Online Study ಗಾಗಿ ಮೊಬೈಲ್ ಕೊಟ್ಟ ಪೋಷಕರು, PUBG ಆಟದಲ್ಲಿ 16 ಲಕ್ಷ ಉಡಾಯಿಸಿದ ಮಗ!
ಘಟನೆ ಪಂಜಾಬ್ ನ ಚಂದಿಗಡ್ ನಲ್ಲಿ ವರದಿಯಾಗಿದೆ. ಸದ್ಯಕ್ಕೆ ಕೊರೊನ ಕಾರಣದಿಂದಾಗಿ ಮಕ್ಕಳ ಶಿಕ್ಷಣವೆಲ್ಲ ಆನ್ ಲೈನ್ ನಲ್ಲೇ ನಡೆದಿದೆ, ಹೀಗಾಗಿ ಮಕ್ಕಳ ಕೈಯಲ್ಲಿ ತಾನಾಗಿಯೇ ಮೊಬೈಲ್ ಬಂದಿದೆ. ಎಡವಟ್ಟು ನಡೆದಿದ್ದು ಅಲ್ಲಿಯೇ.
ಮಗ ಅಭ್ಯಾಸ ಮಾಡುತ್ತಿರಬೇಕು ಎಂದು ಪೋಷಕರು ಗಮನ ಹರಿಸಿಲ್ಲ, ಆದರೆ ಮಗ PUBG ಯಲ್ಲಿ ಫುಲ್ ಬಿಜಿ. 17 ವರ್ಷದ ಮಗನಿಗೆ ಆಟದ ಸಿಹಿ ತಲೆಗೇರಿ ಬಿಟ್ಟಿದೆ. ಇದೇ ಕಾರಣದಿಂದ ತಂದೆಯ ಅಕೌಂಟ್ ನಿಂದ ಯಾರಿಗೂ ತಿಳಿಯದೆ ದಿಢೀರ್ 16 ಲಕ್ಷ ರೂಪಾಯಿಗಳನ್ನು ಮಗ ಮಠಾಶ್ ಮಾಡಿ ಬಿಟ್ಟಿದ್ದಾನೆ. ವರದಿಯ ಪ್ರಕಾರ ಹುಡುಗನ ಹತ್ತಿರ ಮೂರು ಬ್ಯಾಂಕ್ ಗಳ ಎಕ್ಸಿಸ್ ಇತ್ತು. ಈ ಅಕೌಂಟ್ ಗಳ ಉಪಯೋಗ PUBG ಆಟಕ್ಕೆ ಖರ್ಚು ಮಾಡಲು ಮಾಡುತ್ತಿದ್ದ.
ತಂದೆಯ ಈ ಹಣವನ್ನು ಮಗನು ಆಟಕ್ಕಾಗಿ ಮಾಡಿಬಿಟ್ಟ. PUBG ಗೇಮ್ ಅಪ್ ಗ್ರೇಡ್ ಮಾಡಲು ಹಣ ಖರ್ಚು ಮಾಡಿದ್ದಾನಂತೆ, ಅಷ್ಟೇ ಅಲ್ಲ ಆತ ತನ್ನ ಗೆಳೆಯರ PUBG ಗೇಮ್ ಸಹ ಅಪ್ ಗ್ರೇಡ್ ಮಾಡಲು ಈತನೇ ಹಣ ಖರ್ಚು ಮಾಡಿದ್ದಾನಂತೆ.

ಈ ಹಣ ಖರ್ಚು ಆದದ್ದು ಗೊತ್ತಾಗಿದ್ದು ಬ್ಯಾಂಕ್ ಅಕೌಂಟ್ ಸ್ಟೇಟ್ ಮೆಂಟ್ ನಿಂದ. ನಮಗೆ ಯಾವಾಗ ಈ ಬಗ್ಗೆ ಮಾಹಿತಿ ದೊರೆಯಿತು ಅಲ್ಲಿಯ ವರೆಗೆ ಈತ 16 ಲಕ್ಷ ರೂಪಾಯಿಗಳನ್ನು ನಾವು ಕಳೆದುಕೊಂಡಿದ್ದೆವು ಎಂದು ಆತನ ತಂದೆ ಹೇಳುತ್ತಾರೆ.
ಮಗ ತಂದೆಗೆ ಹೇಳಿದ್ದು, ಏನೆಂದರೆ ತನ್ನ ಸ್ಟಡಿ ಸಲುವಾಗಿ ಮೊಬೈಲ್ ಉಪಯೋಗ ತುಂಬಾ ಹೊತ್ತಿನ ವರೆಗೆ ಮಾಡುತ್ತಿದ್ದೇನೆಂದು. ಆದರೆ ಆತ ಸ್ಟಡಿ ಮಾಡದೆ ದಿನಾಲು ಸುಮಾರು ಗಂಟೆಗಳ ವರೆಗೆ PUBG ಆಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದನು, ಜೊತೆಗೆ ತಂದೆ ಗಳಿಸಿದ ಕಷ್ಟದ ಹಣ ಕೂಡ
ತಾಯಿಯ ಫೋನ್ ನಿಂದ ಮಾಡುತ್ತಿದ್ದ ಟ್ರಾಂಜಾಕ್ಷನ್.
ಹುಡುಗನ ತಂದೆ ಸರಕಾರಿ ಆಫೀಸಿನಲ್ಲಿ ಕೆಲಸಕ್ಕೆ ಇದ್ದಾರೆ. ತಂದೆ ಮನೆಯಿಂದ ದೂರ ನೌಕರಿ ಮಾಡುತ್ತಾರೆ, ಮಗ ತಾಯಿಯ ಜೊತೆಗೆ ಊರಲ್ಲಿರುತ್ತಾನೆ. ಮಗ ಎಲ್ಲ ಟ್ರಾಂಜಾಕ್ಷನ್ ತಾಯಿಯ ಫೋನ್ ನಿಂದಲೇ ಮಾಡುತ್ತಿದ್ದ. ಇದೇ ಮೊಬೈಲ್ ನ್ನು PUBG ಆಡಲು ಸಹಿತ ಉಪಯೋಗಿಸುತ್ತಿದ್ದ. ಬ್ಯಾಂಕಿನ ಟ್ರಾಂಜಾಕ್ಷನ್ ಪೂರ್ಣವಾದ ಮೇಲೆ ಮೆಸೇಜ್ ಗಳನ್ನು ಡಿಲೀಟ್ ಮಾಡುತ್ತಿದ್ದ. ತಂದೆ ತನ್ನ ಮಗನ ಭವಿಷ್ಯಕ್ಕಾಗಿ ಮತ್ತು ಮೆಡಿಕಲ್ ಅವಶ್ಯಕತೆಯ ಸಲುವಾಗಿ ಹಣವನ್ನು ಕೂಡಿಸಿಟ್ಟಿದ್ದ. ಮಗ ಮಾತ್ರ ತನ್ನ ಅಭ್ಯಾಸದ ನೆಪ ಮಾಡಿ ತಂದೆಯ ಗಳಿಸಿದ ಕಷ್ಟದ ದುಡ್ಡನ್ನು ನೀರುಪಾಲು ಮಾಡಿಬಿಟ್ಟ.
ಪ್ರಿಯ ವಾಚಕರೇ, ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವಾಗ ತುಂಬಾ ಎಚ್ಚರಿಕೆ ವಹಿಸುವದು ಮತ್ತು ಮಕ್ಕಳು ಸರಿಯಾಗಿ ಅಭ್ಯಾಸವನ್ನೇ ಮಾಡುತ್ತಿದ್ದಾರಾ ಇಲ್ಲ ಮತ್ತೆ ಬೇರೆ ಏನಾದರೂ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಕೊಡುವದು ಪೋಷಕರ ಆದ್ಯ ಕರ್ತವ್ಯ. ಸ್ವಲ್ಪ ಲೋಪವಾದರೆ ಜೀವನವಿಡಿ ಗಳಿಸಿದ ದುಡ್ಡು ಯಾರದೋ ಪಾಲಿಗೆ ಹೋಯಿತೆಂದರೆ ಮನಸ್ಸು ವಿಚಲಿತವಾಗಿ ಬಿಡುತ್ತದೆ. ಆದ್ದರಿಂದ ಮೊದಲೇ ಜಾಣರಾಗುವದು ಲೇಸು.