಂದ ವಿಭಿನ್ನ ರೀತಿಯಲ್ಲಿ ಪುಷ್ ಅಪ್ ಮಾಡುತ್ತಾ ಇಳಿದನು. ಅದ್ಭುತ ವೈರಲ್ ವಿಡಿಯೋ…
ಇಂಟರ್ನೆಟ್ ನಲ್ಲಿ ಸತತವಾಗಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದರಲ್ಲಿ ಕೆಲವೊಂದು ವಿಡಿಯೋಗಳು ತುಂಬಾ ಹಾಸ್ಯವನ್ನು ನೀಡಿದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿದಾಗ ನಮ್ಮ ಕಣ್ಣುಗಳ ಮೇಲೆ ನಮಗೆ ವಿಶ್ವಾಸವಿಡಲು ಸಾಧ್ಯವಾಗುವುದಿಲ್ಲ.
ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದಾಗ ನೀವು ಸಹ ಅಚ್ಚರಿಪಡುವಿರಿ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕಾಲುಗಳಿಂದಲ್ಲದೆ ತನ್ನ ಕೈಗಳ ಸಹಾಯದಿಂದ ಮೆಟ್ಟಿಲುಗಳ ಮೇಲಿಂದ ಇಳಿಯುತ್ತಿದ್ದಾನೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಆತನಿಗೆ ಕ್ರ್ಯಾಬ್ ಮ್ಯಾನ್ ಮತ್ತು ಕೆಲವರು ಚೇಳಿನ ಹಾಗೆ ನಡೆಯುವ ವ್ಯಕ್ತಿ ಎಂದು ಸಂಬೋಧಿಸುತ್ತಿದ್ದರು.
ಈ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಕೈಗಳ ಸಹಾಯದಿಂದ ಕೆಳಗೆ ಇಳಿಯುತ್ತಿರುವುದು ಕಂಡುಬರುತ್ತದೆ. ಮೆಟ್ಟಿಲುಗಳನ್ನು ಇಳಿಯುವಾಗ ಈ ವ್ಯಕ್ತಿಯು ತುಂಬಾ ಸಹಜವಾಗಿ ಇಳಿಯುತ್ತಿರುವುದು ಕಂಡುಬರುತ್ತಿದೆ. ಈ ದೃಶ್ಯವನ್ನು ನೋಡಿದಾಗ ಆ ಯುವಕನ ಕೈಗಳು ಉಕ್ಕಿನ ಕೈಗಳಿವೆ ಏನೋ ಎಂಬಂತೆ ಕಾಣುತ್ತಿದೆ.
ಮೆಟ್ಟಿಲುಗಳ ಮೇಲಿಂದ ಎಳೆಯುವಾಗ ಈ ವ್ಯಕ್ತಿಯು ಮಾಡುತ್ತಿರುವ ದೃಶ್ಯವನ್ನು ನೋಡಿದಾಗ ನಮ್ಮ ಕಣ್ಣುಗಳ ಮೇಲೆ ನಮಗೆ ವಿಶ್ವಾಸ ಕೂಡುವುದಿಲ್ಲ. ನೆಲದ ಮೇಲೆ ಬರುತ್ತಲೇ ಚೇಳಿನ ಹಾಗೆ ನಡೆಯಲು ಶುರು ಮಾಡುತ್ತಾನೆ.
ವಿಡಿಯೋ ನೋಡಿ
Hold my beer while I walk on my hands. 🥴🍺 pic.twitter.com/lSdOps0kMY
— 🍺 Hold My Beer 🍺 (@HldMyBeer) October 23, 2021
26 ಸೆಕೆಂಡಿನ ಈ ವಿಡಿಯೋವನ್ನು @HldMyBeer ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಸದ್ಯ ತುಂಬಾ ವೈರಲ್ ಆಗುತ್ತಿದೆ.
ಟ್ವಿಟರ್ ನಲ್ಲಿ ಶೇರ್ ಮಾಡಿದ ನಂತರ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು ಐವತ್ತು ಸಾವಿರ ನೆಟ್ಟಿಗರು ನೋಡಿದ್ದಾರೆ. ಅನೇಕರು ಈ ವಿಡಿಯೋವನ್ನು ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತ ಮಾಡಿದ್ದಾರೆ. ಒಬ್ಬನು ತನ್ನ ಕಾಮೆಂಟ್ನಲ್ಲಿ, ನಾನು ಸಹ ಇದನ್ನು ಮಾಡಬಲ್ಲೆ ಆದರೆ ಕನಸಿನಲ್ಲಿ ಮಾತ್ರ ಎಂದಿದ್ದಾನೆ. ಇನ್ನೊಬ್ಬ ಈ ವಿಡಿಯೋವನ್ನು ನೋಡಿಯೇ ನನ್ನ ಭುಜಗಳು ನೋಯುತ್ತಿದೆ ಎಂದಿದ್ದಾನೆ.