PM ಕಿಸಾನ್ ಸ್ಕೀಮ್ ನಲ್ಲಿ ಲಕ್ಷಾವಧಿ ರೈತರು 2000 ₹ ಗಳಿಂದ ವಂಚಿತ, ಈ ಹಣ ದೊರೆಯುವ ಸಲುವಾಗಿ ಹೀಗೆ ಮಾಡಿ!

ದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ, (Pradham Mantri Garib Kalyan Yojana- PMGKY) ಮೇ 6 ರ ತನಕ 8.19 ಕೋಟಿ ರೈತರಿಗೆ 2000 ರೂಪಾಯಿಗಳ ಮೊದಲ ಕಂತು ದೊರೆತಿದೆ. ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) 20 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜಿಗೆ (Economic Package) ಸಂಬಂಧಪಟ್ಟ 5 ನೇ ಹಾಗೂ ಕೊನೆಯ ಯೋಜನೆಯ ಮಾಹಿತಿ ನೀಡಿದರು. ಯೋಜನೆ ಪ್ರಾರಂಭಿಸಿದ ನಂತರ ಇಲ್ಲಿಯವರೆಗೆ ರೈತರಿಗೆ 2000 ರೂಪಾಯಿಗಳ 5 ಕಂತುಗಳನ್ನು ಕೊಡಲಾಗಿದೆ. ಶೀಘ್ರದಲ್ಲಿ 6 ನೇ ಕಂತನ್ನು ಸಹಿತ ಬಿಡುಗಡೆ ಮಾಡಲಾಗುವದು. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ PM ಕಿಸಾನ್ ಯೋಜನೆಯ ಹಣ (ಜಮೆ)ಬಂದಿಲ್ಲವಾದರೆ ಬೇಸರವಾಗುವ ಕಾರಣವಿಲ್ಲ. PM ಕಿಸಾನ್ ಸ್ಕೀಮ್ ನಲ್ಲಿದ್ದರೂ ಅಕೌಂಟ್ ನಲ್ಲಿ ಹಣ ಬರದ ಕಾರಣವೇನು ತಿಳಿಯಿರಿ.

ಮೋದಿ ಸರಕಾರ 2019 ರಲ್ಲಿ ರೈತರಿಗೆ ಸನ್ಮಾನ ನೀಡುವ ಉದ್ದೇಶದಿಂದ PM ಕಿಸಾನ್ ಯೋಜನೆಯನ್ನು ಆರಂಭಿಸಿದರು. ರೈತ ಸಾಲವಿಲ್ಲದೆ ತನ್ನ ತೋಟ-ಹೊಲವನ್ನು ರಕ್ಷಿಸಿಕೊಳ್ಳಬಹುದು, ಈ ಉದ್ದೇಶದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಯ ಅನುಸಾರವಾಗಿ ಸರಕಾರ ಪ್ರತಿವರ್ಷ 6000 ರೂಪಾಯಿಗಳನ್ನು 2000 ರೂಪಾಯಿಗಳ 3 ಕಂತಿನಲ್ಲಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ ಕೊಡಲಾಗುತ್ತದೆ.

ಸರಕಾರ ಹೊಸ ಆರ್ಥಿಕ ವರ್ಷದಲ್ಲಿ ರೈತರ ಹೆಸರುಗಳನ್ನು ಜೋಡಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಆದ್ದರಿಂದ ಈಗ ಹೊಸ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ರೈತರಿಗೆ ಸರಕಾರ ಬಿಡುಗಡೆ ಮಾಡಿದ ಸೂಚಿಯಲ್ಲಿ ಅಥವಾ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸುವ ಹಾಗೂ ಜೋಡಿಸುವ ಅವಕಾಶ ಮಾಡಿಕೊಡಲಾಗುವದು.

PM ಕಿಸಾನ್ ಸಲುವಾಗಿ ಈ ಕೆಳಗಿನ ಕಾಗದ ಪತ್ರಗಳು ಅಥವಾ ದಾಖಲೆಗಳು ಅವಶ್ಯಕವಾಗಿವೆ.

  • ಆಧಾರ್ ಕಾರ್ಡ್- PM ಕಿಸಾನ್ ಸನ್ಮಾನ ನಿಧಿ ಯೋಜನೆಯ ಲಾಭ ಪಡೆಯುವ ಸಲುವಾಗಿ ರೈತನಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಹೊರತಾಗಿ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.
  • ಬ್ಯಾಂಕ್ ಅಕೌಂಟ್ ನಂಬರ್– ಈ ಯೋಜನೆಯ ಮಾಧ್ಯಮದಿಂದ ಬರುವ ನಿಧಿ ಪಡೆಯಲು ನಿಮ್ಮ ಹೆಸರಿನ ಬ್ಯಾಂಕ್ ಖಾತೆ ಇರುವದು ಅನಿವಾರ್ಯ, ಯಾಕೆಂದರೆ ಸರಕಾರ ಡಿಬಿಟಿ ಯ ಮಾಧ್ಯಮದಿಂದ ಹಣ ಟ್ರಾನ್ಸಫರ್ ಮಾಡುತ್ತದೆ. ಮತ್ತು ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಜೊತೆಗೆ ಲಿಂಕ್ ಆಗಿರಲೇಬೇಕು.

ಹೇಗೆ ಮಾಡಬೇಕು ಅಪ್ ಡೇಟ್?
ರೈತರು ಮನೆಯಿಂದಲೇ ಸರಳವಾಗಿ ತಮ್ಮ ದಾಖಲಾತಿಗಳನ್ನು ಅಪ್ ಲೋಡ್ ಮಾಡಬಹುದಾಗಿದೆ. ಇದರ ಸಲುವಾಗಿ ಅಭ್ಯರ್ಥಿಗೆ ಈ ಯೋಜನೆಯ ವೆಬ್ ಸೈಟ್ pmkisan.gov.in ನಲ್ಲಿ ಕ್ಲಿಕ್ ಮಾಡಿ Farmer Corner ಆಯ್ಕೆ ಮಾಡಬೇಕು. ನಂತರ ನೀವು ಮಾಡಬೇಕಾದ ಬದಲಾವಣೆಯನ್ನು Edit Aadhaar Detail ನಲ್ಲಿ ಕ್ಲಿಕ್ ಮಾಡಿ ಅಪ್ ಡೇಟ್ ಮಾಡಬಹುದಾಗಿದೆ.