OMG! 11 ಫೀಟಿನ ಹೆಬ್ಬಾವು ಈ 11 ವರ್ಷದ ಹುಡುಗಿಯ ಬೆಸ್ಟ್ ಫ್ರೆಂಡ್ ಅಂತೆ! ನೋಡಿ ಮೈ ಜುಂ ಎನಿಸುವ ಈ ವೈರಲ್ Video!

ಮಕ್ಕಳು ಅನೇಕ ಚಿಕ್ಕಪುಟ್ಟ ಸಾಕುಪ್ರಾಣಿಗಳನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿರುವ ಬೆಕ್ಕು, ನಾಯಿ, ಮೊಲ ಈ ರೀತಿಯ ಪ್ರಾಣಿಗಳ ಜೊತೆಗೆ ಸಾಕಷ್ಟು ಆಟಗಳನ್ನು ಆಡುತ್ತಾರೆ.ಈ ಸಾಕುಪ್ರಾಣಿಗಳಿಗೆ ಏನಾದರೂ ಸ್ವಲ್ಪ ಹೆಚ್ಚುಕಡಿಮೆಯಾದರೂ ಮಕ್ಕಳಿಗೆ ತಡೆದುಕೊಳ್ಳಲು ಅಗುವುದಿಲ್ಲ ಅಷ್ಟೊಂದು ಪ್ರೀತಿ ದುಃಖ ಚಿಕ್ಕ ಮಕ್ಕಳು ಈ ಸಾಕುಪ್ರಾಣಿಗಳ ಮೇಲೆ ತೋರಿಸುತ್ತಿರುತ್ತಾರೆ.

ಇಲ್ಲಿ 8 ವರ್ಷದ ಹುಡುಗಿಯ ಬೆಸ್ಟ್ ‘ಫ್ರೆಂಡ್’ ಒಂದು ದೊಡ್ಡ ಹೆಬ್ಬಾವು ಇದೆಯೆಂದರೆ ಯಾರಿಗೂ ನಂಬಲಿಕ್ಕಾಗುವುದಿಲ್ಲ.

ಇಸ್ರೇಲ್ ದೇಶದ ನಿವಾಸಿಯಾದ ಈ ಹುಡುಗಿಯು ಸ್ವಿಮಿಂಗ್ ಸಲುವಾಗಿ ಪೂಲ್ ನಲ್ಲಿ ಇಳಿದರೆ ಜೊತೆಯಲ್ಲಿ ತನ್ನ ಈ ಮಿತ್ರ ಸಾಕುಪ್ರಾಣಿ ಹೆಬ್ಬಾವು ಬೇಕೇ ಬೇಕು. ಒಂದು ಚಿಕ್ಕ ಹಲ್ಲಿಯನ್ನೇ ನೋಡಿದರೆ ಮಾರುದ್ದ ದೂರ ನಿಲ್ಲುವ ದೊಡ್ಡವರಿಗೂ ಸಹ ಈ ಹಾವನ್ನು ನೋಡಿದರೆ ಬೆವರು ಬರುತ್ತದೆ. ಆದರೆ ಈ ಹುಡುಗಿ ಮಾತ್ರ 11 ಫಿಟ್ ಉದ್ದವಾದ ಹೆಬ್ಬಾವಿನ ಜೊತೆಗೆ ಆಟ ಆಡುವುದನ್ನು ನೋಡಿದರೆ OMG ಎನ್ನದೆ ಇರಲಾರಿರಿ.

ರೈಟರ್ಸ್ ನೀಡಿದ ವರದಿಯ ಪ್ರಕಾರ, ಈ ಹುಡುಗಿಯ ಹೆಸರು ಇನ್ಬರ್ ಇದ್ದು ಈಕೆ ತನ್ನ ಪೋಷಕರ ಜೊತೆಗೆ ಇಸ್ರಾಯಿಲ್ ದ ದಕ್ಷಿಣಕ್ಕಿರುವ ಒಂದು ಪ್ರಾಣಿಗಳಿರುವ ಅಭಯಾರಣ್ಯದಲ್ಲಿ ಇರುತ್ತಾಳೆ.

ಇನ್ಬರ್ ಹೆಸರಿನ ಈ ಹುಡುಗಿಯು ಅತಿ ಚಿಕ್ಕಂದಿನಿಂದಲೇ ಪ್ರಾಣಿಗಳ ಜೊತೆಗೆ ಸಹವಾಸವನ್ನು ಹೊಂದಿದ್ದಾಳೆ. ಬೇಲೆ ಹೆಸರಿನ ಈ ಹೆಬ್ಬಾವು ಆಕೆಯ ಸಾಕುಪ್ರಾಣಿಗಳಲ್ಲಿ ಒಂದಾಗಿದೆ. ಕೊರೋನಾ ಕಾರಣದಿಂದ ಲಾಕ್ ಡೌನ್ ಜಾರಿಯಾದಾಗ ಇನ್ಬರ್ ಈ ಬೇಲೆ ಜೊತೆಗೆ ತನ್ನ ಹೆಚ್ಚಿನ ಸಮಯವನ್ನು ಕಳೆದಿದ್ದಾಳೆ. ಹೀಗಾಗಿ ಇವರಿಬ್ಬರು ಈಗ ಒಳ್ಳೆಯ ಮತ್ತು ಆಪ್ತ ಮಿತ್ರರಾಗಿದ್ದಾರೆ.

ವಿಡಿಯೋ ನೋಡಿ…

ಇನ್ಬರ್ ಳಿಗೆ ತನ್ನ ಮಿತ್ರನಾದ ಈ ಬೇಲೆ ಹೆಸರಿನ ಹೆಬ್ಬಾವಿನ ಜೊತೆಗೆ ಆಡಲು ತುಂಬಾ ಇಷ್ಟವಾಗುತ್ತದೆ. ಇನ್ಬರ್ ಳ ತಾಯಿ Sarit Regev ಹೇಳುವ ಹಾಗೆ ಇನ್ಬರ್ ಳು ಮೊದಲಿನಿಂದಲೂ ಹಾವು ಮತ್ತು ಇತರ ಪ್ರಾಣಿಗಳೊಂದಿಗೆ ಆಡುತ್ತಾ ದೊಡ್ಡವಳಾಗಿದ್ದಾಳೆ. ಆಕೆ ಚಿಕ್ಕವಳಿದ್ದಾಗ ಸ್ನಾನ ಮಾಡುವಾಗಲೂ ಸಹ ಈ ಬೇಲೆ ಹೆಬ್ಬಾವು ಆಕೆ ಜೊತೆಗೆ ಇರುತ್ತಿತ್ತು. ಈಗ ಇಬ್ಬರು ಜೊತೆ ಜೊತೆಯಲ್ಲಿ ದೊಡ್ಡವರಾಗಿದ್ದಾರೆ. ಮತ್ತು ಜೊತೆ ಜೊತೆಯಲ್ಲೇ ಆಟವನ್ನು ಆಡುತ್ತಾರೆ, ಇದು ನಮಗಾಗಿ ತುಂಬಾ ನಾರ್ಮಲ್ ಆಗಿದೆ.