OMG! 75 ಲಕ್ಷದ ಬೈಕ್ ತಗೊಂಡು ತರಕಾರಿ ತರಲು ಹೋದ; ನೋಡುತ್ತಲೇ ನಿಂತ ಜನ! ನೋಡಿ ಈ Video
ಈ ಕಾಲದಲ್ಲಿ ಜನರು ಏನೇನನ್ನು ಯಾವುದಕ್ಕೆ ಉಪಯೋಗ ಮಾಡುತ್ತಾರೆ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರ ವಿಚಾರ ಮತ್ತು ಐಡಿಯಾಗಳು ಬೇರೆ-ಬೇರೆ ಇರುತ್ತವೆ. ಅದರ ಜೊತೆಗೆ ಮನುಷ್ಯನ ಹವ್ಯಾಸಗಳು ಸಹಿತ ಬೇರೆ ಬೇರೆಯಾಗಿರುತ್ತವೆ. ಈ ಹವ್ಯಾಸಗಳನ್ನು ಪೂರ್ಣ ಗೊಳಿಸಿ ಕೊಳ್ಳಲು ರಾತ್ರಿ-ಹಗಲು ಕಷ್ಟಪಡುತ್ತಾರೆ. ಅದೇ ರೀತಿ ಒಬ್ಬ ವ್ಯಕ್ತಿಯು ತಾನು ಕಂಡ ಕನಸು ಪೂರ್ಣಗೊಳಿಸಿ ಕೊಂಡಿದ್ದಾನೆ. ತಾನು ಪಟ್ಟ ಕಷ್ಟದಿಂದ ತನ್ನ ಕನಸಿನ ಗಾಡಿಯೊಂದನ್ನು ಖರೀದಿಸಿದ್ದಾನೆ. ಈ ಬೈಕಿನ ಹೆಸರು ಹೋಂಡಾ ಗೋಲ್ಡ್ ಟ್ರೈಕ್. ವಿಶೇಷವೆಂದರೆ ಈ ಬೈಕ್ ಭಾರತೀಯ ರಸ್ತೆಗಳಲ್ಲಿ ಕಾಣಲು ಸಿಗುವುದಿಲ್ಲ. ಕಾರಣ ಇದು ತುಂಬಾ ಅಪರೂಪದ ಬೈಕ್ ಆಗಿದೆ. ಪ್ರಸ್ತುತ ವ್ಯಕ್ತಿ ಈ ಗಾಡಿಯನ್ನು ತೆಗೆದುಕೊಂಡು ಮಾರ್ಕೆಟಿನಲ್ಲಿ ತರಕಾರಿ ಖರೀದಿಸಲು ಬಂದಿದ್ದಾನೆ. ಇದೇ ಸಂದರ್ಭದಲ್ಲಿಯ ವಿಡಿಯೋ ಒಂದು ತುಂಬಾ ವೈರಲ್ ಆಗಿದೆ.
ವ್ಯಕ್ತಿಯು ತರಕಾರಿ ಖರೀದಿಸಲು ಮಾರ್ಕೆಟಿಗೆ ಬಂದಾಗ ಅಲ್ಲೇ ಬದಿಯಲ್ಲಿ ಈ ಗಾಡಿಯನ್ನು ಪಾರ್ಕ್ ಮಾಡಿದ್ದನು. ಕೆಲವು ಜನರಿಗೆ ಈ ಗಾಡಿ ಕಣ್ಣಿಗೆ ಬಿದ್ದ ನಂತರ ಅದನ್ನು ನೋಡಲು ಜಮಾಯಿಸತೊಡಗಿದರು. ಸ್ವಲ್ಪ ಸಮಯದ ನಂತರ ಗಾಡಿಯ ಮಾಲೀಕ ತರಕಾರಿ ತೆಗೆದುಕೊಂಡು ಬೈಕಿನ ಹತ್ತಿರ ಬಂದನು. ತನ್ನ ಕೈಯಲ್ಲಿಯ ತರಕಾರಿಗಳನ್ನು ಗಾಡಿಯಲ್ಲಿ ಇಟ್ಟು ಆಮೇಲೆ ಗಾಡಿ ತೆಗೆದುಕೊಂಡು ಹೋದನು. ಅಲ್ಲಿಯೇ ನಿಂತಿದ್ದ ಅಪರಿಚಿತ ವ್ಯಕ್ತಿ ಇದರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ.
ವಿಡಿಯೋ ನೋಡಿ
ಈ ಬೈಕಿನ ಬೆಲೆ 75 ಲಕ್ಷ ರೂಪಾಯಿಗಳಷ್ಟು ಇದೆ. ಬೈಕಿನ ಮಾಲೀಕನ ಹೆಸರು ಬಾಬು ಜಾನ್. ಬಾಬು ಜಾನ್ ಇವರು ತಮ್ಮ ಈ ಬೈಕನ್ನು UAE ಯಿಂದ ತರಿಸಿಕೊಂಡಿದ್ದಾರೆ. ಈ ಬೈಕ್ ಮನೆಗೆ ಬಂದು ಮುಟ್ಟುವ ತನಕ ಬಾಬು ಜಾನ್ ಅವರಿಗೆ ತುಂಬಾ ಸಮಸ್ಯೆಗಳು ಎದುರಾಗಿದ್ದವು. ಮನೆಗೆ ಬಂದ ನಂತರ ಕಸ್ಟಮ್ ಅಧಿಕಾರಿಗಳು ಈ ಬೈಕನ್ನು ಜಪ್ತಿ ಮಾಡಿದ್ದರು. ಕಸ್ಟಮ್ ವಿಭಾಗದಿಂದ ಅದನ್ನು ಬಿಡಿಸಿಕೊಳ್ಳಲು ಜಾನ್ ಅವರಿಗೆ ಮತ್ತೆ 24 ಲಕ್ಷ ರೂಪಾಯಿಗಳನ್ನು ಕಸ್ಟಮ್ ಡ್ಯೂಟಿಗಾಗಿ ಖರ್ಚು ಮಾಡಬೇಕಾಯಿತು. ಇಷ್ಟಾಗಿಯೂ ಅದರ ಹೊರತಾಗಿ ಹೆಚ್ಚುವರಿ 38 ಲಕ್ಷ ರೂಪಾಯಿಗಳನ್ನು ಪೇಡ್ ಮಾಡಬೇಕಾಯಿತು. ಇಷ್ಟೆಲ್ಲ ಮಾಡಿದ ನಂತರ ಜಾನ್ ಅವರ ಕೈಗೆ ಈ ಬೈಕ್ ಸಿಕ್ಕಿತು.
14 ತಿಂಗಳ ಹಿಂದೆ ತರಿಸಿಕೊಂಡ ಬೈಕನ್ನು ಕಸ್ಟಮ್ ವಿಭಾಗದಿಂದ ಬಿಡಿಸಿಕೊಳ್ಳಲು ಸುಮಾರು ಒಂದು ವರ್ಷದ ಸಮಯ ಬೇಕಾಯಿತು. ಇದಕ್ಕಾಗಿ ಕೋರ್ಟಿನ ಮೆಟ್ಟಿಲು ಸಹಿತ ಹತ್ತಬೇಕಾಯಿತು.
ಈ ಬೈಕಿನ ವಿಶೇಷತೆಗಳೇನು?
ಹೋಂಡಾ ಗೋಲ್ಡ್ ವಿನ್ ಟ್ರೈಕ್ ಬೈಕ್ ನಲ್ಲಿ 1832 cc, ಆರು ಸಿಲಿಂಡರ್ ಎಂಜಿನ್ ಇವೆ. ಎಂಜಿನ್ 118 Bhp ಪವರ್ ನೀಡುತ್ತವೆ. ಈ ಬೈಕಿನ ಫ್ಯೂಲ್ ಟ್ಯಾಂಕ್ 55 ಲೀಟರ್ ಗಳದ್ದಾಗಿದೆ.