OMG! ಒಂದು ಹಲ್ಲಿಯನ್ನು ಹಿಡಿಯಲು ಏಕಕಾಲಕ್ಕೆ ಬಂದ ಅಸಂಖ್ಯಾತ ಹಾವುಗಳು; ಚಾಕಚಕ್ಯತೆಯಿಂದ ತನ್ನ ಜೀವ ಉಳಿಸಿಕೊಂಡ ಹಲ್ಲಿ! Viral Video
ವೀಡಿಯೋ ಒಂದನ್ನು ನೋಡುವಾಗ ಅದ್ಭುತ ಅನುಭವ ನಿಮಗೆ ಆಗಬೇಕು, ಮೈ ಜುಂ ಎನಿಸಬೇಕು ಕುತೂಹಲವನ್ನು ಕೆರಳಿಸಿ ಓ ಮೈ ಗಾಡ್ ಎಂದು ಉದ್ಗರಿಸಬೇಕಾದರೆ ಅದೊಂದು ನಿಜಕ್ಕೂ ಅತ್ಯದ್ಭುತ ವೀಡಿಯೋ ಆಗಿರಬೇಕು. ಇಂತಹ ವೀಡಿಯೋಗಳು ಸಿನಿಮಾಗಳ ದೃಶ್ಯಗಳಲ್ಲೋ, ಸ್ಪೆಶಲ್ ಎಫೆಕ್ಟ್ ನೀಡಿ ಜಾದೂ ಸೃಷ್ಟಿಸಿದ ದೃಶ್ಯಗಳಲ್ಲಿ ನಾವು ನೋಡಬಹುದು. ಆ ಸನ್ನಿವೇಶವನ್ನು ನೋಡುವಾಗ ಉತ್ಕಂಟತೆಯು ನಮ್ಮನ್ನು ಹುಚ್ಚೆಬ್ಬಿಸಿ ಬಿಡುತ್ತದೆ. ಅಂತಹ ವೀಡಿಯೋಗಳು ಅಪರೂಪಕ್ಕೊಮ್ಮೆ ನಮಗೆ ನೋಡಲು ಸಿಗುತ್ತದೆ. ಅಲ್ಲದೇ ಅವು ಇಡೀ ಜಗತ್ತನ್ನೇ ತಮ್ಮ ಕಡೆ ಸೆಳೆದು, ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿ ಬಿಡುತ್ತವೆ. ಈಗ ನಾವು ಹೇಳಲು ಹೊರಟಿರುವ ವೀಡಿಯೋ ಕೂಡಾ ಒಂದು ಅಂತಹುದೇ ಅದ್ಭುತವಾದ ವೀಡಿಯೋ. ಬಹುಶಃ ನೋಡಿದ ಮೇಲೆ ನೀವು ಕೂಡಾ ಕೊನೆಗೆ ಹೌದು ಎನ್ನಲೇಬೇಕಾದಂತಹ ವೀಡಿಯೋ ಇದು.
ಇದು ಯಾವುದೇ ಸಿನಿಮಾ ದೃಶ್ಯವಲ್ಲ, ಇಲ್ಲಿ ಯಾವುದೇ ಸ್ಪೆಶಲ್ ಎಫೆಕ್ಟ್ ಇಲ್ಲ. ಡೈಲಾಗ್ ಗಳು, ಹಾಡುಗಳು ಏನೂ ಇಲ್ಲ. ಆದರೆ ಪ್ರಕೃತಿಯ ನಡುವೆ ನಡೆದ ಈ ಸನ್ನಿವೇಶದಲ್ಲಿ ರೋಚಕತೆ, ಕುತೂಹಲ, ಆಸಕ್ತಿ, ಚೇಸಿಂಗ್ , ಮೈ ನವಿರೇಳುವ ಕೌತುಕ, ಉತ್ಕಂಟಭರಿತ ಎನಿಸುವ ದೃಶ್ಯಗಳು ಎಲ್ಲಾ ಕೂಡಾ ಭರ್ಜರಿಯಾಗಿ ತುಂಬಿ ತುಳುಕುತ್ತಿವೆ. ಸೆಪ್ಟೆಂಬರ್ 14 ರಂದು ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಎರಡು ಲಕ್ಷಕ್ಕಿಂತ ಅಧಿಕ ಜನರು ನೋಡಿದ್ದು, ಮೂರ ಲಕ್ಷ ವೀಕ್ಷಣೆಗಳತ್ತ ದಾಪುಗಾಲು ಹಾಕುತ್ತಿದ್ದು,ಮೂರು ಸಾವಿರ ದಾಟಿದ ಇಷ್ಟಗಳು, ಒಂದು ಸಾವಿರ ದಾಟಿ ಕಾಮೆಂಟ್, ರೀ ಟ್ವೀಟ್ ಗಳು ವೀಡಿಯೋದ ಜನಪ್ರಿಯತೆಯ ಸಾಕ್ಷಿಯಾಗಿದೆ.
ವೀಡಿಯೋದಲ್ಲಿ ಹಲ್ಲಿ ಜಾತಿಯ ಪ್ರಾಣಿಯೊಂದು ಸಾಗರ ತೀರದ ಬಂಡೆಯ ಮೇಲೊಂದರಿಂದ ಇಳಿದು ಕೆಳಗೆ ಬರುತ್ತದೆ. ಅದು ಇಳಿದು ಬಂದ ಸ್ಥಳವು ಒಂದು ಭಯಾನಕ ಹಾವುಗಳೇ ತುಂಬಿರುವ ದ್ವೀಪದಂತೆ ಇದೆ. ಅದಕ್ಕಿಂತಲೂ ರೋಚಕ ಏನೆಂದರೆ ಈ ಹಾವುಗಳು ಆ ಪ್ರಾಣಿ ಯನ್ನು ಹಿಡಿಯಲು ಮಾಡಿದ ಹುನ್ನಾರ. ಅದನ್ನು ನೋಡಿದರೆ ಮಾತು ಹೊರಗೆ ಬರುವುದಿಲ್ಲ. ಮೈಂಡ್ ಬ್ಲಾಂಕ್ ಆಗಿ ಬಿಡುತ್ತದೆ ನಮಗೆ. ಹಲ್ಲಿಯಂತಹ ಆ ಪ್ರಾಣಿ ಅಲ್ಲಿಗೆ ಬಂದಾಗ ಅಸಂಖ್ಯಾತ ಹಾವುಗಳು ತಾವಿದ್ದ ಬಂಡೆಗಳ ಸಂದಿಗೊಂದಿಗಳಿಂದಲೇ ತಲೆ ಎತ್ತಿ ಒಮ್ಮೆ ಅದನ್ನು ಗಮನಿಸಿ ಮತ್ತೆ ಎಲ್ಲವೂ ಸದ್ದಿಲ್ಲದಂತೆ ಬಂಡೆಗಳ ಹಿಂದೆ ಸೇರಿ ಬಿಡುತ್ತವೆ.
ಆಗ ಹಲ್ಲಿಯಂತಹ ಪ್ರಾಣಿಗ ಗಮನವನ್ನು ಬೇರೆಡೆ ಸೆಳೆಯಲು ಒಂದು ಹಾವು ಅದರ ಮುಂದೆ ಹರಿದು ಹೋಗುತ್ತದೆ, ಆದರೆ ಅದು ಹಲ್ಲಿಯಂತಹ ಪ್ರಾಣಿಯ ಮೇಲೆ ಯಾವುದೇ ಅಟ್ಯಾಕ್ ಮಾಡುವುದಿಲ್ಲ. ಆದರೆ ಅಲ್ಲೇ ಇದೆ ಗಮತ್ತು. ಹಾವು ತನ್ನ ಮುಂದೆ ಸರಿದು ಹೋಗುವುದನ್ನು ನೋಡುತ್ತಿದ್ದ ಅದನ್ನು ಹಿಡಿಯಲು ಹಿಂದಿನಿಂದ ಹಾವೊಂದು ಸರಸರನೆ ಬರುತ್ತದೆ. ಆದರೆ ಆ ಹಲ್ಲಿಜಾತಿಯ ಪ್ರಾಣಿ ಕೂಡಾ ಚಾಕಚಕ್ಯತೆಯಿಂದ ತಪ್ಪಿಸಿಕೊಂಡು ಓಡಲು ಆರಂಭಿಸಿದ ಕೂಡಲೇ ಅಡಗಿದ್ದ ಹಾವುಗಳೆಲ್ಲಾ ಏಕ ಕಾಲಕ್ಕೆ ಧಾಳಿ ಇಡುತ್ತದೆ. ಆ ಸನ್ನಿವೇಶ ನೋಡುವವರ ಹೃದಯಕ್ಕೆ ಒಂದು ತಲ್ಲಣ ಉಂಟು ಮಾಡಿಬಿಡುತ್ತದೆ.
ವಿಡಿಯೋ ನೋಡಿ….
Possibly the greatest scene in documentary history. Incredible. pic.twitter.com/hSUUQQdBPG
— Nature & Animals 🌴 (@AnimalsWorId) September 14, 2020
ಒಂದು ಹಂತದಲ್ಲಿ ಆ ಪ್ರಾಣಿ ಹಾವಿಗೆ ಸಿಕ್ಕೇ ಬಿಟ್ಟಿತು ಎನ್ನುವಾಗಲೇ ಅದು ತಪ್ಪಿಸಿಕೊಂಡು ಬಂಡೆಗಳನ್ನು ಏರಿ ಒಬ್ಬ ವೀರನು ರಾಕ್ಷಸರ ಗುಂಪನ್ನು ಮೀರಿ ಓಡುವಂತೆ ಅದು ಓಡುತ್ತದೆ. ಹಾವುಗಳು ಕೊನೆಯವರೆಗೂ ತಮ್ಮ ಪ್ರಯತ್ನ ಬಿಡದೆ ಅದನ್ನು ಹಿಡಿಯಲು ಪ್ರಯತ್ನ ಮಾಡಿ ವಿಫಲವಾಗುತ್ತದೆ. ಆ ಹಲ್ಲಿ ಜಾತಿಯ ಪ್ರಾಣಿಯು ಸೇಫಾಗಿ ಮೇಲೆ ಹೋಗುವವರೆಗೆ ವೀಡಿಯೋ ನೋಡುವವರು ಉಸಿರು ಬಿಗಿ ಹಿಡಿದು ನೋಡವಂತಿದೆ ವೀಡಿಯೋ. ವೀಡಿಯೋ ನೋಡಿದವರು ಕೂಡಾ ಪ್ರತಿಕ್ರಿಯೆಗಳನ್ನು ನೀಡುತ್ತಾ ಇದು ಅದ್ಭುತ, ವಿಸ್ಮಯ, ಉಸಿರು ಬಿಗಿ ಹಿಡಿದು ನೋಡಬೇಕು, ಭಯಾನಕ ಅನುಭವ ಇದು, ಎಂದೆಲ್ಲಾ ಹೇಳುತ್ತಿದ್ದಾರೆ.