ಪಿಎಂ ಕಿಸಾನ್ ಯೋಜನೆಯಿಂದ ಮೂರು ಲಕ್ಷದವರೆಗೆ ಸಾಲ, ರೈತರ ಪಾಲಿಗೆ ಸಿಹಿಸುದ್ದಿ…
ರೈತರ ಶ್ರೇಯೋಭಿವೃದ್ಧಿಗೆ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ತಂದಿದೆ. ಇದರಿಂದ ರೈತರಿಗೆ ಮೂರು ಲಕ್ಷದವರೆಗೆ ಸಹಾಯಧನ ಸಿಗಲಿದೆ. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಹಸು ಎಮ್ಮೆ ಮೇಕೆ ಮತ್ತು ಮೀನು ಸಾಕುತ್ತಿರುವ ಎಲ್ಲಾ ರೈತರಿಗೆ ಸರ್ಕಾರ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದೆ. ಪಶು ಸಂಗೋಪನೆಯನ್ನು ಉತ್ತೇಜಿಸುವ ಜೊತೆಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮತ್ತು ಮಾಂಸದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಕಾರ್ಡ್ ಸಹಾಯದಿಂದ ರೈತರಿಗೆ ಸುಲಭವಾಗಿ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆಯುವ ಅವಕಾಶಗಳನ್ನು ಸರ್ಕಾರ ಮಾಡಿಕೊಟ್ಟಿದೆ.
ಈಗಾಗಲೇ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಲ್ಲಿ ಇರುವ ರೈತರುಗಳು ಈ ಕಾರ್ಡ್ ಪಡೆಯಬಹುದಾಗಿದೆ. ಈ ಕಾರ್ಡ್ ಇಂದ ಸರ್ಕಾರ ಮಾಡಿರುವ ಹೊಸ ಯೋಜನೆ ಅಡಿ 7% ರಷ್ಟು ಬಡ್ಡಿಯಲ್ಲಿ ಮೂರು ಲಕ್ಷದವರೆಗೆ ಸಾಲ ಪಡೆಯಬಹುದು. ಸಾಲ ತೆಗೆದುಕೊಂಡ ಒಂದು ವರ್ಷದ ಒಳಗೆ ಸಾಲ ಮರುಪಾವತಿ ಮಾಡುವಂತಹ ರೈತರಿಗೆ ಹೆಚ್ಚುವರಿ ಸಬ್ಸಿಡಿ ನೀಡಿ ಉತ್ತೇಜಿಸಲಾಗುತ್ತದೆ. ರೈತರ ತಪ್ಪದೇ ಐದು ವರ್ಷಗಳ ಒಳಗೆ ಕಡ್ಡಾಯವಾಗಿ ಈ ಯೋಜನೆ ಅಡಿ ತೆಗೆದುಕೊಂಡಿರುವ ಸಾಲದ ಮೊತ್ತವನ್ನು ತೀರಿಸಲೇಬೇಕು. ಇಷ್ಟೆಲ್ಲಾ ಉಪಯೋಗ ಇರುವ ಈ ಕಾರ್ಡನ್ನು ಪಡೆಯುವ ಇಚ್ಛೆ ಎಲ್ಲ ರೈತರಿಗೂ ಇರುತ್ತದೆ ಅದಕ್ಕಾಗಿ ನೀವು ಮೊದಲು ಈ ಕೆಲಸ ಮಾಡಿ ನಿಮ್ಮ ಹತ್ತಿರದಲ್ಲೇ ಇರುವ ಬ್ಯಾಂಕ್ ಯಾವುದಾದರೂ ಒಂದಕ್ಕೆ ಭೇಟಿ ಕೊಟ್ಟು ಈ ಯೋಜನೆ ಅರ್ಜಿ ಪ್ರತಿಯನ್ನು ತೆಗೆದುಕೊಂಡು ಸಂಬಂಧಿತ ವಿವರಗಳನ್ನು ನಮೂದಿಸಿ ಜೊತೆಗೆ ಕೆವೈಸಿ ಕಾಗಿ ಕೆಲವು ದಾಖಲೆಗಳನ್ನು ನೀಡಬೇಕು.
ಇದೆಲ್ಲವುಗಳ ಪರಿಶೀಲನೆಯನ್ನು ಬ್ಯಾಂಕ್ ನಡೆಸಿ 15 ದಿನಗಳ ಒಳಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್, ಪ್ರಾಣಿಗಳ ಆರೋಗ್ಯ ಪ್ರಮಾಣ ಪತ್ರ, ಮತದಾರರ ಗುರುತು ಚೀಟಿ, ಬ್ಯಾಂಕ್ ಖಾತೆ ಪುಸ್ತಕದ ನಕಲಿ ಪ್ರತಿ, ರೈತ ಹೊಂದಿರುವ ಜಮೀನು ದಾಖಲೆಗಳು ಹಾಗೂ ಪಾಸ್ಪೋರ್ಟ್ ಅಳತೆಯ ಫೋಟೋಗಳು ಇವುಗಳನ್ನು ದಾಖಲೆಗಳಾಗಿ ಒದಗಿಸಬೇಕು. ಎಲ್ಲದರಲ್ಲೂ ಕೂಡ ರೈತರ ಹೆಸರು ಸರಿಯಾಗಿ ತಾಳೆ ಆಗಬೇಕು ಇದೆಲ್ಲ ದಾಖಲಾತಿ ಸರಿ ಇದ್ದರೆ ನೇರವಾಗಿ ನೀವು ನೀಡಿರುವ ಬ್ಯಾಂಕ್ ಡೀಟೇಲ್ಸ್ ನ ಬ್ಯಾಂಕ್ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗಲಿದೆ. ನಂತರ ಹಣ ಬಳಸಿಕೊಂಡು ನೀವು ನಿಮ್ಮ ಉದ್ದೇಶವ ಸಾಕರಗೊಳಿಸಿಕೊಳ್ಳಬಹುದು. ಈಗಾಗಲೇ ಪಿಎಮ್ ಕಿಸಾನ್ ಯೋಜನೆ ಅಡಿ ರೈತರಿಗೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ಆರಿಸು ಸಾವಿರ ರೂಪಗಳು ಸಹಾಯಧನವಾಗಿ ಸಿಗುತ್ತವೆ.
ಒಂದು ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿರುವ ಸುಮಾರು 14 ಕೋಟಿ ರೈತರುಗಳು ಈ ಪಿಎಂ ಕಿಸಾನ್ ಯೋಜನೆಯ ಉಪಯೋಗ ಪಡೆಯುತ್ತಿದ್ದಾರಂತೆ. ಇಷ್ಟೆಲ್ಲಾ ಅನುಕೂಲತೆ ಇದ್ದರೂ ಇನ್ನು ಎಷ್ಟೋ ಮಂದಿ ಯೋಜನೆಗೆ ಫಲಾನುಭವಿಗಳಾಗಿಲ್ಲ. ಇದಕ್ಕೆಲ್ಲ ಮಾಹಿತಿ ಕೊರತೆಯು ಕಾರಣ ಆಗಿದೆ. ಆದ್ದರಿಂದ ಈ ಮಾಹಿತಿಯನ್ನು ಅತಿ ಹೆಚ್ಚು ಜನರೊಂದಿಗೆ ಹಂಚಿಕೊಳ್ಳಿ ಆ ಮೂಲಕ ವಿಷಯ ಎಲ್ಲ ರೈತರಿಗೂ ತಲುಪಿ ದೇಶದಾದ್ಯಂತ ಎಲ್ಲ ರೈತರು ಕೂಡ ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತಾಗಲಿ.