ಪಿತ್ರಾರ್ಜಿತ ಆಸ್ತಿಯನ್ನು ವಾರಸ್ದಾರರ ಅನುಮತಿ ಇಲ್ಲದೆ ಮಾರಾಟ ಮಾಡಬಹುದೇ?

ಖ್ಯಾತ ವಕೀಲರೊಬ್ಬರಿಗೆ ತಮ್ಮ ಆಸ್ತಿಯ ಕುರಿತಾಗಿ ವ್ಯಕ್ತಿಯೊಬ್ಬರು ಈ ರೀತಿ ಪ್ರಶ್ನೆ ಕೇಳಿದ್ದರು. ನಮ್ಮ ತಾತ ಪಿತ್ರಾರ್ಜಿತ ಆಸ್ತಿಯ ಸ್ವಲ್ಪ ಭಾಗವನ್ನು ನನ್ನ ಮತ್ತು ನನ್ನ ತಂದೆಯ ಅನುಮತಿ ಇಲ್ಲದೆ ಮಾರಾಟ ಮಾಡಿದ್ದಾರೆ. ನಮಗೆ ಇದರ ಮಾಹಿತಿಯೇ ಇರಲಿಲ್ಲ. ಈಗ ನಾವು ಅವರ ಮೇಲೆ ಮೊಕದ್ದಮೆ ಹಾಕಬಹುದೇ ಅಥವಾ ಅವರು ಮಾರಾಟ ಮಾಡಿರುವ ಪ್ರಕ್ರಿಯೆಯನ್ನು ರದ್ದು ಪಡಿಸಲು ಸಾಧ್ಯ ಇದೆಯೇ? ಕಾನೂನಿನ ಅಡಿಯಲ್ಲಿ ಈ ವಿಷಯದ ಕುರಿತಾಗಿ ನಮಗೆ ಏನೆಲ್ಲಾ ಹಕ್ಕುಗಳಿದೆ ಹಾಗೂ ಅನುಕೂಲತೆಗಳಿದೆ ಎನ್ನುವುದು ಅವರ ಪ್ರಶ್ನೆ ಆಗಿತ್ತು. ಆದರೆ ಇದು ಅವರೊಬ್ಬರ ಸಮಸ್ಯೆ ಅಲ್ಲ ಹಲವು ಕಡೆಗಳಲ್ಲಿ ಪಿತ್ರಾಜಿತ ಆಸ್ತಿಗೆ ಸಂಬಂಧಪಟ್ಟ ಹಾಗೆ ಈ ರೀತಿ ಅನೇಕ ಗೊಂದಲಗಳು ಇವೆ. ಇವುಗಳಿಗೆ ಖ್ಯಾತ ವಕೀಲರೊಬ್ಬರು ಈ ರೀತಿ ಸಲಹೆ ನೀಡಿದ್ದಾರೆ.

ಪಿತ್ರಾರ್ಜಿತ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ವಹಿವಾಟು ಮಾಡಲು ಸಾಧ್ಯವಿಲ್ಲ. ಹಿಂದೂ ಸೆಕ್ರೇಷನ್ ಆಕ್ಟ್ ಪ್ರಕಾರ ಪಿತ್ರಾರ್ಜಿತ ಆಸ್ತಿಯನ್ನು ಯಾವುದೇ ವ್ಯಕ್ತಿ ಮಾರಾಟ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮೂರು ತಲೆಮಾರಿನವರು ಅಧಿಕಾರವನ್ನು ಹೊಂದಿರುತ್ತಾರೆ. ಹಾಗಾಗಿ ಅವರ್ಯಾರ ಅನುಮತಿ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ ಸುಪ್ರೀಂಕೋರ್ಟ್ 2018ರಲ್ಲಿ ಕೊಟ್ಟ ಲೇಟೆಸ್ಟ್ ಜಡ್ಜ್ಮೆಂಟ್ ಅಲ್ಲಿ ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಪಿತ್ರಾಜಿತ ಆಸ್ತಿಯನ್ನು ಒಬ್ಬ ತಂದೆ ಅಂದರೆ ಅವನು ಆ ಕುಟುಂಬದ ಮುಖ್ಯಸ್ಥ ಅಥವಾ ಹಿಂದೂ ಕಾಯ್ದೆಗಳ ಪ್ರಕಾರ ಕರೆಯುವ ಕರ್ತೃ ಆಗಿದ್ದರೆ ಮಕ್ಕಳ ಮತ್ತು ಮೊಮ್ಮಕ್ಕಳ ಯಾರ ಅನುಮತಿ ಇಲ್ಲದೆಯೂ ಆ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬಹುದಾಗಿದೆ.

ಆದರೆ ಸ್ಪಷ್ಟವಾಗಿ ಅದು ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಆ ಸಂದರ್ಭದಲ್ಲಿ ಅವುಗಳನ್ನು ಪ್ರಶ್ನೆ ಮಾಡಲು ಬರುವುದಿಲ್ಲ. ಆ ರೀತಿ ಸಂದರ್ಭಗಳು ಬಿಟ್ಟು ಬೇರೆ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಅನುಮತಿ ಇಲ್ಲದೆ ಮಾರಾಟ ಮಾಡಿದ್ದರೆ ಆ ಮಾರಾಟವನ್ನು ತಡೆಹಿಡಿಯಬಹುದು ಅಥವಾ ಅದು ಕಾನೂನು ಬಾಹಿರ ಎಂದು ತಿಳಿಸಬಹುದಾಗಿದೆ. ಯಾವ ಸಂದರ್ಭಗಳಲ್ಲಿ ಈ ರೀತಿ ಪಿತ್ರಾರ್ಜಿತ ಆಸ್ತಿಯನ್ನು ತಂದೆ ಅಥವಾ ಕರ್ತೃ ಅಥವಾ ಆ ಕುಟುಂಬದ ಮುಖ್ಯಸ್ಥ ಮಾರಾಟ ಮಾಡಬಹುದು ಎಂದರೆ ಕೆಲವೊಂದು ಪಿತ್ರಾರ್ಜಿತ ಸಾಲಗಳಿದ್ದರೆ ಆ ಹೊರೆ ಕುಟುಂಬದ ಮುಖ್ಯಸ್ಥನ ಮೇಲೆ ಬಿದ್ದಿದ್ದರೆ ಆ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ಮಾರಿ ಪಿತ್ರಾರ್ಜಿತವಾಗಿ ಬಂದಿದ್ದ ಆ ಸಾಲವನ್ನು ತೀರಿಸಬಹುದು. ಅದಕ್ಕೆ ಕಾನೂನಿನ ಅಡಿಯಲ್ಲಿ ಅನುಮತಿ ಇರುತ್ತದೆ. ಆದರೆ ಆ ಸಾಲಗಳು ಸದ್ದುದೇಶಗಳಿಂದ ಮಾಡಿದ ಸಾಲ ಆಗಿರಬೇಕು, ಅದು ಅನವಶ್ಯಕ ಸಾಲ ಆಗಿರಬಾರದು ಕಡ್ಡಾಯವಾಗಿ ಕುಟುಂಬದ ಒಳಿತಿಗಾಗಿ ಮಾಡಿದ್ದ ಪಿತ್ರಾರ್ಜಿತ ಸಾಲ ಆಗಿರಬೇಕು.

ಸದುದ್ದೇಶದ ಸಾಲಗಳು ಎಂದರೆ ಕುಟುಂಬದೊಳಗೆ ಇದ್ದ ಯಾವುದೇ ಸದಸ್ಯರ ಮದುವೆಗಾಗಿ ಮಾಡಿದ ಖರ್ಚು ಅಥವಾ ಕುಟುಂಬದ ಸದಸ್ಯರ ಆರೋಗ್ಯ ಸುಧಾರಣೆಗಾಗಿ ಮಾಡಿದ ವೆಚ್ಚ ಅಥವಾ ಕುಟುಂಬದ ಸದಸ್ಯರ ಅಂತಿಮ ಕಾರ್ಯಗಳಿಗೆ ಅಥವಾ ಪಿತ್ರಾರ್ಜಿತ ಋಣಗಳನ್ನು ತೀರಿಸುವ ಸಲುವಾಗಿ ಮಾಡಿದ ಸಾಲಗಳಾಗಿರಬೇಕು. ಆ ಪಿತ್ರಾಜಿತ ಸ್ವತ್ತುಗಳಿಗೆ ಸಂಬಂಧಪಟ್ಟ ಹಾಗೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದ್ದ ಯಾವುದೇ ತೆರಿಗೆ ಅಥವಾ ಬಾಕಿಗಳು ಅಥವಾ ಸಾಲಗಳನ್ನು ತೀರಿಸುವ ಸಲುವಾಗಿ ಮಾಡಿದ್ದ ಸಾಲ, ಇವುಗಳನ್ನು ತೀರಿಸುವ ಸಲುವಾಗಿ ಆಸ್ತಿ ಮಾರಾಟ ಮಾಡಿದ್ದರೆ ಅದು ಪಿತ್ರಾರ್ಜಿತ ಸಾಲವೇ ಆಗುತ್ತದೆ ಅಥವಾ ಸದದ್ದೇಶದ ಸಾಲ ಆಗುತ್ತದೆ. ಈ ವಿಷಯದ ಕುರಿತು ಇರುವ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.