ವಿಡಿಯೊ : ಆನ್ ಲೈನ್ ಕ್ಲಾಸ್ ನಲ್ಲಿ ಹೆಬ್ಬುಲಿ ಡೈಲಾಗ್! ಬೇಸತ್ತ ಉಪನ್ಯಾಸಕರಿಂದ ಆಡಳಿತ ಮಂಡಳಿಗೆ ದೂರು
ಇಂಥದೊಂದು ಘಟನೆ ಮೈಸೂರಿನಲ್ಲಿ ನಡೆದಿದೆ. ಕೆಲವು ಕಡೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಿಟಲೆ ಸಾಮಾನ್ಯವಾಗಿರುತ್ತೆ. ಆದರೆ ಆನ್ ಲೈನ್ ಕ್ಲಾಸ್ ನಲ್ಲೂ ಅವರ ಹಾವಳಿ ಮುಂದುವರೆದಿದೆ. ಇದರಿಂದ ಪಾಠ ಮಾಡಲು ಸಾಧ್ಯವಾಗದೇ ಅರ್ದಕ್ಕೆ ನಿಲ್ಲಿಸಿದ ಘಟನೆ ನಡೆದಿದೆ. ನಿರಂತರ ಐದು ನಿಮಿಷಗಳವರೆಗೆ ಅವರ ಕಾಟ ಮುಂದುವರೆಯಿತು. ಯಾವನೋ ಮಾಡಿದ ಈ ಕೆಲಸದಿಂದಾಗಿ ಉಳಿದ ವಿದ್ಯಾರ್ಥಿಗಳೂ ಪಾಠ ಕೇಳದೇ ಕೂರಬೇಕಾಯಿತು.
ಮೈಸೂರಿನ SBRR ಮಹಾಜನ ಕಾಲೇಜಿನವರು ತಮ್ಮ ವಿದ್ಯಾರ್ಥಿಗಳಿಗಾಗಿ ನಡೆಸಿಕೊಡುವ ಆನ್ ಲೈನ್ ಕ್ಲಾಸ್ ನಲ್ಲಿ ಇದು ನಡೆದಿದೆ. ಇದರಲ್ಲಿ ಮೊಟ್ಟ ಮೊದಲು ಹೆಬ್ಬುಲಿ ಡೈಲಾಗ್ ಡೆಲೆವರಿ ಆಯಿತು! ನಂತರ ಸುರುವಾಯಿತು ಕಾಟ. ಉಪನ್ಯಾಸಕರು ಎಷ್ಟು ಕರೆದರೂ ರಿಯಾಕ್ಟ್ ಮಾಡದೇ ಅವರು ತಮ್ಮ ಪಾಡಿಗೆ ತಾವು ಕಿರಿಕಿರಿ ಮಾಡುತ್ತಲೇ ಇದ್ದರು.
ಬಹುಶಃ ಅವರು ಯೂಟ್ಯುಬ್ ಓಪನ್ ಮಾಡಿ ಸಿಕ್ಕ ಸಿಕ್ಕ ವಿಡಿಯೊ, ಹಾಡುಗಳನ್ನು ಪ್ಲೆ ಮಾಡತೊಡಗಿದರು. ಶಿಕ್ಷಕರು ಹೇ ಶಶಾಂಕ್ ಶಶಾಂಕ್ ಏನೋ ಅದು ಅಂತ ಕರೆದರೂ ಆತ ರಿಪ್ಲೆ ಮಾಡಲಿಲ್ಲ. ಯಾರೊ ಇದು ಹೆಬ್ಬುಲಿಯಾಗ್ಬಿಟ್ಟಿದಿರಿ ಅಂದರೂ ಅವರು ಸುಮ್ಮನಾಗಲಿಲ್ಲ. ವಿವಿದ ಹಾಡು – ಡೈಲಾಗ್ ಹಾಕಿ ಆನ್ ಲೈನ್ ಕ್ಲಾಸ್ ಹಾಳು ಮಾಡಿದರು.
ಎಲ್ಲ ಅಡಿಯೊ ಮುಗಿದ ಮೇಲೆ ಯೂಟ್ಯೂಬ್ ಚಾನೆಲ್ ನಲ್ಲಿ ಬರುವ ಅಡುಗೆ ಕಾರ್ಯಕ್ರಮಗಳ ಪ್ರಸಾರ ಸುರುವಾಯಿತು. ಅಲ್ಲಿಗೆ ಕ್ಲಾಸ್ ನಿಲ್ಲಿಸಿದ ಉಪನ್ಯಾಸಕರು ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಯಾರೊ ಒಬ್ಬನ ಸಲುವಾಗಿ ಉಳಿದೆಲ್ಲರ ಕ್ಲಾಸ್ ಮಿಸ್ ಆಯಿತು. ಇಷ್ಟವಿರದಿದ್ದರೆ, ಮ್ಯೂಟ್ ಇಟ್ಟು ತಮ್ಮ ಪಾಡಿಗೆ ತಾವಿರಬಹುದಿತ್ತು, ಆದರೆ ಇದು ಬೇಕೆಂದೇ ಮಾಡಿದ ಕಿತಾಪತಿಯಾಗಿದೆ.
ಕಾಲೇಜಿನ ಆಡಳಿತ ಮಂಡಳಿ ಈ ವಿಡಿಯೊವನ್ನು ತನ್ನ ಫೇಸ್ಬುಕ್ ಪೇಜ್ ನಲ್ಲಿ ಶೇರ್ ಮಾಡಿಕೊಂಡು, ವಿದ್ಯಾರ್ಥಿಗಳೆ ದಯವಿಟ್ಟು ಈ ರೀತಿ ಮಾಡಬೇಡಿ ಎಂದು ವಿನಂತಿಸಿದೆ. ಆ ವಿಡಿಯೊ ಮೇಲಿದೆ ನೋಡಿ.
-Team Infotrend