Video: ಪೊಲೀಸರು ಬೈಕ್ ಸವಾರನಿಗೆ ಫೈನ್ ಹಾಕಿದಾಗ ಹುಡುಗ ಮಾಡಿದ ಆಕ್ಟಿಂಗ್ ಅಲ್ಲ, ಓವರ್ ಆಕ್ಟಿಂಗ್ ನೋಡಿ!

ಹೆಚ್ಚು ಕಡಿಮೆ ವಯಸ್ಸಿನ ಯುವಕರು ಅಥವಾ ಹುಡುಗರು ರಸ್ತೆಯ ಮೇಲೆ ಜನರ ಗಮನವನ್ನು ತಮ್ಮ ಕಡೆಗೆ ಸೆಳೆಯುವ ಸಲುವಾಗಿ ಬೈಕ್ ನಡೆಸುವಾಗ ವಿಚಿತ್ರ ರೀತಿಯ ಸ್ಟಂಟ್ ಗಳನ್ನು ಮಾಡುತ್ತಿರುತ್ತಾರೆ. ಇವರಲ್ಲಿ ಹೆಚ್ಚಿನವರು 18 ರಿಂದ 25 ವಯಸ್ಸಿನವರಾಗಿರುತ್ತಾರೆ. ಈ ಸಂದರ್ಭದಲ್ಲಿ ಇಂತಹ ಹುಡುಗರು ಜೋಶ್ ನಲ್ಲಿ ತಮ್ಮ ಹೋಶ್ ಕಳೆದುಕೊಂಡು ಬಿಡುವದಲ್ಲದೆ ಇನ್ನೊಬ್ಬರಿಗೂ ಅಪಾಯವನ್ನು ಉಂಟು ಮಾಡುತ್ತಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿಯ ದೃಶ್ಯ ನೋಡಿದ ನಂತರ ನಗು ತಡೆದುಕೊಳ್ಳುವುದು ಕಠಿಣವಾಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಪೊಲೀಸರು ಒಬ್ಬ ಬೈಕ್ ಸವಾರನಿಗೆ ಫೈನ್ ಹಾಕಿದ್ದಾರೆ. ಫೈನ್ ನಿಂದ ಪಾರಾಗಲು ಬೈಕ್ ಸವಾರ್ ಮಾಡಿದ ನಾಟಕ ತುಂಬಾ ಯೂನಿಕ್ ಆಗಿದೆ. ಆತ ಮಾಡಿದರೆ ಆಕ್ಟಿಂಗ್ ಅಲ್ಲ ಓವರ್ ಆಕ್ಟಿಂಗ್ ನೀವು ಒಮ್ಮೆ ನೋಡಲೇಬೇಕು.

ಈ ವಿಡಿಯೋದಲ್ಲಿ ನಾಲ್ಕು ಹುಡುಗರು ಕೂಡಿ ಒಂದೇ ಬೈಕ್ ಮೇಲೆ ಪ್ರವಾಸ ಮಾಡುತ್ತಿದ್ದರು. ಅದನ್ನು ಗಮನಿಸಿದ ಪೊಲೀಸರು ಅವರನ್ನು ದಾರಿ ಮಧ್ಯದಲ್ಲಿ ತಡೆದು ನಿಲ್ಲಿಸಿ ಫೈನ್ ಮಾಡುತ್ತಾರೆ. ಈ ಫೈನ್ ನಿಂದ ಉಳಿದುಕೊಳ್ಳಲು ನಾಲ್ಕರಲ್ಲಿ ಒಬ್ಬ ಹುಡುಗ ತುಂಬಾ ವಿಚಿತ್ರವಾಗಿ ವರ್ತಿಸಲು ಶುರುಮಾಡುತ್ತಾನೆ. ಆತ ಫೀಟ್ಸ್ ಬಂದ ರೀತಿಯಲ್ಲಿ ನಟಿಸಿದ್ದಾನೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Gidda company (@gieddee)

ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಹುಡುಗನಿಗೆ 440 ವೋಲ್ಟ ನ ಶಾಕ್ ತಗಲಿದ ಹಾಗೆ ಆಕ್ಟಿಂಗ್ ಮಾಡಿದ್ದಾನೆ. ಇದನ್ನು ಕಂಡ ಪೊಲೀಸರು ಹುಡುಗನಿಗೆ ಗ್ಲಾಸಿನಲ್ಲಿ ನೀರು ಕೊಡುತ್ತಾರೆ. ಹುಡುಗ ಆ ಗ್ಲಾಸ್ ನಿಂದ ತಾನೇ ತನ್ನ ಮುಖಕ್ಕೆ ಹೊಡೆದುಕೊಳ್ಳಲು ಯತ್ನಿಸಿದ್ದಾನೆ. ಆತನ ನಾಟಕ ನಾವೇ ಗುರುತಿಸಿದಾಗ ಪೊಲೀಸರನ್ನು ಗುರುತಿಸಲು ಎರಡು ಸೆಕೆಂಡ್ ಕೂಡ ತಗಲುವುದಿಲ್ಲ ಅಲ್ವಾ?