ನಾಯಿಮರಿ ಎಂದು ಪೇಟ್ ಶಾಪ್ ನಿಂದ ಖರೀದಿಸಿ ತಂದರು ಮನೆಗೆ, ಎರಡು ವರ್ಷದ ನಂತರ ಅದೇನೆಂದು ಡಾಕ್ಟರ್ ಹೇಳಿದ ಮೇಲೆ ಬೆಚ್ಚಿ ಬಿದ್ದರು

ಚೀನಾದ ಯುನಾನ್ ಪ್ರಾಂತದಲ್ಲಿ ವಾಸಿಸುವ ಸು ಯೂನ್ ಮತ್ತು ಆತನ ಪರಿವಾರದವರಿಗೆ ಒಂದು ನಾಯಿಯನ್ನು ಸಾಕುವ ಆಸೆಯಾಗಿತ್ತು. ಅದಕ್ಕಾಗಿ ಪೆಟ್ ಶಾಪ್ ಲಿಂದ ಒಂದು ಮುದ್ದು ನಾಯಿ ಮರಿಯನ್ನು ತರಲು ಹೋದಾಗ ಅನೇಕ ಪ್ರಜಾತಿಗಳನ್ನು ನೋಡಿದರೂ ಅವರ ಮನಸ್ಸಿಗೆ ಮಾತ್ರ ಒಂದೂ ಹಿಡಿಸಲಿಲ್ಲ, ನೋಡಿದ ನಾಯಿಮರಿಗಳಲ್ಲಿ ವಿಶೇಷವೇನು ಕಾಣಿಸಲಿಲ್ಲ. ಕೊನೆಗೆ ಬೇಸತ್ತು ಮನೆಗೆ ವಾಪಾಸ್ಸಾಗುವ ಸಮಯದಲ್ಲಿ ಬೇರೆ ಅಂಗಡಿಯಲ್ಲಿ ಒಂದು ನಾಯಿಯ ಮರಿ ಕಾಣಿಸಿದ್ದೆ ತಡ ಅದರ ಕಡೆಗೆ ಒಮ್ಮೆಲೇ ಆಕರ್ಷಿತರಾಗಿ ಅದನ್ನು ಖರೀದಿಸಿ ಮನೆಗೆ ತಂದೇ ಬಿಟ್ಟರು.

ಸು ಯೂನ್ ಮತ್ತು ಫ್ಯಾಮಿಲಿಯವರು ಅಂಗಡಿಯವನಿಗೆ ನಾಯಿಯ ಬಗ್ಗೆ ವಿಶೇಷವಾದ ಗುಣಗಳ ಬಗ್ಗೆ ಕೇಳಲಾಗಿ ಆತ ಈ ನಾಯಿಯ ಪ್ರಜಾತಿ ಅಪರೂಪದ್ದಾಗಿದೆ, ಇದರಲ್ಲಿ ಒಂದಲ್ಲ ಎರಡಲ್ಲ ಅನೇಕ ವಿಶೇಷವಾದ ಗುಣಗಳಿವೆ ಹಾಗೂ ಇದು ‘ಮಾಸ್ತಿಫ್’ ಪ್ರಜಾತಿಯದ್ದಾಗಿದೆ ಎಂದು ಹೇಳಿದನು.

ಈ ನಾಯಿಯ ಮರಿಯನ್ನು ಮನೆಗೆ ತಂದ ಕೆಲವೇ ದಿನಗಳಲ್ಲಿ ಅದಕ್ಕೆ ತುಂಬಾ ಹಸಿವೆಯಾಗತೊಡಗಿತು. ಅದು ದಿನಂಪ್ರತಿ ಸುಮಾರು ಎರಡು ಬಕೆಟ್ ಪಾಸ್ತಾ ಮತ್ತು ಒಂದು ಪೆಟ್ಟಿಗೆ ಹಣ್ಣುಗಳನ್ನು ತಿನ್ನುತ್ತಿತ್ತು. ನಾಯಿಗಳು ತಿನ್ನವದರ ಬಗ್ಗೆ ಕುಟುಂಬದವರಿಗೆ ಗೊತ್ತಿತ್ತು, ಆದರೆ ಇಷ್ಟೊಂದು ತಿನ್ನುವ ನಾಯಿಯನ್ನು ಎಲ್ಲಿ ನೋಡಿರಲಿಲ್ಲ.

ಇದಾದ ನಂತರ ಸು ಯೂನ್ ಪರಿವಾರದವರ ನಿರೀಕ್ಷಣೆಗೆ ಇನ್ನೊಂದು ವಿಷಯ ಕಂಡು ಬಂತು ಏನೆಂದರೆ, ನಾಯಿ ಯಾವತ್ತೂ ಬೊಗಳುತ್ತಿರಲಿಲ್ಲ, ಬದಲಾಗಿ ಚೀತ್ಕರಿಸುತ್ತಿತ್ತು. ಮನೆಯವರ ಪ್ರಕಾರ ನಾಯಿಯು ಮಾಡುವ ಶಬ್ದ ಕೇಳಿದರೆ ನಮಗೆ ಯಾವತ್ತೂ ಅದು ಬೊಗಳುತ್ತಿದೆ ಎಂದು ಅನಿಸುತ್ತಿರಲಿಲ್ಲವಂತೆ. ಈ ಎಲ್ಲ ಕಾರಣಗಳಿಂದ ಸು ಯೂನ್ ಮತ್ತು ಪರಿವಾರದವರಲ್ಲಿ ಸ್ವಲ್ಪ ಆತಂಕ ಮೂಡಲು ಶುರುವಾದರೂ ಮತ್ತೊಂದು ಘಳಿಗೆಯಲ್ಲಿ ನಮ್ಮ ನಾಯಿಯಲ್ಲಿ ಏನೋ ಸ್ಪೆಷಲ್ ಗುಣವಿದೆ ಎಂದೆನಿಸಿ ಮತ್ತೆ ಅದಕ್ಕೆ ವಿಶೇಷವಾಗಿ ಪ್ರೀತಿ ಮತ್ತು ಕಾಳಜಿ ಮಾಡುತ್ತಿದ್ದರು.

ಒಂದು ದಿವಸ ನಾಯಿಯು ತನ್ನಂತಾನೆ ಎರಡು ಕಾಲುಗಳ ಮೇಲೆ ಎದ್ದು ನಿಂತಿತು, ಅದಕ್ಕೆ ನಿಲ್ಲಲು ಯಾರು ಕಲಿಸದೆ ತಾನೇ ಹೇಗೆ ನಿಂತಿತು? ಈ ನಾಯಿಯು ತುಂಬಾ ವಿಶೇಷವಾಗಿದೆ, ಯಾರು ಹೇಳಿಕೊಡದೇನೆ ತನ್ನಂತಾನೆ ನಿಲ್ಲಲು ಕಲಿತಿದೆ ಎಂದು ಪ್ರಶಂಸೆ ಮಾಡಿದರು.

ಕುಟುಂಬದವರು ನಾಯಿಗೆ ‘ಬ್ಲ್ಯಾಕಿ’ ಅಂತ ನಾಮಕರಣ ಮಾಡಿದ್ದರು. ಹೊಟ್ಟೆಗೆ ಸಿಕ್ಕಾಪಟ್ಟೆ ತಿನ್ನುವದರಿಂದ ಅದು ಬಹುಬೇಗ ದೊಡ್ಡದಾಯಿತು. ಎರಡು ವರ್ಷದ ಕಾಲಾವಧಿಯಲ್ಲಿಯೇ ನಾಯಿ ಎರಡು ಮೀಟರ್ ಎತ್ತರವಾಯಿತು ಹಾಗು ಅದರ ಭಾರ 110 ಕಿಲೊಗ್ರಾಮ್ ದಷ್ಟಾಗಿತ್ತು. ಅದರ ಬೆಳೆಯುತ್ತಿರುವ ಎತ್ತರ ಮತ್ತು ತೂಕ ನೋಡಿ ಯು ಸೂನ್ ಗಾಬರಿಯಾದನು. ಜೊತೆಗೆ ಅದರ ಹಲ್ಲುಗಳು ಸಹಿತ ಬೆಳೆಯುತ್ತಿದ್ದವು. ಇದರಿಂದ ಇದು ಯಾವುದೋ ಬೇಟೆಯಾಡುವ ತಳಿಯ ಪ್ರಾಣಿಯಾಗಿದೆ ಎಂದೆನಿಸತೊಡಗಿತು. ಹೀಗಾಗಿ ಯಾವುದೇ ನಾಯಿ ಈ ರೀತಿ ಬೆಳೆಯಲು ಸಾಧ್ಯವೇ ಎಂಬ ವಿಚಾರ ತಲೆಯಲ್ಲಿ ಹೊಕ್ಕಿತು.

ಇಷ್ಟೆಲ್ಲ ವಿಚಾರ ತಲೆಯಲ್ಲಿ ಹೊಕ್ಕು ತಲೆ ತಿರುಗಲಾರಂಭಿಸಿದಾಗ ಯು ಸೂನ್ ಮಾತ್ರ ಸಮಯ ಹಾಳುಗೆಡುಹದೆ ಡಾಕ್ಟರ್ ಕಡೆಗೆ ಹೋದನು. ಡಾಕ್ಟರ್ ಮಾತ್ರ ನೋಡಿದ ಕ್ಷಣ ಹೇಳಿದನು ಇದು ನಾಯಿ ಅಲ್ಲ ಯಾವುದೋ ಕ್ರೂರ ಪ್ರಾಣಿ ಇದೆ ಎಂದು. ತಡಮಾಡದೆ ಡಾಕ್ಟರ್ ಇಲಿಯಾಂಗ್ ಕೌಂಟಿ ಪಬ್ಲಿಕ್ ಸಿಕ್ಯೂರಿಟಿಯವರನ್ನು ಕರೆಸಲಾಯಿತು. ಮನೆಯವರು ಅದು ತಿನ್ನುವ ಆಹಾರದ ಬಗ್ಗೆ ಹಾಗೂ ಅದರ ಹಲ್ಲುಗಳನ್ನು ತೋರಿಸಿದರು, ಮತ್ತು ಎರಡು ಕಾಲುಗಳ ಮೇಲೆಯೇ ನಿಲ್ಲುವ ಬಗ್ಗೆಯೂ ಹೇಳಿದರು.

ಇದೆಲ್ಲ ಗಮನಿಸಿದ ನಂತರ ಅವರು ಹೇಳಿದರು ಇದು ನಾಯಿಯಲ್ಲ ಏಷಿಯಾದಲ್ಲಿ ಕಂಡುಬರುವ ಕರಡಿಯಾಗಿದೆ ಎಂದು ಹೇಳಿದರು. ನಂತರ ಅದನ್ನು ಇಲಿಯಾಂಗ್ ಕೌಂಟಿ ಪಬ್ಲಿಕ್ ಸಿಕ್ಯೂರಿಟಿಯವರು ತಮ್ಮ ಜೊತೆಗೆ ಕರೆದುಕೊಂಡು ಹೋದರು. IUCN ಪ್ರಕಾರ ಈ ಪ್ರಾಣಿಯ ಅನೇಕ ಹೆಸರುಗಳಿವೆ. ಇದಕ್ಕೆ ಕಾಲರ್ ಬೆಯರ್, ಮೂನ್ ಬೆಯರ್, ಟಿಬೆಟ್ ಕರಡಿ ಅಂತಲೂ ಕರೆಯುತ್ತಾರೆ. IUCN ನವರು ಈ ಪ್ರಾಣಿಯನ್ನು ಲುಪ್ತ ಪ್ರಜಾತಿಗಳಲ್ಲಿ ಸಮಾವೇಶ ಮಾಡಿದ್ದಾರೆ. ಈ ಕರಡಿಗಳ ಬೇಟೆ ಹೆಚ್ಚಾಗಿ ಆಗಿದ್ದರಿಂದ ಇವುಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಾ ಬಂದಿದೆ.