Photos; ತೋಟದಲ್ಲಿ ವಿಜಯ್ ದೇವರಕೊಂಡ ಆನ್ ಟ್ರ್ಯಾಕ್ಟರ್! ಫುಲ್ ಹಳ್ಳಿ ಲುಕ್, ಹೊಸ ಅವತಾರ್
ದಕ್ಷಿಣದ ಸೂಪರ್ ಸ್ಟಾರ್ ಗಳಲ್ಲಿ ಗಣನೆಯಾಗುವ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಸದ್ಯಕ್ಕೆ ತೆರೆ ಕಾಣಲಿರುವ ಲಾಯಿಗರ್ ಚಿತ್ರದ ಪ್ರಮೋಶನ್ ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಟೀಮ್ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ.
ಈಗ ಲಾಯಿಗರ್ ಚಿತ್ರದ ಟೀಮ್ ಪಂಜಾಬ್ ರಾಜಧಾನಿಯಾದ ಚಂಡೀಗಢ ತಲುಪಿದ್ದಾರೆ. ಇಲ್ಲಿ ವಿಜಯ್ ಮತ್ತು ಅನನ್ಯಾ ಅಭಿಮಾನಿಗಳೊಂದಿಗೆ ತಮ್ಮ ಸಮಯವನ್ನು ಕಳೆದಿದ್ದಾರೆ. ಜೊತೆಗೆ ತಮ್ಮ ಚಿತ್ರದ ಪ್ರಮೋಟ್ ಮಾಡುವಲ್ಲಿ ಬಿಜಿಯಾಗಿದ್ದಾರೆ.

ಸದ್ಯ ಈ ಜೋಡಿಯ ಕೆಲವು ವಿಶೇಷ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಈ ಜೋಡಿ ಬೇರೆಯೇ ಲುಕ್ ನಲ್ಲಿ ಕಂಡು ಬರುತ್ತಿದ್ದಾರೆ.
ಇವುಗಳಲ್ಲಿ ಒಂದು ಫೋಟೋದಲ್ಲಿ ವಿಜಯ್ ಅವರು ತೋಟದಲ್ಲಿ ತುಂಬಾ ರೊಮ್ಯಾಂಟಿಕ್ ಮೂಡ್ ನಲ್ಲಿ ಅನನ್ಯಾ ಅವರಿಗೆ ತಮ್ಮ ತೋಳುಗಳಲ್ಲಿ ಎತ್ತಿಕೊಂಡಿದ್ದಾರೆ.

ಇದಕ್ಕೂ ಮೊದಲು ವಿಜಯ್ ಅವರಿಗೆ ಈ ಸ್ಟೈಲ್ ನಲ್ಲಿ ನೀವು ನೊಡಲಿಕ್ಕಿಲ್ಲ. ಈ ಇಬ್ಬರೂ ಕಲಾಕಾರರು ಸಖತ್ತಾಗಿ ದೇಸಿ ಲುಕ್ ನಲ್ಲಿ ಕಂಡು ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ತೋಟದಲ್ಲಿ ಟ್ರ್ಯಾಕ್ಟರ್ ಸಹ ನಡೆಸಿದ್ದಾರೆ.

ವಿಜಯ್ ಮತ್ತು ಅನನ್ಯಾ ಅವರ ಜೊತೆಗೆ ಚಿತ್ರದ ಸಂಪೂರ್ಣ ತಂಡ ದೇಸಿ ಸ್ಟೈಲ್ ನಲ್ಲಿ ಪಂಜಾಬ್ ಡಿಶ್ ನ ರುಚಿ ನೋಡಿದೆ. ಪ್ರಸ್ತುತ ಫೋಟೋಗಳು ಅವರ ಅಭಿಮಾನಿಗಳಿಗೆ ಫುಲ್ ಇಷ್ಟವಾಗಿವೆ.