Photos; ಟ್ರಾಫಿಕ್ ನಿಂದ ಬಚಾವ್? ಇಲ್ಲ ಮೂವಿ ಪ್ರಮೋಷನ್? ವಿಜಯ್ ದೇವರಕೊಂಡ & ಅನನ್ಯಾ ಅವರ ಮುಂಬೈ ಲೋಕಲ್ ಪ್ರವಾಸ…
‘ಲಾಯಗರ್’ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ನಲ್ಲಿ ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೇ ಜೋಡಿ ಈಗಷ್ಟೇ ಮುಂಬಯಿ ಲೈಫ್ ಲೈನ್ ಎಂದೇ ಪ್ರಸಿದ್ಧವಾದ ಲೋಕಲ್ ನಲ್ಲಿ ಪ್ರವಾಸ ಮಾಡಿದ್ದಾರೆ. ಈ ಫೇಮಸ್ ಜೋಡಿಯ ಕೆಲವು ಫೋಟೋಗಳು ಮತ್ತು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ದಕ್ಷಿಣದ ಜನಪ್ರಿಯ ನಟ ವಿಜಯ್ ಮತ್ತು ಬಾಲಿವುಡ್ ಬೆಡಗಿ ಅನನ್ಯಾ ಇವರಿಬ್ಬರು ಅಭಿನಯಿಸಿದ ಹಾಗೂ ತೆರೆ ಕಾಣಲು ಸಜ್ಜಾಗಿರುವ ‘ಲಾಯಗರ್’ ಚಿತ್ರ ಶೀಘ್ರದಲ್ಲಿಯೇ ಚಿತ್ರ ರಸಿಕರ ಭೇಟಿಗೆ ಬರಲಿದೆ.

ಹೀಗಾಗಿ ಇಬ್ಬರೂ ತಮ್ಮ ಚಿತ್ರದ ಪ್ರಮೋಶನ್ ಭರ್ಜರಿಯಾಗಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಇಬ್ಬರೂ ಮುಂಬಯಿಯ ಉಪನಗರವಾದ ಬಾಂದ್ರಾ ದಿಂದ ಲೋಕಲ್ ಪ್ರವಾಸ ಮಾಡಿದ್ದು ಗೊತ್ತಾಗಿದೆ.
ಅನನ್ಯಾ ಮತ್ತು ವಿಜಯ್ ಇಬ್ಬರೂ ಮುಂಬಯಿಯ ಟ್ರಾಫಿಕ್ ನಿಂದ ಬಚಾವ್ ಆಗಲು ಈ ದಾರಿಯನ್ನು ಹುಡುಕಿದ್ದಾರೆ ಎಂದು ಕೆಲವರು ಅಂದರೆ ಇನ್ನು ಕೆಲವರು ತಮ್ಮ ಚಿತ್ರದ ಪ್ರಮೋಶನ್ ಮಾಡುವ ಸಲುವಾಗಿ ಮಾಡಿದ ಸ್ಟಂಟ್ ಬಾಜಿಯಾಗಿದೆ ಎನ್ನುತ್ತಿದ್ದಾರೆ.

ಇದಕ್ಕೂ ಮೊದಲು ‘ಜುಗ್ ಜಗ್ ಜಿಯೋ’ ಚಿತ್ರದ ತಂಡವು ಹೀಗೆಯೇ ಪ್ರಮೋಷನ್ ಮಾಡಿತ್ತು. ಸದ್ಯ ಲಾಯಗರ್ ಚಿತ್ರದ ಸದಸ್ಯರು ಅವರ ಐಡಿಯಾವನ್ನೆ ಕಾಪಿ ಹೊಡೆದಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಅನನ್ಯಾ ಇಬ್ಬರೂ ಪ್ಲಾಟ್ ಫಾರ್ಮ್ ಮೇಲೆ ಕುಳಿತದ್ದು.

ಅನನ್ಯಾ ಮುಂಬಯಿಯಲ್ಲಿ ಇದ್ದರೂ ಲೋಕಲ್ ನಿಂದ ಹೆಚ್ಚಾಗಿ ಪ್ರವಾಸ ಮಾಡಿಯೇ ಇಲ್ಲ.
ವಿಜಯ್ ದೇವರಕೊಂಡ ಅಂತೂ ಮೊದಲ ಬಾರಿಗೆ ಮುಂಬಯಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ಇದು ತುಂಬಾ ಹೊಸದಾದ ಅನುಭವ ಆಗಿರಲೇಬೇಕು.

ಲಾಯಗರ್ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ನಲ್ಲಿ ಅನನ್ಯಾ ಮತ್ತು ವಿಜಯ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಜೋಡಿಯ ಚಿತ್ರ ಆಗಸ್ಟ್ 24 ರಂದು ತೆರೆ ಕಾಣಲಿದೆ. ಹೀಗಾಗಿ ಇಬ್ಬರ ಅಭಿಮಾನಿಗಳು ವಿಶೇಷವಾಗಿ ಆನಂದದಲ್ಲಿದ್ದಾರೆ.