ಎಚ್ಚರಿಕೆ : ಕರೋನಾದಿಂದ ಗುಣವಾದ ಮೇಲೆ ಈ ಐದು ರೀತಿಯ ಆಹಾರವನ್ನು ಸೇವಿಸಬೇಡಿ

ಕೊರೋನದಿಂದ ಬಳಲಿ ಚೇತರಿಸಿಕೊಳ್ಳುತ್ತಿರುವವರಿಗೆ ಇತರರಿಗಿಂತ ಖಂಡಿತ ಒಳ್ಳೆಯ ಆಹಾರ ಬೇಕು. ಸಾಕಷ್ಟು ಪೌಷ್ಟಿಕಾಂಶಭರಿತ ಊಟ ಅವರನ್ನು ಮತ್ತಷ್ಟು ಬೇಗ ಮೊದಲಿನ ಸ್ಥಿತಿಗೆ ತರುತ್ತದೆ. ಮಾಮೂಲಾಗಿ ಕೊರೋನದಿಂದ ಹುಷಾರಾದವರಿಗೆ ಸುಸ್ತು ಕಾಡಿಯೇ ಕಾಡುತ್ತದೆ, ಹಾಗೂ ಇತರ ಸಣ್ಣ ಸಮಸ್ಯೆಗಳು ಹಾಗೇ ಇರುತ್ತವೆ, ಅಂಥವರು ನಿಮ್ಮ ವೈದ್ಯರು ಸೂಚಿಸಿದ ಆಹಾರ ಸೇವಿಸುವುದು ಬಹಳ ಮುಖ್ಯ.

ತಣ್ಣನೆಯ ಪದಾರ್ಥಗಳನ್ನು ತಿನ್ನಬೇಡಿ :
ನೀವು ಕರೋನಾದಿಂದ ಗುಣಮುಖರಾಗಿದ್ದರೆ ಮತ್ತು ಕಪ್ಪು ಶಿಲೀಂಧ್ರ ಸಮಸ್ಯೆಯಿಂದ ಹೊರಬಂದಿದ್ದರೆ ಯಾವುದೇ ರೀತಿ ತಣ್ಣನೆಯ ವಸ್ತುಗಳನ್ನು ಸೇವಿಸಬೇಡಿ. ತಣ್ಣೀರು ಕುಡಿಯಬೇಡಿ, ಹಣ್ಣುಗಳನ್ನು ತಿನ್ನಬೇಡಿ ಅಥವಾ ಫ್ರಿಜ್‌ ನಿಂದ ತೆಗೆದ ಯಾವುದನ್ನೂ ತಿನ್ನಬೇಡಿ, ಏಕೆಂದರೆ ಇವುಗಳು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತವೆ.

ಫ್ರೈ ಮಾಡಿದ ಏನೂ ಬೇಡ :
ಎಲ್ಲರಿಗೂ ಫ್ರೈಡ್ ಫುಡ್ ಇಷ್ಟ, ಹಾಗಂತ ಅದನ್ನು ಹೆಚ್ಚಾಗಿ ಯಾರೂ ಸೇವಿಸಬಾರದು, ಕರೋನಾದಿಂದ ಚೇತರಿಸಿಕೊಂಡ ಜನರಂತೂ ಈ ವಿಷಯದಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬ್ರೆಡ್ ಪಕೋಡಾ, ಸಮೋಸಾ, ಭಜಿ, ಬೋಂಡಾ ಇತ್ಯಾದಿ ತಿನ್ನುವುದನ್ನು ಕಡ್ಡಾಯವಾಗಿ ನಿಲ್ಲಿಸಿ. ಅವು ನಿಮ್ಮ ಸಮಸ್ಯೆಗಳನ್ನು ಖಂಡಿತ ಹೆಚ್ಚಿಸುತ್ತವೆ.

ಹಣ್ಣುಗಳನ್ನು ತಿನ್ನುವ ಮೊದಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ :
ಹಣ್ಣುಗಳನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದ್ದರೂ, ಅವುಗಳನ್ನು ತಿನ್ನುವ ಮೊದಲು, ಕೆಲವು ವಿಶೇಷ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಯಾವುದೇ ಹಣ್ಣುಗಳನ್ನು ತಿನ್ನುವ ಮೊದಲು ಅವುಗಳನ್ನು ಮೊದಲು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಬೇಕು, ಇಲ್ಲದಿದ್ದರೆ ಅವು ಕಪ್ಪು ಶಿಲೀಂಧ್ರದ ಅಪಾಯವನ್ನು ಹೆಚ್ಚಿಸುತ್ತದೆ.

ದೀರ್ಘಕಾಲ ಇಟ್ಟುಕೊಂಡ ಆಹಾರವನ್ನು ಸೇವಿಸಬೇಡಿ :
ಕರೋನಾದಿಂದ ಚೇತರಿಸಿಕೊಂಡ ರೋಗಿಗಳಿಗೆ ತಾಜಾ ಆಹಾರವನ್ನು ಮಾತ್ರ ತಿನ್ನಲು ಸೂಚಿಸಲಾಗುತ್ತದೆ, ಆದರೆ ಕೆಲವೊಮ್ಮೆ ಜನರು ದೀರ್ಘಕಾಲದವರೆಗೆ ಇಟ್ಟುಕೊಂಡ ಆಹಾರವನ್ನು ಸಹ ತಿನ್ನುತ್ತಾರೆ. ಆದರೆ ಇದನ್ನು ಮಾಡಬಾರದು, ದೀರ್ಘಕಾಲದವರೆಗೆ ಇಟ್ಟುಕೊಂಡ ಆಹಾರವನ್ನು ಅಥವಾ ಬೇಯಿಸದ ಆಹಾರವನ್ನು ಸೇವಿಸಬೇಡಿ. ಇದಲ್ಲದೆ ಹೊರಗಿನ ಆಹಾರವನ್ನು ಸೇವಿಸಬೇಡಿ.

ಏನು ತಿನ್ನಬಹುದು :
ಕೊರೋನದಿಂದ ಚೇತರಿಸಿಕೊಂಡವರಿಗೆ ಕಂಪ್ಲೀಟ್ ಡಯೇಟ್ ಪ್ಲಾನ್ ಇದೆ. ವಿವರವಾದ ಟೈಂ ಟೇಬಲ್ ಪ್ರಕಾರ ಊಟ ತಿಂಡಿ ಮಾಡಿದರೆ ತುಂಬಾ ಬೇಗ ಚೇತರಿಸಿಕೊಳ್ಳುತ್ತಾರೆ. ಆದರೂ ಅವರ ಊಟ ತಿಂಡಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ…

ಬೆಳಿಗ್ಗೆ – ರಾತ್ರಿ ಹಾಲು, ಡ್ರೈ ಫ್ರೂಟ್ಸ್
ತಿಂಡಿಗೆ : ಇಡ್ಲಿ, ರಾಗಿ ದೋಸೆ, ಕಿಚಡಿ, ಹೆಸರು ಕಾಳಿನ ಕಟ್ಟು, ಬೇಯಿಸಿದ ಬೇಳೆ
ಪೇಯ : ಖಾಡೆ (ಕಷಾಯ) ಒಂದ್ ಕಪ್, ಅರಿಷಿಣ ಚಹಾ
ಚಾಟ್ಸ್ : ಮಿಕ್ಸ್ ಫ್ರೂಟ್ಸ್ (ಕಿತ್ತಳೆ, ಪಪ್ಪಾಯಿ, ಆ್ಯಪಲ್, ಪೇರಲ), ಬೇಯಿಸಿದ ಕಡಲೆ ಕಾಳು, ಅವಲಕ್ಕಿ – ಬೆಲ್ಲ, ಐದಾರು ಪೀಸ್ ಖರ್ಜುರ
ಊಟ : ಬ್ರೌನ್ ರೈಸ್ – ಸಾಂಬಾರು, ತರಕಾರಿ ಪಲ್ಯ (ಕ್ಯಾರೆಟ್, ಹೂಕೋಸ್, ಆಲೂ)

ಗಮನಿಸಿ : ಓದುಗರ ಜ್ಞಾನ ಮತ್ತು ಅರಿವನ್ನು ಹೆಚ್ಚಿಸಲು ಮಾತ್ರ ಈ ಲೇಖನವನ್ನು ಸಿದ್ಧಪಡಿಸಲಾಗಿದೆ, ಯಾವುದಕ್ಕೂ ನಿಮ್ಮ ವೈದ್ಯರು ಹೇಳುವ ಆಹಾರ ಪದ್ದತಿಯನ್ನೇ ಅನುಸರಿಸಿ, ರೋಗದ ಬಗ್ಗೆ ಮತ್ತು ಆಹಾರದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
-Team Infotrend