Passport Ranking 2022: ಪಾಕಿಸ್ತಾನದ ಪಾಸ್ಪೋರ್ಟ್ ಜಗತ್ತಿನಲ್ಲಿಯೇ ಅತೀ ದುರ್ಬಲ; ತಿಳಿದುಕೊಳ್ಳಿ ಭಾರತದ ರ್ಯಾಂಕಿಂಗ್ ಏನು?
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಪಾಸ್ಪೋರ್ಟ್ ಬೇಕಿರುವದು ತುಂಬಾ ಮಹತ್ವದ ಅಂಶವಾಗಿದೆ. ಪಾಸ್ಪೋರ್ಟ್ ಎಷ್ಟು ಪವರ್ಫುಲ್ ಆಗಿರುತ್ತದೆ ಆ ದೇಶದ ಜನರು ಅಷ್ಟೇ ಅತೀ ಹೆಚ್ಚು ದೇಶಗಳಲ್ಲಿ ಸುತ್ತಾಡಲು ಸ್ವತಂತ್ರರಾಗಿರುತ್ತಾರೆ. ಲಂಡನ್ ನ ಇಮಿಗ್ರೇಷನ್ ಕನ್ಸಲಟೆನ್ಸಿ ಸಂಸ್ಥೆ ” ಹೆನ್ಲಿ ಅಂಡ್ ಪಾರ್ಟನರ್ಸ್ ” ವರ್ಷ 2022 ರ ಜಗತ್ತಿನ ಪಾವರ್ ಫುಲ್ ಪಾಸ್ಪೋರ್ಟ್ ರ್ಯಾಕಿಂಗ್ ಜಾರಿ ಮಾಡಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಜಗತ್ತಿನ ಎಲ್ಲ 199 ದೇಶಗಳ ಪವರ್ಫುಲ್ ಮತ್ತು ದುರ್ಬಲ ಪಾಸ್ಪೋರ್ಟ್ ಗಳ ಮಾಹಿತಿಯನ್ನು ಜಾರಿ ಮಾಡಿದೆ.
‘ಹೇನಲಿ ಪಾಸ್ಪೋರ್ಟ್ ಇಂಡೆಕ್ಸ್ ಫಾರ್ 2022’ ಜಾರಿ ಮಾಡಿದ ಮಾಹಿತಿಯಲ್ಲಿ ಜಗತ್ತಿನ ಎಲ್ಲ 199 ದೇಶಗಳು ಸಮಾವೇಶ ಹೊಂದಿವೆ. ಇದು ಜಗತ್ತಿನ “ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಶಿಯೇಶನ್” ನಿಂದ ದೃಢಪಡಿಸಿದ ಡೇಟಾ ಮೇಲೆ ಆಧಾರಿತವಾಗಿರುತ್ತದೆ. ಇದು ಜಗತ್ತಿನ ಅತೀ ದೊಡ್ಡ ‘ಟ್ರಾವೆಲ್ ಇನ್ಫಾರ್ಮೇಶನ್ ನ ಡಾಟಾಬೇಸ್ ಮೆಂಟೇನ್’ ಮಾಡುತ್ತದೆ.
ಇಲ್ಲಿ ನೀಡಿದ ಮಾಹಿತಿಯ ಪ್ರಕಾರ ಪಾಕಿಸ್ತಾನದ ಪಾಸ್ಪೋರ್ಟ್ ಪರಿಸ್ಥಿತಿ ತುಂಬಾ ಶೋಚನೀಯ ವಾಗಿದೆ. ಇಂಡೆಕ್ಸ್ ನಲ್ಲಿ ಪಾಕಿಸ್ತಾನಕ್ಕೆ 109 ನೆಯ ಸ್ಥಾನವಿದೆ. ರಿಪೋರ್ಟ್ ಪ್ರಕಾರ ಪಾಕಿಸ್ತಾನದ ಪಾಸ್ಪೋರ್ಟ್ ಜಗತ್ತಿನ ನಾಲ್ಕನೆಯ ದುರ್ಬಲ ಪಾಸ್ಪೋರ್ಟ್ ಆಗಿದೆ ಎಂದು ಹೇಳಲಾಗಿದೆ. ಈ ಪಾಸ್ಪೋರ್ಟ್ ಹೊಂದಿರುವ ವ್ಯಕ್ತಿಗೆ ಜಗತ್ತಿನ ಬರೀ 32 ದೇಶಗಳಲ್ಲಿ ಅಷ್ಟೇ ವೀಸಾ ಇಲ್ಲದೆ ಸುತ್ತಾಡಲು ಅನುಮತಿ ಇದೆ. ಪಾಕಿಸ್ತಾನದ ಪಾಸ್ಪೋರ್ಟ್ ಕೇವಲ ಸಿರಿಯಾ, ಇರಾಕ್ ಮತ್ತು ಅಫಾಗಾನಿಸ್ತಾನ್ ಗಿಂತಲೂ ಚೆನ್ನಾಗಿದೆ ಅಷ್ಟೇ.
ಈ ವಿಷಯದಲ್ಲಿ ಭಾರತದ ಪಾಸ್ಪೋರ್ಟ್ ನಲ್ಲಿ ಎಷ್ಟಿದೆ ಧಮ್?

ಈ ವಿಷಯದಲ್ಲಿ ಭಾರತದ ನೀಲಿ ಬಣ್ಣದ ಪಾಸ್ಪೋರ್ಟ್ ಪಾಕಿಸ್ತಾನದ ಪಾಸ್ಪೋರ್ಟ್ ಗಿಂತಲೂ ತುಂಬಾನೇ ಚೆನ್ನಾಗಿದೆ ಎಂದು ಹೇಳಬಹುದು. ಪಾಸ್ಪೋರ್ಟ್ ಇಂಡೆಕ್ಸ್ ನಲ್ಲಿ ಭಾರತದ ರ್ಯಾಂಕಿಂಗ್ 87 ಇದೆ. ಭಾರತದ ಪಾಸ್ಪೋರ್ಟ್ ಹೊಂದಿದ ವ್ಯಕ್ತಿ ಜಗತ್ತಿನ 60 ದೇಶಗಳಲ್ಲಿ ವೀಸಾ ಇಲ್ಲದೆ ಸುತ್ತಾಡಬಹುದು. ಇಂಡೆಕ್ಸ್ ನಲ್ಲಿ ಮಾರಿಟಾನಿಯ ಮತ್ತು ತಾಜಾಕಿಸ್ತಾನ್ ದೇಶಗಳಷ್ಟೇ ಪವರ್ ಫುಲ್ ಆಗಿದೆ ಭಾರತದ ಪಾಸ್ಪೋರ್ಟ್. ಆದರೆ ನೆರೆಯ ಚೀನಾಗಿಂತಲೂ ಭಾರತ ತುಂಬಾ ಹಿಂದಿದೆ ಎನ್ನಬಹುದು. ಕಾರಣ ಚೀನಾ ರ್ಯಾಂಕಿಂಗ್ ನಲ್ಲಿ 69 ನೇ ನಂಬರ್ ಗಿದೆ. ಈ ಚೀನಾ ದೇಶದ ಪಾಸ್ಪೋರ್ಟ್ ಹೊಂದಿದ ವ್ಯಕ್ತಿಗಳು ಜಗತ್ತಿನ 80 ದೇಶಗಳಲ್ಲಿ ವೀಸಾ ಇಲ್ಲದೆ ಸಂಚರಿಸಬಹುದು.
ಇನ್ನು ಟಾಪ್ ಟೆನ್ 10 ದೇಶಗಳ ಬಗ್ಗೆ ವಿಚಾರ ಮಾಡಲಾಗಿ ಜಪಾನ್ ಮೊದಲ ರ್ಯಾಂಕ್ ನಲ್ಲಿದೆ. ಈ ದೇಶದ ಪಾಸ್ಪೋರ್ಟ್ ಹೊಂದಿದ ವ್ಯಕ್ತಿ ಜಗತ್ತಿನ 193 ದೇಶಗಳಲ್ಲಿ ವೀಸಾ ಇಲ್ಲದೇನೆ ಸಂಚರಿಸಲು ಅನುಮತಿ ನೀಡುತ್ತದೆ. ಈ ದೇಶದ ನಂತರ ಸಿಂಗಾಪುರ್, ದಕ್ಷಿಣ ಕೊರಿಯಾ(192), ಜರ್ಮನಿ (190) ಸ್ಪೇನ್ ಫಿನ್ಲ್ಯಾಂಡ್, ಇಟಲಿ, ಲಾಜ್ಜಮಬರ್ಗ್(189), ಆಸ್ಟ್ರಿಯಾ, ಡೆನ್ಮಾರ್ಕ್, ನೇದರ್ಲಂಡ್, ಸ್ವೀಡನ್ (188) ಈ ದೇಶಗಳ ಪಾಸ್ಪೋರ್ಟ್ ತುಂಬಾ ಪವರ್ಫುಲ್ ಆಗಿವೆ.