OMG! ಒಂದೇ ಕ್ಷಣಕ್ಕೆ 1.5 ಕೋಟಿ ರೂಪಾಯಿಯ ಒಡೆಯನಾದ ಇಟ್ಟಿಗೆ ಕಾರ್ಮಿಕನ ಕುಟುಂಬ!

ಕೆಲವರು ರಾತ್ರಿ-ಹಗಲು ದುಡಿದೇ ದುಡಿಯುತ್ತಾರೆ ಆದರೂ ಸಹಿತ ಅವರ ಆಸೆಗಳು ಕನಸುಗಳು ಪೂರ್ಣವಾಗುವುದು ತುಂಬಾ ಕಷ್ಟವಾಗಿ ಹೋಗುತ್ತದೆ. ಕೆಲವರು ಹೀಗೂ ಇರುತ್ತಾರೆ ಅವರ ಅದೃಷ್ಟ ಅಥವಾ ಅವರ ಮೇಲೆ ದೇವರ ಕೃಪೆ ಇರುತ್ತದೆಯೋ ಏನೋ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತ ಹೋಗುತ್ತದೆ. ದೇವರ ದಯೆ ಇದ್ದರೆ ಒಂದೇ ರಾತ್ರಿಯಲ್ಲಿ ಮನುಷ್ಯ ಲಕ್ಷಾಧೀಶನಾಗುತ್ತನೆ. ಇಲ್ಲಿ ಹೇಳುತ್ತಿರುವ ವಿಷಯವು ಹಾಗೆಯೇ ಇದೆ. ಕೇಳಿದರೆ ನಂಬಿಕೆ ಮೂಡುವುದು ಕಷ್ಟ.

ವರದಿ ಪಂಜಾಬದಲ್ಲಿಯದಿದೆ. ಪಂಜಾಬಿನ ಸಂಗರೂರ್ ನಲ್ಲಿರುವ ಕೂಲಿ ಕಾರ್ಮಿಕನ ಕುಟುಂಬದ ಜೊತೆಗೂ ಹೀಗೆ ನಡೆಯಿತು. ಸರಿಯಾಗಿ ಜೀವನ ನಡೆಸುವುದು ಕಷ್ಟವಿರುವ ದಿನಗಳಲ್ಲಿ ಕುಟುಂಬದ ಸದಸ್ಯರು ಒಮ್ಮೆಲೆ ಒಂದೂವರೆ ಕೋಟಿಯ ಮಾಲೀಕರಾದರು.

ಕೂಲಿ ಕೆಲಸವನ್ನು ಮಾಡಿ ದಿನಗಳನ್ನು ದೂಡುತ್ತಿರುವ ಕಾರ್ಮಿಕನಾದ ಮನೋಜನ ಮಗಳು ಯಾರ ಕಡೆಯಿಂದಲೂ ಹಣವನ್ನು ಎರವಲು ಪಡೆದುಕೊಂಡು ಎರಡು ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದಾಳೆ. ಅವಳು ಸಹಜವಾಗಿ ಖರೀದಿಸಿದ ಲಾಟರಿ ಟಿಕೆಟ್ಟುಗಳು ಆಕೆ ಮತ್ತು ಆಕೆಯ ಕುಟುಂಬದ ಹಣೆಬರಹವನ್ನೇ ಬದಲಾಯಿಸಿತು. ಇಟ್ಟಿಗೆಗಳನ್ನು ತಯಾರಿಸುವ ಕಾರ್ಖಾನೆಯ ಗೂಡಿನಲ್ಲಿ ಕೆಲಸ ಮಾಡುವ ಮನೋಜನ ಅದೃಷ್ಟವೇ ಬದಲಾಯಿಸಿತು. ಲಾಟರಿಯಲ್ಲಿ ಗೆದ್ದ ಒಂದೂವರೆ ಕೋಟಿ ರೂಪಾಯಿಗಳ ಚೆಕ್ ಮನೋಜನಿಗೆ ನೀಡಲಾಗಿದೆ.

ಮನೋಜನ ಕುಟುಂಬದಲ್ಲಿ ಒಟ್ಟು 7 ಜನರಿದ್ದಾರೆ. ಹೀಗಾಗಿ ಮನೋಜನಿಗೆ ಮನೆ ನಡೆಸುವುದು ತುಂಬಾ ಕಷ್ಟವಾಗಿತ್ತು. ಅಂಥದರಲ್ಲಿ ಮನೋಜನ ದೊಡ್ಡ ಮಗಳ ಮದುವೆಯೊಂದು ಸಮೀಪಿಸಿತ್ತು.

ಮನೋಜನ ಮಗಳು ರಿಂಪಿ ಹೇಳುವ ಹಾಗೆ, ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುವ ಹುಡುಗನೊಬ್ಬ ಮನೆಗೆ ಲಾಟರಿ ಟಿಕೆಟ್ ಗಳನ್ನು ತಂದಿದ್ದನು. ಯಾರೂ ಈ ಟಿಕೆಟ್ಗಳನ್ನು ಖರೀದಿ ಮಾಡುತ್ತಿಲ್ಲ ಆದ್ದರಿಂದ ಈ 8 ಟಿಕೆಟ್ಗಳನ್ನು ವಾಪಸ್ ಕೊಡುತ್ತೇನೆ ಅಂತ ಆತ ರಿಂಪಿಗೆ ಹೇಳಿದನು. ಆಗ ಪಕ್ಕದ ಮನೆಯವರಿಂದ ಎರವಲು ಹಣವನ್ನು ಪಡೆದು ಟಿಕೆಟ್ಗಳನ್ನು ಖರೀದಿಸಿದಳು.

ಮುಂದೆ ಕೆಲವೇ ದಿವಸಗಳ ನಂತರ ಲಾಟರಿಯವನು ಬಂದು ಹೇಳಿದ. ನಿಮಗೆ ಲಾಟರಿ ಹೊಡೆದಿದೆ ಜೊತೆಗೆ ಈ ವರ್ಷದ ಬಂಪರ್ ಪಾರಿತೋಷಕವು ಸಹಿತ ನಿಮ್ಮ ಹೆಸರಿಗೆ ಬಂದಿದೆ ಎಂದು ಹೇಳಿದನು. ಇದನ್ನು ಕೇಳಿ ತಾಯಿ ಆನಂದದಿಂದ ದೇವರ ದಯೆಯಿಂದ ನಮ್ಮ ಕಷ್ಟಗಳೆಲ್ಲ ದೂರವಾದವು ಎಂದು ಸಮನೆ ದೇವರನ್ನು ನೆನೆಯುತ್ತಿದ್ದಾಳೆ ಎಂದು ಮಗಳು ಹೇಳುತ್ತಾಳೆ.