PAK vs AUS : ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರಿಗೆ ಪಾಕಿಸ್ತಾನದಲ್ಲಿ ತಿನ್ನಲು ಯಾವ ಫುಡ್ ಸಿಗುತ್ತಿದೆ ಗೊತ್ತಾ? ಲಾಭುಷೆನ್ ಶೇರ್ ಮಾಡಿದರು ಫೋಟೋ! ಅಯ್ಯೋ ಪಾಪ ಎನಿಸುತ್ತೆ…
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸದ್ಯ ಪಾಕಿಸ್ತಾನದ ಪ್ರವಾಸದಲ್ಲಿದೆ. 24 ವರ್ಷಗಳ ದೀರ್ಘ ಅವಧಿಯ ನಂತರ ಆಸ್ಟ್ರೇಲಿಯಾ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುತ್ತಿದೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಡ್ರಾ ದಲ್ಲಿ ಕೊನೆಗೊಂಡಿತು. ಫ್ಲ್ಯಾಟ್ ಪಿಚ್ ತಯಾರಿಸಿದ ಕಾರಣಕ್ಕಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟೀಕೆಗೆ ಕಾರಣವಾಗಿದೆ. ICC ಯು ಸಹಿತ ಬೇಸರ ವ್ಯಕ್ತ ಮಾಡಿದೆ.
ಈಗ ಕರಾಚಿಯಲ್ಲಿ ಎರಡನೆಯ ಟೆಸ್ಟ್ ಪಂದ್ಯ ಪ್ರಾರಂಭವಾಗಿದೆ. ಈ ಟೆಸ್ಟ್ ಕ್ಕಿಂತ ಮೊದಲು ಆಸ್ಟ್ರೇಲಿಯಾದ ಆಟಗಾರರಿಗೆ ಪಾಕಿಸ್ತಾನದಲ್ಲಿ ಊಟದಲ್ಲಿ ಯಾವ ಫುಡ್ ಸಿಗುತ್ತಿದೆ ಎಂಬುದನ್ನು ಮಾರ್ನ್ಸ್ ಲಾಭುಷೇನ್ ಅವರು ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.
Daal and roti for lunch too. Delicious pic.twitter.com/w5KgimFo1N
— Marnus Labuschagne (@marnus3cricket) March 11, 2022
ಮಧ್ಯಾಹ್ನದ ಊಟಕ್ಕಾಗಿ ದಾಲ್-ರೋಟಿ, ಇದು ತುಂಬಾ ರುಚಿಕಟ್ಟಾಗಿದೆ ಎಂದು ಭಾವಿಸುತ್ತೇನೆ ಎಂದು ಆಟಗಾರ ಲಾಭುಷೆನ್ ಹೇಳಿದ್ದಾರೆ. ಲಾಭುಷೇನ್ ಈ ಫೋಟೋ ಶೇರ್ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪ್ರತಿಕ್ರಿಯೆಗಳು ಮೂಡಲು ಶುರುವಾದವು. ಕೆಲವರು ಈ ವಿಷಯಕ್ಕೆ ಸಂಬಂಧಿಸಿ ಪಾಕಿಸ್ತಾನಕ್ಕೆ ಟ್ರೊಲ್ ಮಾಡಲು ಶುರು ಮಾಡಿದರೆ ಇನ್ನು ಕೆಲವರು ಆಸ್ಟ್ರೇಲಿಯನ್ ಆಟಗಾರರ ಸರಳತೆಯ ಪ್ರಶಂಸೆಯನ್ನು ಮಾಡಿದ್ದಾರೆ.
ಭಾರತದ ಮಾಜಿ ಆಟಗಾರ ವಾಸಿಮ್ ಜಾಫರ್ ಲಾಭುಷೆನ್ ಅವರ ಫೋಟೋಗೆ ತುಂಬಾ ತಮಾಷೆಯ ರಿಪ್ಲಾಯ್ ನೀಡಿದ್ದಾರೆ. ಅವರು ಒಂದು ಫೋಟೋ ಶೇರ್ ಮಾಡಿ, ದಾಲ್- ರೋಟಿ ಬದಲಾಗಿ ದಾಲ್- ಚಾವಲ್ (ರೈಸ್) ಕಾಂಬಿನೇಶನ್ ತುಂಬಾ ಚೆನ್ನಾಗಿರುತ್ತದೆ ಎಂದಿದ್ದಾರೆ.
ಲಾಭುಷೆನ್ ಅವರು ಮೊದಲ ಟೆಸ್ಟ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಬರೀ 10 ರನ್ ಗಳ ಅಂತರದಲ್ಲಿ ಶತಕದಿಂದ ವಂಚಿತರಾಗಿದ್ದರು. ಆದರೆ ಎರಡನೆಯ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಮಾತ್ರ ಶೂನ್ಯ ದಲ್ಲಿ ಔಟಾದರು.