ಆಪ್ಟಿಕಲ್ ಇಲ್ಯೂಷನ್; ಟಾಪ್ 9 ಅಮೋಘ ನೈಸರ್ಗಿಕ ಚಿತ್ರಗಳು; ನಿಸರ್ಗ ಸೂಪರ್ ಆರ್ಟಿಸ್ಟ್..!

ನಿಸರ್ಗ ನಿಜಕ್ಕೂ ಅದ್ಭುತವಾದ ಕಲೆಗಾರನಾಗಿದ್ದಾನೆ. ನಿಸರ್ಗದ ಕಲಾಕೃತಿಯ ಮುಂದೆ ಎಲ್ಲ ಕಲಾಕೃತಿಗಳು ಧೂಳಿಪಟ. ಆಪ್ಟಿಕಲ್ ಇಲ್ಯೂಷನ್ ಗಳ ನಿಸರ್ಗ ತಯಾರಿಸಿದ ಸುಂದರ ಹಾಗೂ ಅದ್ಭುತವಾದ 9 ಕಲಾಕೃತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ತಂದಿದ್ದೇವೆ ಒಮ್ಮೆ ನೋಡಿ.

1. ಈ ಚಿತ್ರದಲ್ಲಿ ನಿಮಗೆ ಏನು ಕಂಡು ಬರುತ್ತದೆ? ಒಂದು ದೊಡ್ಡದಾದ ಕಣ್ಣು ಕಂಡು ಬರುತ್ತಿದೆ ಅಲ್ಲವೆ? ಇದನ್ನು ಯಾವ ಕಲೆಗಾರನಿಂದಲೂ ತಯಾರಿಸಲು ಸಾಧ್ಯವಿಲ್ಲ. ನಿಸರ್ಗ ತನ್ನಂತಾನೆ ತಯಾರಿಸಿದೆ. ಹೇಗಿದೆ ನಿಸರ್ಗದ ಮೋಡಿ?

2. ಜಪಾನೀಸ್ ಅಥವಾ ಚೈನೀಸ್ ಮನುಷ್ಯ ಮುಖ ಹೋಲುವ ಚಿತ್ರ...
ನಿಸರ್ಗ ತಯಾರಿಸಿದ ಈ ಚಿತ್ರದಲ್ಲಿಯ ವ್ಯಕ್ತಿ ಜಪಾನೀಸ್ ಅಥವಾ ಚೈನೀಸ್ ಮುಖದ ತರ ಇದೆ. ಹಕ್ಕಿಗಳ ರೆಕ್ಕೆಗಳು ಇಲ್ಲಿ ವ್ಯಕ್ತಿಯ ಕಣ್ಣುಗಳಂತೆ ಕಂಡುಬರುತ್ತಿವೆ. ಮತ್ತು ನೀರಿನಲ್ಲಿ ಕಂಡು ಬರುತ್ತಿರುವ ಬೋಟ್ ಆತನ ಸ್ಮೈಲಿ ತುಟಿಗಳಾಗಿವೆ.

3. ಡ್ಯಾನ್ಸರ್ ಟ್ರೀ.
ಪ್ರಸ್ತುತ ಚಿತ್ರದಲ್ಲಿ ಮರ ಡಾನ್ಸ್ ಮಾಡುತ್ತಿರುವ ರೀತಿಯಲ್ಲಿ ನಿಂತಿದೆ ಎನ್ನುವ ಹಾಗೆ ಕಂಡುಬರುತ್ತದೆ. ಮಹಿಳೆಯೊಬ್ಬಳು ತನ್ನ ಕಾಲ ಮೇಲೆ ಡಾನ್ಸ್ ಮಾಡುವ ಪೊಜಿಶನ್ ನಲ್ಲೇ ನಿಂತಿದ್ದಾಳೆ ಎಂಬಂತೆ ಕಂಡುಬರುತ್ತಿದೆ.

4. ಮನುಷ್ಯನ ಮುಖ ಹೊತ್ತ ಮರ…
ಪ್ರಸ್ತುತ ಚಿತ್ರದಲ್ಲಿಯ ಮರವು ಸೇಮ್ ಟು ಸೇಮ್ ಮನುಷ್ಯನ ಮುಖದ ಹಾಗೆ ಕಂಡುಬರುತ್ತದೆ. ಹೇಗಿದೆ ಫ್ರೆಂಡ್ಸ್ ನಿಸರ್ಗ ನಿರ್ಮಿಸಿದ ಈ ಅದ್ಭುತ ಕಲಾಕೃತಿ?

5. ಕುದುರೆಯ ಮುಖ ಹೋಲುವ ಶಿಖರ..
ಈ ಚಿತ್ರದಲ್ಲಿ ಕಂಡು ಬರುತ್ತಿರುವ ಶಿಖರ ಕುದುರೆಯ ಮುಖವನ್ನು ಹೋಲುತ್ತಿದೆ.

6. ವಾಟರ್ ಫಾಲ್.
ಈ ಅದ್ಭುತವಾದ ಚಿತ್ರವು ಮಾರಿಷಸ್ ದೇಶದಲ್ಲಿಯದಿದೆ. ಜಗತ್ತಿನಲ್ಲಿ ಜನಪ್ರಿಯವಾದ ಈ ಸ್ಥಳ ನೋಡಲು ತುಂಬಾ ಚೆನ್ನಾಗಿದೆ. ಜೊತೆಗೆ ನಿಸರ್ಗ ನಿರ್ಮಿಸಿದ ಅದ್ಭುತವಾದ ದೃಶ್ಯ ಇಲ್ಲಿ ನೋಡಬಹುದಾಗಿದೆ.

7. ಇದು ಜಲಪಾತವಲ್ಲ ಅಗ್ನಿಪಾತ...
ಇಲ್ಲಿ ನೋಡುತ್ತಿರುವ ಫೋಟೋದಲ್ಲಿ ಯಾವುದೇ ರೀತಿಯ ಬೆಂಕಿ ಅಥವಾ ಲಾವಾರಸ ಕೆಳಗೆ ಬೀಳುತ್ತಿಲ್ಲ. ಇಲ್ಲಿಯ ನೀರಿನಲ್ಲಿ ಕಂಡು ಬರುತ್ತಿರುವುದು ಸೂರ್ಯನ ಕಿರಣಗಳ ಪ್ರತಿಬಿಂಬವಾಗಿದೆ.

8. ಎನ್ ಆಂಗ್ರಿ ಫ್ಲವರ್
ಆಂಗ್ರಿ ಬರ್ಡ್ ಆಟ ಇದು ಮೊಬೈಲ್ನಲ್ಲಿ ಒಂದು ಜನಪ್ರಿಯ ಆಟವಾಗಿದೆ. ಸೇಮ್ ಟು ಸೇಮ್ ಆಂಗ್ರಿ ಬರ್ಡ್ ರೀತಿಯಲ್ಲಿಯೇ ಕಾಣುತ್ತಿರುವ ನಿಸರ್ಗ ನಿರ್ಮಿಸಿದ ಈ ಹೂವು ಹೇಗಿದೆ ನೀವೇ ಹೇಳಿ.

9. ಲವರ್ಸ್ ಇನ್ ದ ಮೌಂಟೇನ್...
ಪ್ರಸ್ತುತ ಚಿತ್ರದಲ್ಲಿ ಶಿಖರಗಳು ಹಿಮದಿಂದ ಮುಚ್ಚಿ ಹೋಗಿರುವುದು ಕಂಡು ಬರುತ್ತಿದೆ. ಆದರೆ ಈ ನಿಸರ್ಗ ನಿರ್ಮಿಸಿದ ಚಿತ್ರದಲ್ಲಿ ಲವರ್ಸ್ ಗಳ ಎರಡು ಸುಂದರವಾದ ಮುಖಗಳು ಕಂಡುಬರುತ್ತಿವೆ.