OMG! ಇಡೀ ಮೊಲವನ್ನು ನುಂ ಗಿದ ಸೀಗಲ್ ಪಕ್ಷಿ! “ಆ ಗಾತ್ರದ ಮೊಲವನ್ನು ನುಂ ಗಿದ ಮೇಲೆ ಸೀಗಲ್ ಹಾರುವುದು ಕಷ್ಟ” ಎಂದ ಜನ! ನೋಡಿ ಈ Viral Video!
ನಮ್ಮ ಸುಂದರ ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಬಣ್ಣ ಬಣ್ಣದ ಹಕ್ಕಿಗಳು ಇವೆ. ಅದರಲ್ಲೂ ಸುಂದರವಾದ ಪರಿಸರದ ಮುಖ್ಯ ಆಕರ್ಷಣೆಯೇ ಕಲರವ ಮಾಡುತ್ತಾ ಹಾರಾಡುವ ಹಕ್ಕಿಗಳು. ಅದೆಷ್ಟೋ ಸಂದರ್ಭದಲ್ಲಿ ನಾವು ಹಕ್ಕಿಗಳ ಧ್ವನಿ, ಅವುಗಳ ಆಟವನ್ನು ನೋಡುತ್ತಾ ನಮ್ಮನ್ನೇ ನಾವು ಮರೆತು ಬಿಡುತ್ತೇವೆ. ಮನಸ್ಸಿಗೆ ಒಂದು ಮುದವನ್ನು ನೀಡುವ, ಮನಸ್ಸನ್ನು ಚೇತೋಹಾರಿಯನ್ನಾಗಿ ಮಾಡುವ ಹಕ್ಕಿಗಳು ಸಹಜವಾಗಿಯೇ ಎಲ್ಲರ ಮನಸ್ಸಿಗೂ ಕೂಡಾ ಖುಷಿಯ ಭಾವವನ್ನು ನೀಡುತ್ತದೆ. ಹಕ್ಕಿಗಳು ಎಂದೊಡನೆ ನಮ್ಮ ಮನಸ್ಸಲ್ಲಿ ಮೂಡುವುದು ಕೂಡಾ ಸುಂದರವಾದ, ಮೃದು ವರ್ತನೆಯ, ನಾವು ಹೆಜ್ಜೆ ಇಟ್ಟರೆ ಹಾರಿ ದೂರ ಹೋಗುವ ಜೀವಿಗಳಾಗಿ ನಮ್ಮ ಕಣ್ಣಿಗೆ ಕಾಣುತ್ತವೆ.
ಹಕ್ಕಿಗಳು ನಮ್ಮ ಮನೆಯ ಮುಂದೆ ಬಂದಾಗ ಅವುಗಳಿಗೆ ತಿನ್ನಲು ಕಾಳನ್ನು, ಇನ್ನೇನೋ ಆಹಾರವನ್ನು ನೀಡುತ್ತೇವೆ. ಹಕ್ಕಿಗಳೇ ಆದರೆ ಅಲ್ಲಿ ಇಲ್ಲಿ ಹಾರಾಡುತ್ತಾ ಕಾಳು, ಹುಳುಗಳನ್ನು ಆರಿಸಿಕೊಂಡು ತಿಂದರೆ, ಹದ್ದುಗಳಂತಹ ಹಕ್ಕಿಗಳು ಸಣ್ಣ ಪುಟ್ಟ ಗಾತ್ರದ ಕೋಳಿಗಳನ್ನು, ಸಣ್ಣ ಸಣ್ಣ ಮರಿಗಳನ್ನು ಎತ್ತಿಕೊಂಡು ಹೋಗಿ ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. ಅವು ಹೀಗೆ ಬೇ ಟೆಯಾಡಿ ತಿನ್ನುವುದನ್ನು ನೋಡಿದಾಗ ನಮಗೂ ಅದು ವಿಚಿತ್ರವೋ, ವಿಸ್ಮಯವೋ ಅಥವಾ ಅ ಸಹ್ಯದ ಭಾವನೆಯನ್ನೋ ಮೂಡಿಸದು ಕೂಡಾ. ಏಕೆಂದರೆ ಅದು ಅವುಗಳ ಆಹಾರ.
ಆದರೆ ಇದೆಲ್ಲಕ್ಕಿಂತ ಭಿನ್ನವಾಗಿ ಒಂದು ಇಡೀ ಮೊಲವನ್ನು ಹಕ್ಕಿಯೊಂದು ಕೊಕ್ಕಿನಿಂದ ಎತ್ತಿಕೊಂಡು ನುಂಗುವುದು ಎಂದರೆ ಬಹುಶಃ ಅದು ಉಷ್ಟ್ರ ಪಕ್ಷಿ ಇರಬೇಕೇನೋ ಎಂದುಕೊಂಡರೆ ಅಲ್ಲ ನಿಮ್ಮ ಊಹೆ ತಪ್ಪು. ನೀವು ನಂಬಲೂ ಕೂಡಾ ಸಾಧ್ಯವಿಲ್ಲದಂತಹ ಸನ್ನಿವೇಶ ಇದು. ಸೀಗಲ್ ಹಕ್ಕಿಯೊಂದು ಒಂದು ಮೊಲವನ್ನು ಎತ್ತಿಕೊಂಡು ನುಂಗಿ ಹಾಕಿದೆ. ಸೀಗಲ್ ಮೊಲವನ್ನು ನುಂಗಿದ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಭರ್ಜರಿಯಾಗಿ ವೈರಲ್ ಆಗಿದ್ದು, ನೋಡುಗರು ಕೂಡಾ ಈ ವೀಡಿಯೋಗೆ ವಿಧವಿಧವಾದ ರೀತಿಯಲ್ಲಿ ಪ್ರತಿಕ್ರಿಯೆ ಗಳನ್ನು ನೀಡುತ್ತಾ ಸಾಗಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಒಂದು ಅರಣ್ಯದ ಪ್ರದೇಶದಲ್ಲಿನ ಮೂರ್ನಾಲ್ಕು ಸೀಗಲ್ ಹಕ್ಕಿಗಳು ನಿಂತಿವೆ. ಅದರಲ್ಲಿ ಗಾತ್ರದಲ್ಲಿ ದೊಡ್ಡದಾಗಿರುವ ಸೀಗಲ್ ಒಂದು ಮೊಲವನ್ನು ತನ್ನ ಕೊಕ್ಕಿನಿಂದ ಅನಾಯಾಸವಾಗಿ ಎತ್ತಿಕೊಂಡು ಬಾಯಿಯಲ್ಲಿ ಹಾಕಿಕೊಂಡಿದೆ. ಬಾಯಿ ಚಿಕ್ಕದಾದರೂ ಕೂಡಾ ಮೊಲವನ್ನು ಬಿಡದೆ ಹರ ಸಾಹಸವನ್ನು ಮಾಡಿದ ಸೀಗಲ್ ಪೂರ್ತಿ ಮೊಲವನ್ನು ನಂಗುವುದರಲ್ಲಿ ಯಶಸ್ವಿ ಆಗಿದೆ. ಅದರ ಸುತ್ತ ಮುತ್ತ ಇರುವ ಹಕ್ಕಿಗಳಿಗೆ ಕೂಡಾ ಅದು ವಿಚಿತ್ರವಾಗಿ ಕಂಡಂತೆ ಅವು ಅಲ್ಲಿಂದ ದೂರ ಸರಿದಿವೆ. ಸೀಗಲ್ ಮೊಲವನ್ನು ನುಂಗಲು ಪಡುವ ಕಷ್ಟ ಸ್ಪಷ್ಟವಾಗಿ ಕಾಣುತ್ತದೆ.
ವಿಡಿಯೋ ನೋಡಿ…
ಈ ವೀಡಿಯೊವನ್ನು ಈಗಾಗಲೇ 35 ಲಕ್ಷ ಜನ ವೀಕ್ಷಣೆ ಮಾಡಿದ್ದು, 47 ಸಾವಿರಕ್ಕೂ ಅಧಿಕ ಲೈಕ್ ಗಳು ದಕ್ಕಿದೆ. ವೀಡಿಯೋ ನೋಡಿದವರು ಭೂಮಿಯ ಮೇಲಿರುವ ದೈ ತ್ಯ ಈ ಸೀಗಲ್ ಎಂದಿದ್ದಾರೆ. ಪಕ್ಕದಲ್ಲಿರುವ ಹಕ್ಕಿಗಳು ಅದನ್ನು ನೋಡಲಾಗದೆ ದೂರ ಸರಿದಿವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸೀಗಲ್ ಗಳು ಗಾತ್ರದಲ್ಲಿ ಇನ್ನೂ ದೊಡ್ಡದಾಗಿದ್ದರೆ ಬಹುಶಃ ಮನುಷ್ಯರನ್ನು ಕೂಡಾ ನುಂಗಿ ಬಿಡುತ್ತಿದ್ದವೇನೋ ಎಂದು ಕೆಲವರು ಕಾಮೆಂಟ್ ಮಾಡಿ ಆ ಗಾತ್ರದ ಮೊಲವನ್ನು ನುಂಗಿದ ಮೇಲೆ ಸೀಗಲ್ ಹಾರುವುದು ಕಷ್ಟ ಎಂದು ಕೆಲವರು ಹೇಳಿದ್ದಾರೆ. ಒಟ್ಟಾರೆ 16 ಸಾವಿರ ಜನ ಕಾಮೆಂಟ್ ಮಾಡಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.