OMG! ರಸ್ತೆ ಗುಂಡಿಯಲ್ಲಿ ಸಿಲುಕಿದ ಟ್ರಕ್ ನ್ನು ಹೊರ ತೆಗೆಯುವ ಜಟಾಪಟಿಯಲ್ಲಿ ಏನಾಯಿತು ನೋಡಿ ಈ Viral Video!

ಕಚ್ಚಾ ರಸ್ತೆಗಳು ಒಮ್ಮೊಮ್ಮೆ ಚಾಲಕನಿಗೆ ತುಂಬಾ ಸಂಕಟಕ್ಕೆ ತಳ್ಳುತ್ತವೆ. ವಾಹನಗಳು ಯಾವುದೇ ಆಗಿರಲಿ ಕಚ್ಚಾ ರಸ್ತೆಗಳ ಕಾರಣದಿಂದ ಸೈಕಲ್, ಬೈಕ್, ಅಥವಾ ಫೋರ್ ವೀಲರ್ ಇಲ್ಲವೇ ದೊಡ್ಡ ದೊಡ್ಡ ವಾಹನಗಳು ಕೆಲವೊಮ್ಮೆ ತುಂಬಾ ಸಮಸ್ಯೆಗೆ ಎಡೆ ಮಾಡಿಕೊಡುತ್ತವೆ. ಇಂಥ ಸಮಯದಲ್ಲಿ ಚಿಕ್ಕ ವಾಹನಗಳಾದರೆ ಯಾರೊಬ್ಬರ ಸಹಾಯದಿಂದಾದರೂ ತಳ್ಳುತ್ತಾ ಅಲ್ಲಿಂದ ವಾಹನವನ್ನು ಕಿತ್ತಿ, ಎತ್ತಿ ಅಥವಾ ತಳ್ಳಿಕೊಂಡು ಬರಬಹುದು. ಆದರೆ ಅಂತ ಸ್ಥಳಗಳಲ್ಲಿ ದೊಡ್ಡ ದೊಡ್ಡ ವಾಹನಗಳು ಸಿಲುಕಿಕೊಂಡರೆ ಅಂತ ವಾಹನಗಳನ್ನು ಅಲ್ಲಿಂದ ತೆಗೆಯುವುದು ತುಂಬಾ ಕಷ್ಟವಾಗುತ್ತದೆ. ಆಗ ಆ ಸಮಯದಲ್ಲಿ ಜೆಸಿಬಿ ಅಥವಾ ಕ್ರೇನ್ ಗಳ ಸಹಾಯ ಪಡೆಯಬೇಕಾಗುತ್ತದೆ. ಇಲ್ಲಿ ತೋರಿಸುವ ವಿಡಿಯೋ ಇದೇ ವಿಷಯಕ್ಕೆ ಸಂಬಂಧಪಟ್ಟದ್ದಾಗಿದೆ.

ವಿಡಿಯೋದಲ್ಲಿ ಒಂದು ದೊಡ್ಡ ಟ್ರಕ್ ರಸ್ತೆ ಮಧ್ಯದಲ್ಲಿರುವ ಗುಂಡಿಯಲ್ಲಿ ಸಿಲುಕಿದೆ. ಈ ರಸ್ತೆಯ ಮಧ್ಯದ ಗುಂಡಿಯಲ್ಲಿ ಸಿಲುಕಿರುವ ಟ್ರಕ್ ನ್ನು ಎಳೆದು ತೆಗೆಯುವ ಸಲುವಾಗಿ ಜೆಸಿಬಿ ಸಹಾಯವನ್ನು ಪಡೆಯಲಾಗಿದೆ. ಆದರೆ ಈ ಪ್ರಯತ್ನದಲ್ಲಿ ಟ್ರಕ್ಕಿನ ಮುಂದಿನ ಭಾಗವು ಕಿತ್ತಿ ಬಂದಿದೆ.

ಈ ವಿಡಿಯೋವನ್ನು ಟ್ವಿಟರ್ ನಲ್ಲಿ Fred Schultz @fred035schultz ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು. ಟ್ರಕ್ ನ ಮುಂದಿನಭಾಗ ಯಾವ ರೀತಿ ಡ್ಯಾಮೇಜ್ ಆಗಿದೆ.

ವಿಡಿಯೋ ನೋಡಿ…

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ. ವಿಡಿಯೋ ನೋಡಿ ಯೂಸರ್ ಗಳಿಗೆ ತಮ್ಮ ನಗುವನ್ನು ತಡೆಯುವುದು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಈ ವಿಡಿಯೋವನ್ನು 15 ಸಾವಿರದವರೆಗೆ ವೀಕ್ಷಿಸಲಾಗಿದೆ.