OMG! 10 ಫೀಟ್ ಎತ್ತರದ ಮೇಲೆ ಹಾರುತ್ತಿರುವ ಪಕ್ಷಿಯನ್ನು ಒಂದೇ ಜಿಗಿತದಲ್ಲಿ ಬೇ’ಟೆಯಾಡಿದ ಕಾಡು ಬೆಕ್ಕು! ಒಮ್ಮೆ ನೋಡಿ ಈ ವೈರಲ್ ವಿಡಿಯೋ!

ಬೇಟೆಯಾಡುವುದು ವನ್ಯ ಮೃಗಗಳಿಗೆ ಪ್ರಕೃತಿಯು ಕಲಿಸಿದ ಪಾಠ. ಅವು ತಮ್ಮ ಆಹಾರಕ್ಕಾಗಿ ವಿಶೇಷವಾಗಿ ಕ್ರೂರ ಜಂತುಗಳು ತಮ್ಮ ಆಹಾರಕ್ಕೆ ಬೇರೆ ಪ್ರಾಣಿಗಳ ಮೇಲೆ ಅವಲಂಬಿತವಾಗಿರುತ್ತದೆ‌. ಆಹಾರ ಬೇಕೆಂದಾಗ ಯಾವುದೇ ಪ್ರಾಣಿ ತಾನಾಗಿಯೇ ಬಂದು ನನ್ನನ್ನು ತಿನ್ನು ಎನ್ನುವುದಿಲ್ಲ. ಬದಲಿಗೆ ಕ್ರೂರ ಪ್ರಾಣಿಗಳು ಬಹಳ ಪ್ರಯಾಸ ಪಟ್ಟು, ಶ್ರಮ ವಹಿಸಿ, ತಮ್ಮ ಕೌಶಲವನ್ನು ಬಳಸಿಕೊಂಡು, ಚಾಕಚಕ್ಯತೆಯಿಂದ ಹೊಂಚುಹಾಕಿ ತಮ್ಮ ಆಹಾರವನ್ನು ಬೇಟೆಯಾಗಿ ತಮ್ಮ ಹಸಿವನ್ನು ಇಂಗಿಸಿಕೊಳ್ಳಬೇಕಾದ್ದು ಏಕೆಂದರೆ ಈ ಭೂಮಿಯ ಮೇಲೆ ಉಳಿವಿಗಾಗಿ ಹೋರಾಟ ನಡೆಯಲೇಬೇಕೆಂದು ಡಾರ್ವಿನ್ ತನ್ನ ವಿಕಾಸ ಸಿದ್ಧಾಂತದಲ್ಲಿ ಎಂದೋ ಹೇಳಿಯಾಗಿದೆ.

ಬೇಟೆಯಾಡುವ ಕಲೆ ಒಂದೊಂದು ಪ್ರಾಣಿಯಲ್ಲಿ ಒಂದೊಂದು ವಿಶೇಷತೆಯಿಂದ ಕೂಡಿರುತ್ತದೆ. ಸಾಧಾರಣವಾಗಿ ನಮಗೆ ಅವುಗಳು ಬೇಟೆಯಾಡುವುದನ್ನು ನೇರವಾಗಿ ನೋಡಲು ಅವಕಾಶವಿಲ್ಲವಾದರೂ ವೈಲ್ಡ್ ಲೈಫ್ ಫೋಟೋಗ್ರಫಿ ಮತ್ತು ವಿಡಿಯೋಗಳ ಮೂಲಕ ಅವುಗಳನ್ನು ನೋಡಲು ಸಿಗುತ್ತದೆ. ಆ ದೃಶ್ಯಾವಳಿಯನ್ನು ನೋಡುವಾಗ ನಮ್ಮ ಮೈ ಮೇಲಿನ ರೋಮಗಳು ಎದ್ದು ನಿಲ್ಲುತ್ತವೆ‌. ಪ್ರಾಣಿಯೊಂದು ತನ್ನ ಬೇಟೆಯನ್ನು ಹಿಡಿಯಲು ಹೊಂಚು ಹಾಕುವ ವಿಧಾನ, ಅದು ಸದ್ದು ಮಾಡದೇ ಆಕ್ರಮಣ ಮಾಡುವ ರೀತಿ ಎಲ್ಲವೂ ಆಕರ್ಷಕ. ಆದರೆ ಇವೆಲ್ಲವುಗಳಿಗಿಂತ ಭಿನ್ನ ಹಾಗೂ ಅದ್ಭುತ ಶೈಲಿಯಲ್ಲಿ ಬೇಟೆಯಾಡುವ ಪ್ರಾಣಿ ಕಾರಕಲ್.

ಆಫ್ರಿಕಾದಲ್ಲಿ ಕಂಡು ಬರುವ ಇದು ಒಂದು ವಿಶೇಷವಾದ ಕಾಡಿನ ಜಾತಿಯ ಬೆಕ್ಕು. ಸಾಮಾನ್ಯ ಬೆಕ್ಕುಗಳಿಗಿಂತ ಸ್ವಲ್ಪ ಎತ್ತರವಾಗಿರುವ ಇದನ್ನು ನೋಡಿದರೆ ಚಿರತೆ ಎನಿಸಿಬಿಡುತ್ತದೆ. ಈ ಕಾರಕಲ್ ನ ವಿಶೇಷತೆ ಏನೆಂದರೆ ಇದು ಸುಮಾರು ಹತ್ತು ಅಡಿಗಳವರೆಗೆ ಮೇಲಕ್ಕೆ ಎಗರುವ ಸಾಮರ್ಥ್ಯವನ್ನು ಹೊಂದಿದ್ದು, ಆ ಎತ್ತರದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ಇದು ಹೊಂಚು ಹಾಕಿ ಮೇಲಕ್ಕೆ ಜಿಗಿದು ಹಿಡಿದು ಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು, ಅಥವಾ ಇದು ನಂಬಲಸಾಧ್ಯ ಎನಿಸಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕಾರಕಲ್ ಬೆಕ್ಕು ಹಾರಿ ಹೋಗುತ್ತಿರುವ ಹಕ್ಕಿಯನ್ನು ಹಿಡಿದ ವೀಡಿಯೋ ಒಂದು ವೈರಲ್ ಆಗಿದೆ.

ವಿಡಿಯೋ ನೋಡಿ…..

ಐಎಫ್ಎಸ್ ಅಧಿಕಾರಿ ಸುಸಾಂತ ನಂದ ಅವರು ಶೇರ್ ಮಾಡಿರುವ ಈ ವೀಡಿಯೋವನ್ನು ನೋಡಿದಾಗ ಕಾಡಿನ ಈ ಬೆಕ್ಕು ಹಕ್ಕಿಯನ್ನು ಹಿಡಿದ ಶೈಲಿ ರೋಮಾಂಚನ ಎನಿಸುತ್ತದೆ‌. ಒಂದು ಸಾವಿರ ಗಡಿ ದಾಟಿದ ಲೈಕ್ಸ್ ಪಡೆದ ಈ ವೀಡಿಯೋ ಸಾವಿರಾರು ವೀಕ್ಷಣೆಗಳನ್ನು ಪಡೆಯುತ್ತಾ ಸಾಗಿದೆ. ಟ್ವಿಟರ್ ಬಳಕೆದಾರರೊಬ್ಬರು ಈ ವೀಡಿಯೋ ನೋಡಿ, ಅದಕ್ಕೆ ಈ ಬೆಕ್ಕುಗಳನ್ನು ಅಸಾಧಾರಣ ಪರಭಕ್ಷಕ ಎನ್ನುವುದು ಇವುಗಳು ಭೇಟೆಯಾಡುವ ಶೈಲಿ ಅಸಾಧಾರಣ ಎಂದು ಮೆಚ್ಚುಗೆಯನ್ನು ನೀಡಿದ್ದಾರೆ. ಗಾಳಿಯಲ್ಲಿರುವಾಗಲೇ ಮೇಲೆ ಹಾರಿ ಬಾಯಲ್ಲಿ ಹಕ್ಕಿಯನ್ನು ಹಿಡಿದು ನೆಲದ ಮೇಲೆ ಲ್ಯಾಂಡ್ ಮಾಡಿದ ಬೆಕ್ಕಿನ ಕೌಶಲ ಅದ್ಭುತ ಎಂದಿದ್ದಾರೆ ಮತ್ತೊಬ್ಬ ಬಳಕೆದಾರರು.