ಅಬ್ಬಾ! ಮುಂಬೈ ಮಹಾನಗರದಲ್ಲಿ 8BHK ಐಶಾರಾಮೀ ಮನೆ ಖರೀದಿಸಿದ ಪಾಂಡ್ಯ ಸಹೋದರರು: ಮನೆಯ ಬೆಲೆ ಇಷ್ಟೊಂದಾ???
ಹಾರ್ದಿಕ ಮತ್ತು ಕೃಣಾಲ್ ಪಾಂಡ್ಯ ಸಹೋದರರು ತಮ್ಮ ಲೈಫ್ ಸ್ಟೈಲ್ ಬಗ್ಗೆ ಯಾವತ್ತು ಸುದ್ದಿಯಲ್ಲಿ ಇರುತ್ತಾರೆ. ಭಾರತದ ಕಡೆಯಿಂದ ಹಾಗೂ ಐಪಿಎಲ್ ನಲ್ಲಿ ತಮ್ಮ ಆಟವನ್ನು ಪ್ರದರ್ಶಿಸಿ ಈಗ ತುಂಬಾ ಹಣ ಗಳಿಸಿದ್ದಾರೆ. ಸದ್ಯ ಇವರು ಮುಂಬಯಿಯಲ್ಲಿ 8 BHK ಮನೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಇದೆ. ರುಸ್ತುಂಜಿ ಪ್ಯಾರಾಮೌಂಟ್ ನಲ್ಲಿ 3838 ಸ್ಕ್ವೇರ್ ಫೀಟ್ ನ ಈ ಮನೆಯ ಒಟ್ಟು ಬೆಲೆ 30 ಕೋಟಿ ರೂಪಾಯಿಗಳೆಂದು DNA ವರದಿ ಮಾಡಿದೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟ್ಟಾನಿಯವರು ಸಹ ಇದೇ ಅಪಾರ್ಟ್ ಮೆಂಟ್ ನಲ್ಲಿರುತ್ತಾರೆ. ಇವರ ಈ ನೂತನ ಮನೆಯಲ್ಲಿ ಆಧುನಿಕ ಜಿಮ್, ಗೇಮಿಂಗ್ ಝೋನ್, ಸ್ವಿಮ್ಮಿಂಗ್ ಪೂಲ್ ಹಾಗೂ ಥಿಯೇಟರ್ ಸಹ ಇದೆ.
ಹಾರ್ದಿಕ ಮತ್ತು ಕ್ರುನಾಲ್ ಮೊನ್ನೆಯ ಶ್ರೀಲಂಕಾದಲ್ಲಿ ನಡೆದ ಸೀರೀಸ್ ನಲ್ಲಿ ಆಡಿದರು. ಆದರೆ ಇಬ್ಬರ ಆಟ ಮಾತ್ರ ಈ ಬಾರಿ ಹಾಗೇನು ಗಮನ ಸೆಳೆಯುವ ಹಾಗೆ ಇರಲಿಲ್ಲ.

ಏತನ್ಮಧ್ಯೆ ಕ್ರುಣಾಲ್ ಪಾಂಡ್ಯ ಅವರಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ನಂತರ ಇವರ ಜೊತೆಗೆ ಸಂಪರ್ಕದಲ್ಲಿ ಬಂದ ಎಂಟು ಆಟಗಾರರನ್ನು ಬೇರೆ ಇಡಲಾಯಿತು.

ಸದ್ಯ ಮುಂಬರುವ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಐಪಿಲ್ ಪಂದ್ಯಗಳು ನಡೆಯಲಿವೆ. ಅದರ ನಂತರ ತಕ್ಷಣ T-20 ವರ್ಲ್ಡ್ ಕಪ್ ಸಮರ ಶುರುವಾಗಲಿದೆ. ಆದಷ್ಟು ಬೇಗ ಇಬ್ಬರು ತಮ್ಮ ಫಾರ್ಮ್ ನಲ್ಲಿ ಮರಳಿ ಬರುವದು ಮುಂಬಯಿ ಇಂಡಿಯನ್ಸ್ ಹಾಗೂ ಭಾರತ ತಂಡದ ದೃಷ್ಟಿಯಿಂದ ತುಂಬಾ ಅವಶ್ಯಕವಾಗಿದೆ.