VIDEO : ಗಿಟಾರ್ ಗೆ ತಕ್ಕನಾಗಿ ಹಾಡುವ ಗಿಳಿ! ಒಂದು ಅಪರೂಪದ ವಿಡಿಯೊ ತುಣುಕು
ಗಿಳಿಗಳ ಬಗ್ಗೆ ನಿಮಗೆ ಗೊತ್ತೇ ಇದೆ, ಸ್ವಲ್ಪ ತರಬೇತಿ ಸಿಕ್ಕರೂ ಸಾಕು, ಥೇಟ್ ಮಾನವರ ಹಾಗೆ ಹಲವಾರು ಶಬ್ಧ ಮಾತಾಡಬಲ್ಲವು. ಇನ್ನೂ ಕೆಲವು ಇರುತ್ತವೆ, ಅವಕ್ಕೆ ತರಬೇತಿ ನೀಡದಿದ್ದರೂ, ದಿನಾ ಮನೆಯ ಸದಸ್ಯರು ಮಾತಾಡುವುದನ್ನು ಕೇಳಿ ಕೇಳಿ ಮಾತಾಡಲು ಸುರು ಮಾಡುತ್ತವೆ, ವಿಜಿಲ್ ಹೊಡೆಯುತ್ತವೆ, ಮಮ್ಮಿ… ಅಂತ ಕರೆಯುತ್ತವೆ.
ಮನುಷ್ಯರಿಗೆ ಅದರಲ್ಲೂ ಚಿಕ್ಕ ಮಕ್ಕಳಿಗೆ ಗಿಳಿಗಳು ಬೇಗ ಹೊಂದಿಕೊಳ್ಳುತ್ತವೆ. ಹೀಗಿರುವ ಗಿಣಿರಾಯ ಸಂಗೀತದಲ್ಲೂ ಎಕ್ಸಫರ್ಟ್ ಅಂತ ಈ ಕೆಳಗಿನ ವಿಡಿಯೊ ತೋರಿಸಿದೆ. ಫ್ರಾಂಕ್ ಎಂಬುವವರು ತಮ್ಮಮನೆಯಲ್ಲಿ ಗಿಟಾರ್ ನುಡಿಸುವಾಗ ಅವರ ಗಿಳಿ ಹಾಡು ಹಾಡತೊಡಗುತ್ತದೆ!
ಈ ಗಿಳಿಯ ಹೆಸರು ಟೀಕೊ ಅಂತ, ಈ ಮೊದಲು ಕೂಡ ಇದು ಹಾಡುವ ಹಲವು ವಿಡಿಯೊ ವೈರಲ್ ಆಗಿವೆ, ಅವುಗಳಲ್ಲಿ ಇದೂ ಒಂದು. ಗಿಟಾರಿಸ್ಟ್ ಹಾಗೂ ಗಿಳಿಯ ಸಂಗೀತ ಕಛೇರಿ ಇದು. ಲಕ್ಷಾಂತರ ನೆಟ್ಟಿಗರ ಮನಗೆದ್ದಿರುವ ಈ ವಿಡಿಯೊದಲ್ಲಿ ಗಿಳಿ ಥೇಟ್ ಪಾಶ್ಚಾತ್ಯ ಹಾಡುಗಾರರಂತೆ ಹಾಡುವುದು ನೋಡಿ ಜನ ಅಚ್ಚರಿಗೊಂಡಿದ್ದಾರೆ.
ಫ್ರಾಂಕ್ ರವರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲೂ ಕೂಡ ಈ ಟೀಕೊನ ಹಲವು ಹಾಡುಗಳನ್ನು ಅಪ್ ಲೋಡ್ ಮಾಡಿದ್ದಾರೆ. ಇಲ್ಲಿ flop era orange coat guy ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು, ಈಗಾಗಲೇ 3.7 ಮಿಲಿಯನ್ ವಿವ್ಸ್ ಕಂಡಿದೆ. ಲಕ್ಷಗಟ್ಟಲೇ ಲೈಕ್ಸ್, ಸಾವಿರಾರು ರಿಟ್ವೀಟ್ ಆಗಿವೆ.
obsessed with this guy who just uploads videos of him playing classic rock riffs while his birb freestyles vocals pic.twitter.com/PRad1TY33D
— flop era orange coat guy (@rtnordy) May 26, 2021
ಈ ಮೊದಲು ಕೂಡ ನೀವು ಗಿಳಿ ಮಾತಾಡುವ, ಕಿಟಲೆ ಮಾಡುವ ಹಲವು ವಿಡಿಯೊ ನೋಡಿದ್ದೀರಿ, ಈಗ ಗಿಳಿ ಹಾಡುವ ವಿಡಿಯೊ ಕೂಡ ನೋಡಿ, ಇದೊಂದು ಸಣ್ಣ ತುಣುಕಾಗಿದ್ದು ನಿಮಗೆ ಇಷ್ಟವಾಗಬಹುದು. ಬಹುಶ ಇದು ಹಳೆಯ ವಿಡಿಯೊ ಆಗಿದ್ದು ಮತ್ತೆ ವೂರಲ್ ಆಗಿದೆ ಅನಿಸುತ್ತದೆ. ವಿಡಿಯೊ ಮೇಲಿದೆ, ನೋಡಿ…
-Team Infotrend