OMG! ರಸ್ತೆ ಬದಿಯಲ್ಲಿ ನಿಂತು ಭಿಕ್ಷೆ ಬೇಡುವ ಮಹಿಳೆಯ ಅಕೌಂಟ್ ನಲ್ಲಿ 1.5 ಕೋಟಿ ರೂ. ಬ್ಯಾಲೆನ್ಸ್ ಮತ್ತು ನಾಲ್ಕೈದು ಮನೆಗಳು! ಪೊಲೀಸರು ಶಾಕ್!

ಭಿಕ್ಷುಕರ ಬಗ್ಗೆ ಅನೇಕ ಅದ್ಭುತ ಸಂಗತಿಗಳನ್ನು ಮೊದಲು ಸಹಿತ ಕೇಳಿದ್ದೇವೆ. ಈಗ ಮತ್ತೆ ಹೊಸದೊಂದು ಸುದ್ದಿ ಒಂದು ತುಂಬಾ ವೈರಲ್ ಆಗುತ್ತಿದೆ. ಈ ಭಿಕ್ಷುಕಿಯ ಬ್ಯಾಂಕ್ ಅಕೌಂಟ್ ನಲ್ಲಿ ಸುಮಾರು 1.42 ಕೋಟಿ ರೂಪಾಯಿಗಳು ಹಾಗೂ ಆಕೆ ಹೆಸರು ಮೇಲೆ ನಾಲ್ಕೈದು ಮನೆಗಳು ಸಹಿತ ಇದ್ದದ್ದು ಬೆಳಕಿಗೆ ಬಂದಿದೆ.

ಯಾರಿಗೆ ಆಗಲಿ ಭಿಕ್ಷುಕರನ್ನು ನೋಡಿದಾಗ ತುಂಬಾ ಮರುಕ ಹುಟ್ಟುತ್ತದೆ. ಎಮೋಷನಲ್ ಅತ್ಯಾಚಾರದಿಂದಾಗಿ ಜನರು ಭಿಕ್ಷುಕರಿಗೆ ಕೈತುಂಬಾ ದಾನವನ್ನು ಮಾಡುತ್ತಾರೆ. ಆದರೆ ದಾನಮಾಡುವಾಗ ಯಾವ ವ್ಯಕ್ತಿಯೂ ಭಿಕ್ಷುಕರ ಬಗ್ಗೆ ಹೆಚ್ಚಿಗೆ ವಿಚಾರ ಮಾಡುವುದಿಲ್ಲ. ಅನೇಕ ಜನರು ಹೀಗೂ ಇರುತ್ತಾರೆ ತಾವು ದಾನಮಾಡುವುದರಿಂದ ಒಂದು ಪುಣ್ಯದ ಕೆಲಸವನ್ನು ಮಾಡಿದೆ ಎಂಬ ಸಮಾಧಾನವನ್ನು ಹೊಂದುತ್ತಾರೆ. ಆದರೆ ಈ ಭಿಕ್ಷುಕರಲ್ಲಿಯೂ ಅನೇಕ ರೀತಿಯ ಮೋಸ ವಂಚನೆ ಮಾಡುವ ಭಿಕ್ಷುಕರು ಇರುತ್ತಾರೆ.

ಇಲ್ಲಿ ಹೇಳುತ್ತಿರುವ ಭಿಕ್ಷುಕಿಯು ಈಜಿಪ್ತ ದೇಶದವಳು ಆಗಿದ್ದಾಳೆ. ಗಲ್ಫ್ ನ್ಯೂಸ್ ವರದಿಯ ಪ್ರಕಾರ ಈಕೆ ಈಜಿಪ್ಟಿನ ಅನೇಕ ಪ್ರಾಂತಗಳಲ್ಲಿ ಸಂಚರಿಸಿ ಭಿಕ್ಷೆಯಿಂದ ಹಣವನ್ನು ಸಂಪಾದಿಸುತ್ತಿದ್ದಳು. ಆಕೆ ಒಂದು ವೀಲ್ ಚೇರ್ ಮೇಲೆ ಕುಳಿತುಕೊಂಡು ತನ್ನ ಒಂದು ಕಾಲು ಇಲ್ಲವೆಂದು ಜನರಿಗೆ ತೋರಿಸಿ ಕರುಣೆ ಬರುವಂತೆ ಮಾಡಿ ಭಿಕ್ಷೆಯ ಹಣವನ್ನು ಗಳಿಸುತ್ತಿದ್ದಳು.

ತನ್ನ ಡ್ಯೂಟಿ ಮಾಡುವಾಗ ಅಂದರೆ ಭಿಕ್ಷೆ ಬೇಡುವ ಸಮಯದಲ್ಲಿ ಎಲ್ಲರಿಗೂ ಒಂದು ಕಾಲು ಕಳೆದು ಹೋಗಿದೆ ಎಂದು ಹೇಳುತ್ತಿದ್ದಳು. ಉಳಿದ ಸಮಯದಲ್ಲಿ ಎರಡು ಕಾಲಗಳಿಂದ ಸರಿಯಾಗಿ ನಡೆದಾಡುತ್ತಿದ್ದಳು. ಈ ವಿಷಯ ಒಬ್ಬ ವ್ಯಕ್ತಿಯ ಗಮನಕ್ಕೆ ಬಂದಾಗ ಆತನು ಈಕೆಯ ಮೋಸದ ಆಟವನ್ನು ಪೊಲೀಸರ ಗಮನಕ್ಕೆ ತಂದಿದ್ದಾನೆ. ಆನಂತರ ತನಿಖೆಯಲ್ಲಿ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಆಕೆ ಹೆಸರಿನಲ್ಲಿ ಎರಡು ಬ್ಯಾಂಕ್ ಅಕೌಂಟ್ ಗಳಿದ್ದು ಎರಡರಲ್ಲಿಯೂ ಒಟ್ಟು 1 ಕೋಟಿ 42 ಲಕ್ಷ ರೂಪಾಯಿಗಳು ಇದ್ದದ್ದು ಕಂಡುಬಂದಿದೆ. ಹಾಗೆಯೇ ಆಕೆಯು 5 ಮನೆಗಳ ಒಡತಿಯೂ ಆಗಿದ್ದಾಳೆ. ವಿಶೇಷವೆಂದರೆ ಆಕೆಗೆ ಯಾವ ರೀತಿಯ ರೋಗವೂ ಇಲ್ಲ.

ಭಾರತದಲ್ಲಿಯು ಸಹಿತ ಭಿಕ್ಷುಕರ ತಂಡ ಗಳು ತುಂಬಾ ಕಾರ್ಯನಿರತವಾಗಿವೆ. ದೊಡ್ಡವರು ಹೆಚ್ಚಾಗಿ ಅಪಹರಣ ಮಾಡಿದ ಇಲ್ಲ ತಮ್ಮ ಮಕ್ಕಳನ್ನು ಈ ಕೆಲಸಕ್ಕೆ ಹಚ್ಚುವುದನ್ನು ನಾವು ಕಾಣುತ್ತೇವೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಎಷ್ಟು ಸಲ ಭಿಕ್ಷೆ ಬೇಡುವ ಮಕ್ಕಳಿಂದ ಅನೇಕ ತೊಂದರೆಗಳು ನಿರ್ಮಾಣವಾಗುತ್ತವೆ. ಇವರ ಕೈಯಲ್ಲಿ ವಾರಗಳ ಮೇಲಿಂದ ಭಿಕ್ಷೆ ಬೇಡುವ ದೇವರು ಸಹಿತ ಬದಲಾಯಿಸುತ್ತಾ ಇರುತ್ತಾನೆ. ಇವರು ಕೈಯಲ್ಲಿ ದೇವರ ಭಾವಚಿತ್ರವನ್ನು ಹಿಡಿದು ಭಿಕ್ಷೆ ಬೇಡುತ್ತಾರೆ. ಸೋಮವಾರ ಶಂಕರ, ಮಂಗಳವಾರ ಮತ್ತು ಶುಕ್ರವಾರ ದೇವಿ ದೇವತೆಗಳ ಹಾಗೂ ಗುರುವಾರ ರಾಯರ ಮತ್ತು ಶನಿವಾರದಂದು ಆಂಜನೇಯನ ಫೋಟೋಗಳನ್ನು ಹಿಡಿದು ಭಿಕ್ಷೆ ಬೇಡವ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬ ಭಿಕ್ಷುಕನಿಗೆ ಒಂದೊಂದು ಏರಿಯಾಗಳನ್ನು ಹಂಚಿಕೊಟ್ಟಿರುತ್ತಾರೆ. ಆ ಪ್ರಕಾರವೇ ಅವರು ಈ ಕೆಲಸ ಮಾಡುತ್ತಾರೆ. ಇವರಿಗೂ ಸಹಿತ ವೀಕ್ಲಿ ಹಾಲಿಡೇ ಅಥವಾ ಹಾಫ್ ಡೇ ಲಿವ್ ಲಭ್ಯವಿರುತ್ತವೆ.