ವಿಡಿಯೋ : ರಸ್ತೆ ಮಧ್ಯ ಟ್ಯಾಂಕರ್ ನಿಲ್ಲಿಸಿ ಆಕ್ಸಿಜನ್ ಹೊರಚೆಲ್ಲಿದ ಚಾಲಕ! ಕಾರಣವಾದರೂ ಏನು?
ಕೊರೋನ ಎರಡನೇ ಅಲೆ ಅಪ್ಪಳಿಸಿದಾಗಿನಿಂದ ಭಾರತ ಸರ್ಕಾರ ಕೊರೋನ ರೋಗಿಗಳನ್ನು ಸಂಭಾಳಿಸಲಾಗದೆ ಪೇಚಾಡುತ್ತಿದೆ. ಕೆಲವು ರಾಜ್ಯ ಸರ್ಕಾರಗಳು ಮೊದಮೊದಲು ಸಮರ್ಥವಾಗಿ ನಿಭಾಯಿಸಿದವಾದರೂ, ರೋಗಿಗಳ ಸಂಖ್ಯೆ ತೀರ ಹೆಚ್ಚಿದಾಗ ಅವೂ ಕೈ ಚೆಲ್ಲಿದವು. ಮುಖ್ಯವಾಗಿ ರೋಗಿಗಳಿಗೆ ಬೆಡ್ ಸಮಸ್ಯೆ ಎದುರಾಯಿತು. ದಿನಕ್ಕೆ ಲಕ್ಷಗಟ್ಟಲೆ ಪಾಸಿಟಿವ್ ಬಂದಾಗ ಅವರಿಗೆಲ್ಲ ಎಲ್ಲಿಂದ ಬೆಡ್ ಹೊಂದಿಸುವುದು?
ಎಲ್ಲ ಆಸ್ಪತ್ರೆಗಳು ತುಂಬಿದವು ಕಲ್ಯಾಣ ಮಂಟಪಗಳು, ಹಾಸ್ಟೆಲ್ ಗಳು, ಅತಿಥಿ ಗೃಹಗಳು, ಮಠಗಳು ಕೋವಿಡ್ ಸೆಂಟರ್ ಗಳಾಗಿ ಬದಲಾದವು. ಸರ್ಕಾರಗಳು ತಮ್ಮ ಶಕ್ತಿಮೀರಿ ಸೌಲಭ್ಯ ಒದಗಿಸತೊಡಗಿದವು. ಆದರೂ ಅಗಾಧ ಜನಸಂಖ್ಯೆಯ ನಮ್ಮ ದೇಶದಲ್ಲಿ ಒಮ್ಮೆಲೇ ಇಂಥ ವೈರಸ್ ಎ’ರ’ಗಿದಾಗ ಎದುರಿಸುವುದು ಸಾಮಾನ್ಯ ಸಂಗತಿಯಲ್ಲ.
ಎರಡನೇ ಅಲೆಯಲ್ಲಿ ಮುಖ್ಯವಾಗಿ ಕೊರೋನ ರೋಗಿಗಳನ್ನು ಕಾಡಿದ್ದು ಉಸಿರಾಟದ ಸಮಸ್ಯೆ. ಇದನ್ನು ನಿಬಾಯಿಸಲು ಸಾಕಷ್ಟು ಆಕ್ಸಿಜನ್ ಅಗತ್ಯವಿತ್ತು. ಅಷ್ಟೊಂದು ಉತ್ಪಾದನೆಯಾಗಲಿ ಸಾಗಣೆಯಾಗಲಿ ನಮ್ಮಲ್ಲಿ ಇರಲಿಲ್ಲ. ಇದನ್ನು ಅರಿತ ಮಿತ್ರ ರಾಷ್ಟ್ರಗಳು ವಿವಿದ ಮಾರ್ಗವಾಗಿ ಆಕ್ಸಿಜನ್ ಒದಗಿಸಿದವು, ಕ್ರಮೇಣ ಭಾರತ ಕೂಡ ಸಾಕಷ್ಟು ಉತ್ಪಾದಿಸತೊಡಗಿತು.
ಆದರೆ ಈ ಮಧ್ಯೆ ಆಕ್ಸಿಜನ್ ಸಾಗಣೆ ಮಾಡುವಾಗ ಟ್ಯಾಂಕರ್ ಚಾಲಕನೊಬ್ಬ ಮಾಡಿದ ಹೇ’ಯ ಘಟನೆಯ ವಿಡಿಯೊ ಈಗ ವೈರಲ್ ಆಗುತ್ತಿದೆ.

ಕರೋನದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಕಂಡುಬರುತ್ತಿದೆ. ರೋಗಿಗಳಿಗೆ ಆಮ್ಲಜನಕವನ್ನು ವ್ಯವಸ್ಥೆಗೊಳಿಸಲು ಸರ್ಕಾರಗಳು – ಆಡಳಿತ ಪೇಚಾಡುತ್ತಿದ್ದರೆ, ಉತ್ತರ ಪ್ರದೇಶದ ಘತಂಪುರ ಪಟ್ಟಣದ ಮೊಘಲ್ ರಸ್ತೆಯ ಬ್ಲಾಕ್ ಆಫೀಸ್ ಬಳಿ ಟ್ಯಾಂಕರ್ ಚಾಲಕ ಆಮ್ಲಜನಕವನ್ನು ಗಾಳಿಯಲ್ಲಿ ಹಾರಿ ಬಿಟ್ಟಿದ್ದಾನೆ.
ಈ ಘಟನೆಯ ವಿಡಿಯೋ ವೈರಲ್ ಆಗುವ ಮೂಲಕ ಗೊಂದಲ ಸೃಷ್ಟಿಸಿದೆ. ಮಾಹಿತಿಯ ಪ್ರಕಾರ ಟ್ಯಾಂಕರ್ ಪಶ್ಚಿಮ ಬಂಗಾಳದ್ದು. ಅದರ ನೋಂದಣಿ ಬರಾಕ್ ಪುರದ ಖಜನ್ ಸಿಂಗ್ ಅವರ ಹೆಸರಿನಲ್ಲಿದೆ. ಈ ಸಂದರ್ಭದಲ್ಲಿ ಖಜನ್ ಸಿಂಗ್ ಅವರು ಟ್ಯಾಂಕರ್ ಹೊಂದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಸಂಖ್ಯೆಯನ್ನು ಅವರ ಹೆಸರಲ್ಲೇ ನೊಂದಾಯಿಸಲಾಗಿದೆ. ಅವರದು ಟ್ರಕ್ ಇದೆ, ಟ್ಯಾಂಕರ್ ಇಲ್ಲ!
ವೈರಲ್ ವೀಡಿಯೊದಲ್ಲಿ, ಹೆದ್ದಾರಿಯಲ್ಲಿ ಟ್ಯಾಂಕರ್ ನಿಂತು ಚಾಲಕ ಗಾಳಿಯಲ್ಲಿ ಆಮ್ಲಜನಕವನ್ನು ಹಾರಿಸುತ್ತಿರುವುದು ಕಂಡುಬರುತ್ತದೆ. ದಾರಿಹೋಕರು ನಿಲ್ಲಿಸಿ ವಿಚಾರಿಸಿದಾಗ, ಚಾಲಕ ನಳಿಕೆಯನ್ನು ಮುಚ್ಚಿ ಟ್ಯಾಂಕರ್ ತೆಗೆದುಕೊಂಡು ಭೋಗಾನಿಪುರದ ಕಡೆಗೆ ಹೊರಟನು.

ಬಹುಶ ಕೃತಕವಾಗಿ ಆಕ್ಸಿಜನ್ ಕೊರತೆ ಉಂಟು ಮಾಡಿ ಆಡಳಿತಕ್ಕೆ ಕೆ’ಟ್ಟ ಹೆಸರು ತರುವ ಉದ್ದೇಶ ಆ ಚಾಲಕನದ್ದಾಗಿರಬಹುದು. ಅಥವಾ ಆಕ್ಸಿಜನ್ ಅನ್ನು ಬೇಕೆಂತಲೇ ವೇಸ್ಟ್ ಮಾಡಿ ವಿ’ಕೃ’ತ ಖುಷಿಪಡುವ ವ್ಯಕ್ತಿತ್ವ ಆತನದ್ದಾಗಿರಬಹುದು. ಸದ್ಯಕ್ಕೆ ಕೊರೋನ ರೋಗಿಗಳ ಉಸಿರು ಎಂದು ಕರೆಯಲಾಗುವ ಆಕ್ಸಿಜನ್ ಅನ್ನು ಈ ರೀತಿ ಹಾಳು ಮಾಡಿದ್ದು ಗಂ’ಭೀ’ರ ಪ್ರಕರಣವಾಗಿದೆ.
ವೀಡಿಯೊದಲ್ಲಿ ಕಂಡುಬರುವ ಟ್ಯಾಂಕರ್ ಸಂಖ್ಯೆಯ ತನಿಖೆಯಲ್ಲಿ ವರ್ಕಾಪುರದ ಪಶ್ಚಿಮ ಬಂಗಾಳ ಜಿಲ್ಲೆಯ ಖಜನ್ ಸಿಂಗ್ ಅವರ ಪತ್ನಿ ಕುರ್ವಿಂದರ್ ಸಿಂಗ್ ಅವರ ಹೆಸರಿನಲ್ಲಿ ಆಕ್ಸಿಜನ್ ಟ್ಯಾಂಕರ್ ನೋಂದಾಯಿಸಲಾಗಿದೆ. ಈ ಸಂಖ್ಯೆ ತನ್ನ ಟ್ರಕ್ ಗೆ ಸೇರಿದೆ ಆದರೆ ಆತನ ಬಳಿ ಆಕ್ಸಿಜನ್ ಟ್ಯಾಂಕರ್ ಇಲ್ಲ ಎಂದು ಖಜನ್ ಸಿಂಗ್ ಫೋನ್ ನಲ್ಲಿ ತಿಳಿಸಿದ್ದಾರೆ.
ಆಕ್ಸಿಜನ್ ಟ್ಯಾಂಕರ್ ಗೆ ಆತನ ಟ್ರಕ್ ನ ಸಂಖ್ಯೆಯನ್ನು ಬರೆಸಲಾಗಿದೆ, ಇದು ಯಾಕೆ ಎಂಬುದು ತನಿಖೆಯ ನಂತರ ಗೊತ್ತಾಗಬೇಕಿದೆ. ವಿಶೇಷವೆಂದರೆ, ವೀಡಿಯೊ ವೈರಲ್ ಆದ ನಂತರ ಕೂಡ, ಸ್ಥಳೀಯ ಅಧಿಕಾರಿಗಳು ಘಟನೆಯನ್ನು ಲಘುವಾಗಿ ತೆಗೆದುಕೊಂಡರು. ಆದರೆ ಉನ್ನತ ಅಧಿಕಾರಿಗಳು ಪ್ರಶ್ನಿಸಿದಾಗ ಪೊಲೀಸ್ ಮತ್ತು ಆಡಳಿತ ಎಚ್ಚೆತ್ತರು.
कानपुर-जिस ऑक्सिजन के बिना लोग तड़प तड़प कर मर गये उसी को हवा में उड़ा दिया कमबख़्त ने. कड़ी कारवाई करें @AwasthiAwanishK @SavalRohit pic.twitter.com/zHE75IDycx
— Veeresh Pandey (@VeereshPandeyG) May 24, 2021
ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಲಾಗಿದೆ ಎಂದು ಎಸ್‌ಡಿಎಂ ತಿಳಿಸಿದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಯಾರೂ ದೂರು ನೀಡಿಲ್ಲ ಅಥವಾ ಯಾವುದೇ ದೂರು ಬಂದಿಲ್ಲ, ನಾವು ಯಾರನ್ನು ತನಿಖೆ ಮಾಡಬೇಕು ಎಂದು ಉಡಾಫೆಯಾಗಿ ಪ್ರಶ್ನಿಸಿದ್ದಾರೆ. ನಾಳೆ ನಾಡಿದ್ದು ಕಂಪ್ಲೀಟ್ ವಿಷಯ ಗೊತ್ತಾಗಬಹುದು, ವಿಡಿಯೊ ಮೇಲಿದೆ ನೋಡಿ.
-Team Infotrend