ಪಿ ಎಮ್ ಕಿಸಾನ್ ಸಮ್ಮಾನ ನಿಧಿ ಯೋಜನೆಯ 13 ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ತಕ್ಷಣವೇ ಈ ಕೆಲಸ ಮಾಡಿ ಹಣ ಬರುತ್ತೆ!
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಕಳೆದ ಎರಡು ದಿವಸಗಳ ಹಿಂದೆ ಅಂದರೆ ಫೆಬ್ರವರಿ 27 ರಂದು ಮಧ್ಯಾಹ್ನ 3 ಗಂಟೆಗೆ ಈ ಯೋಜನೆಯ 13 ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಕೆಲವು ರೈತರ ಖಾತೆಗೆ ಈ ಕಂತಿನ ಹಣವು ಇದುವರೆಗೆ ಜಮಾ ಆಗಿಲ್ಲ. ಅಂತಹ ರೈತರು ಈ 13 ಕಂತಿನ ಹಣವನ್ನು ಪಡೆಯಲು ಯಾವ ಕೆಲಸ ಮಾಡಬೇಕು ಅನ್ನೋದು ಇಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.
ಫೆಬ್ರವರಿ 27 ರಂದು ಸರ್ಕಾರಿ ಅಧಿಕೃತ ವೆಬ್ಸೈಟ್ ನಲ್ಲಿ 13 ಕಂತಿನ ಹಣವು ಟ್ರಾನ್ಸಫರ್ ಮಾಡುವದರ ಕುರಿತು ಜಾಹಿರಾತು ನೀಡಲಾಗಿತ್ತು. ಜಾಹೀರಾತಿನ ಪ್ರಕಾರ ಆ ದಿನ ಸರಿಯಾಗಿ ಮಧ್ಯಾಹ್ನ ಮೂರು ಗಂಟೆಗೆ ಸರ್ಕಾರವು ರೈತರ ಖಾತೆಗೆ ಹಣವು ಟ್ರಾನ್ಸಫರ್ ಮಾಡಿದೆ. ಅದೆಷ್ಟೋ ರೈತರ ಖಾತೆಗೆ ಹಣ ಜಮಾವಾದ ಕುರಿತು ಮೆಸೇಜ್ ಸಹ ಲಭ್ಯವಾಗಿದೆ. ಆದರೆ ಕೆಲವು ರೈತರ ಖಾತೆಗೆ ಅಂದು ಯಾವುದೇ ಪ್ರಕಾರದ ಹಣ ಬಂದಿಲ್ಲ. ಅಂತಹ ರೈತರು ಚಿಂತಿಸುವ ಅವಶ್ಯಕತೆ ಇಲ್ಲ ಏಕೆಂದರೆ ಈ 13 ಕಂತಿನ ಹಣ ಪಡೆಯಲು ಒಂದು ಮಾರ್ಗವಿದೆ. ಈ ಕೆಲಸದ ಮೂಲಕ ನೀವು ನಿಮ್ಮ ಖಾತೆಗೆ ಪಿ ಎಂ ಕಿಸಾನ್ ಯೋಜನೆಯ 13 ಕಂತಿನ ಹಣವನ್ನು ಪಡೆಯಬಹುದು.
ಮೊದಲನೆಯದಾಗಿ ಈ ಕೆಲಸ ಮಾಡಿ, ಏನೆಂದರೆ ಫೆಬ್ರವರಿ 27 ರಂದು ಸರ್ಕಾರ ಮಧ್ಯಾಹ್ನ 3 ಗಂಟೆಗೆ ಹಣ ವರ್ಗಾವಣೆ ಮಾಡಿದೆ. ಅಂದರೆ ಅಂದು ಬ್ಯಾಂಕ್ ಕಾರ್ಯಕಾಲದ ಮುಕ್ತಾಯದ ನಂತರ ಹಣ ಜಮಾ ಮಾಡಿದ್ದರಿಂದ ಕೆಲವರಿಗೆ ಬ್ಯಾಂಕಿನ ಕಡೆಯಿಂದ ಮೆಸೇಜ್ ಬರದೆ ಇರಬಹುದು. ಹೀಗಾಗಿ ಮೊದಲು ನೀವು ನಿಮ್ಮ ಖಾತೆ ಯಾವ ಬ್ಯಾಂಕಿನಲ್ಲಿ ಇದೆಯೋ ಆ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು ಅಪಡೆಟ್ ಅಂತ ಎಂಟ್ರಿ ಮಾಡಿಕೊಳ್ಳಿ ಅಥವಾ ನಿಮ್ಮ ಹತ್ತಿರ ಎಟಿಎಮ್ ಕಾರ್ಡ ಇದ್ದರೆ ಅದರ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿ ಹಣ ಬಂದಿದೆಯೋ ಅಥವಾ ಇಲ್ಲ ಎಂಬುದು ತಿಳಿದುಕೊಳ್ಳಿ. ಇದರಿಂದ ಈ ಕಂತಿನ ಹಣ ಬಂದಿದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗುತ್ತೆ. ಒಂದು ವೇಳೆ ಎಂಟ್ರಿಯಲ್ಲಿ ಈ ಯೋಜನೆಯ ಯಾವುದೇ ಪ್ರಕಾರದ ಹಣ ಕಾಣದೆ ಇದ್ದಲ್ಲಿ ಮುಂದಿನ ಕೆಲಸ ಮಾಡಿ.
ಒಂದು ವೇಳೆ ನಿಮ್ಮ ಖಾತೆಗೆ ಹಣ ಬಂದಿದ್ದರು ಸಹ ಕೆಲವೊಮ್ಮೆ ಬ್ಯಾಂಕಿನವರು ನೀವು ಯಾವುದೇ ಪ್ರಕಾರದ ಲೋನ್ ಹೊಂದಿದ್ದರೆ ಬ್ಯಾಂಕ್ ನವರು ನಿಮಗೆ ಹೇಳದೆ ಆ ಹಣವನ್ನು ಕಟ್ ಮಾಡಿಕೊಳ್ಳುತ್ತಾರೆ. ನಿಮ್ಮೊಂದಿಗೆ ಸಹ ಈ ರೀತಿ ಯಾಗಿದೆ ಎಂಬುದು ಖಚಿತ ಪಡಿಸಿಕೊಳ್ಳಲು ನೀವು ನೇರವಾಗಿ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯ ಕುರಿತು ಅಲ್ಲಿರುವ ಅಧಿಕಾರಿಗಳನ್ನು ವಿಚಾರಿಸಿ.
ಈ ಮೇಲಿನ ಎಲ್ಲ ಕೆಲಸ ಮಾಡಿ ನಿಮಗೆ ಹಣ ಬಂದಿಲ್ಲ ಅಂತ ಕನ್ಫರ್ಮ್ ಆದಲ್ಲಿ ನೀವು ಈ ಮುಂದಿನ ಕೆಲಸ ಮಾಡಿ. ಮೊದಲಿಗೆ ಪಿಎಮ್ ಕಿಸಾನ್ ಸಮ್ಮಾನ್ ನಿಧಿಯ ಅಧಿಕೃತ ವೆಬ್ಸೈಟ್ ಯಾವುದೇ ಬ್ರೌಸರ್ ನಲ್ಲಿ ಓಪನ್ ಮಾಡಿ. ಆ ವೆಬ್ಸೈಟ್ ನ ಹೋಮ್ ಪೇಜ್ ನಲ್ಲಿ ನಿಮಗೆ ಪೇಮೆಂಟ್ ಸ್ಟೇಟಸ್ ನೋಡಲು ಸಿಗುತ್ತದೆ. ನಿಮ್ಮ ಖಾತೆಯ ಪೇಮೆಂಟ್ ಸ್ಟೇಟಸ್ ನೋಡುವ ಸಲುವಾಗಿ ಈ ಹೋಮ್ ಪೇಜ್ ನಲ್ಲಿ Former Corner ಅಂತ ಒಂದು ಸಬ್ ಹೆಡಿಂಗ್ ಇರುತ್ತೆ ಅದರಲ್ಲಿ ಹಲವಾರು option ಗಳಿರುತ್ತವೆ. ಅವುಗಳಲ್ಲಿ Beneficiary status ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮಗೆ ಬರಬೇಕಾದ ಹಣದ ಸ್ಟೇಟಸ್ ಕಾಣುತ್ತೆ ಅಂದರೆ ಹಣ ಬಂದಿದೆಯೋ, process ನಲ್ಲಿದೆಯೋ ಅಥವಾ pending ನಲ್ಲಿದೆಯೋ ಎಂಬುದು ಗೊತ್ತಾಗುತ್ತೆ.
ಅಧಿಕೃತ ವೆಬ್ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.
Beneficiary Status ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಮೇಲಿನ ಎಲ್ಲ ಪ್ರಯತ್ನ ಮಾಡಿದರು ಸಹ ನಿಮ್ಮ ಹಣದ ಕುರಿತು ಗೊತ್ತಾಗದೆ ಇದ್ದಲ್ಲಿ ಕೊನೆಯದಾಗಿ ನಿಮ್ಮ ಸಮೀಪದಲ್ಲಿರುವ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಈ ಕುರಿತು ವಿಚಾರಣೆ ಮಾಡಬಹುದು. ಇಲ್ಲಿ ನಿಮಗೆ ಹಣ ಬರದೆ ಇರಲು ಮುಖ್ಯ ಕಾರಣ ಗೊತ್ತಾಗುವದು. ಒಂದು ವೇಳೆ ಇಲ್ಲಿಯೂ ಸಹ ನಿಮಗೆ ಪರಿಹಾರ ಸಿಗದೆ ಇದ್ದಲ್ಲಿ ಪಿಎಮ್ ಕಿಸಾನ್ ಯೋಜನೆಯ ಟೋಲ್ ಫ್ರೀ ನಂಬರಗೆ ಕಾಲ್ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. ಟೋಲ್ ಫ್ರೀ ನಂಬರ್ ಮುಖಾಂತರವು ನಿಮಗೆ ನಿಮ್ಮ ಹಣದ ಬಗ್ಗೆ ಮಾಹಿತಿ ದೊರೆಯದೆ ಇದ್ದಲ್ಲಿ ವೆಬ್ಸೈಟ್ನಲ್ಲಿ helpdisk-query form ನ ಮೂಲಕ ನೀವು ನಿಮ್ಮ ಸಮಸ್ಯೆಯ ಕುರಿತು ಒಂದು query ಯನ್ನು raise ಮಾಡಬಹುದು.
PM-Kisan Helpline No ಸಲುವಾಗಿ ಇಲ್ಲಿ ಕ್ಲಿಕ್ ಮಾಡಿ.
Helpdesk -query form ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮೇಲಿನ ಮಾಹಿತಿ ನಿಮಗೆ ತುಂಬಾ ಉಪಯುಕ್ತ ಅನಿಸಿದರೆ ಇದನ್ನು ಇನ್ನಿತರಿಗೆ ಶೇರ್ ಮಾಡಿ. ಪಿ ಎಂ ಕಿಸಾನ್ ಸಮ್ಮಾನ್ ನಿಧಿಯ 13 ನೆಯ ಕಂತಿನ ಹಣವನ್ನು ಹಿಂಪಡೆಯಲು ಏನು ಮಾಡಬೇಕು? ಯಾವ ವೆಬ್ಸೈಟ್ ಗೆ ಹೋಗಬೇಕು? ಟೋಲ್ ಫ್ರೀ ನಂಬರ್ ಯಾವುದು? ಬೆನೆಫೀಸಿಯಾರಿ ಸ್ಟೇಟಸ್ ಚೆಕ್ ಹೇಗೆ ಮಾಡುವದು? ಕ್ಯೂರಿ ರೇಜ್ ಹೇಗೆ ಮಾಡುವದು? ಈ ಎಲ್ಲ ಸಂಗತಿಗಳ ಕುರಿತು ತಿಳಿದುಕೊಳ್ಳಲು ಕೆಳಗಿನ ವೀಡಿಯೋ ನೋಡಿ.