Post Office Scheme:ಪೋಸ್ಟ್‌ನ ಅದ್ಭುತ ಯೋಜನೆ, ತಿಂಗಳಿಗೆ ಕೇವಲ 1500 ರೂಪಾಯಿ ಹೂಡಿಕೆ ಮಾಡುವ ಮೂಲಕ 35 ಲಕ್ಷ ರೂಪಾಯಿಗಳನ್ನು ಪಡೆಯಿರಿ!

ಪ್ರಸ್ತುತ ಮಾರುಕಟ್ಟೆಯಲ್ಲಿ  ಹೂಡಿಕೆ(investment) ಮಾಡುವ ಸಲುವಾಗಿ ಅನೇಕ ಪರ್ಯಾಯಗಳು ಉಪಲಬ್ಧವಾಗಿವೆ.  ಅದರಲ್ಲಿ ಅನೇಕ ಯೋಜನೆಗಳು ಆಕರ್ಷಕ ರಿಟರ್ನ್ಸ್ ಕೊಡುತ್ತವೆ ಎಂಬುದು ಹಲವಾರು ಜನರ ತಿಳುವಳಿಕೆಯಾಗಿದೆ. ಅವುಗಳಲ್ಲಿಯ ಕೆಲವು ಯೋಜನೆಗಳು  ತುಂಬಾ ಅ#ಪಾಯ ಹೊಂದಿದ ಯೋಜನೆಯಾಗಿವೆ.   ಅನೇಕ ಹೂಡಿಕೆದಾರರು ಕಡಿಮೆ ಲಾಭವನ್ನು ಹೊಂದಿದ್ದರೂ ಸಹ ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಬಯಸುತ್ತಾರೆ.  ಏಕೆಂದರೆ ಇದು ಕಡಿಮೆ ಅಪಾ#ಯವನ್ನು ಹೊಂದಿರುತ್ತದೆ.  ಆದರೆ  ಕೆಲವು ಹೂಡಿಕೆ ಯೋಜನೆಗಳು ಮಾತ್ರ  ಉತ್ತಮ ಆದಾಯ ಮತ್ತು ಕಡಿಮೆ ಅ#ಪಾಯವನ್ನು ನೀಡುತ್ತವೆ.

ನೀವು ಸಹ ಹಣವನ್ನೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್ ನ ಈ ಯೋಜನೆಯು ನಿಮಗೆ ತುಂಬಾ ಉಪಾಯಕಾರಿಯಾಗಿದೆ. ಭಾರತೀಯ ಪೋಸ್ಟ್ ವಿಭಾಗದ ಗ್ರಾಮ ಸುರಕ್ಷಾ ಯೋಜನೆ ಇದೊಂದು ಉತ್ತಮ ಹೂಡಿಕೆ ಮಾಡುವ ಆಯ್ಕೆ ಯಾಗಿದೆ. ಈ ಯೋಜನೆಯಲ್ಲಿ ಕಡಿಮೆ ಅ#ಪಾಯ ಮತ್ತು ಉತ್ತಮ ರಿಟರ್ನ್ಸ್ ನಿಮಗೆ ದೊರೆಯುತ್ತದೆ. ಗ್ರಾಮ ಸುರಕ್ಷಾ ಯೋಜನೆಯ ಅಡಿಯಲ್ಲಿ, ಬೋನಸ್ ದೊಂದಿದೆ ವಿಮಾದ ಮೊತ್ತವನ್ನು 80 ರ ವಯಸ್ಸಿನಲ್ಲಿ ಅಥವಾ ಸಂಬಂಧಿತ ಗ್ರಾಹಕರ ಮೃತ್ಯುವಾದರೆ ಈ ಯೋಜನೆಯ ಕಾಯ್ದೆಯ ಅನುಸಾರ ಆ ವ್ಯಕ್ತಿಯ ವಾರಸುದಾರರಿಗೆ ಅಥವಾ ನಾಮನಿರ್ದೇಶನ ಮಾಡಿದ ವ್ಯಕ್ತಿಗೆ ಹಣ ಕೊಡಲಾಗುತ್ತದೆ.

ಈ ಯೋಜನೆಯ ನಿಯಮ ಮತ್ತು ಷರತ್ತುಗಳು: 19 ರಿಂದ 55 ವಯಸ್ಸಿನವರೆಗಿನ ಭಾರತದ ಯಾವುದೇ ನಾಗರಿಕ ಗ್ರಾಮ ಸುರಕ್ಷಾ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ ಕಡಿಮೆಯಂದರೆ 10 ಸಾವಿರದಿಂದ 10 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಲು ಬರುತ್ತದೆ. ಈ ಯೋಜನೆಯ ಪ್ರೀಮಿಯಂ, ಮಾಸಿಕ, ತ್ರೈಮಾಸಿಕ, ಆರುತಿಂಗಳು ಅಥವಾ ವಾರ್ಷಿಕ ಈ ರೀತಿಯಾಗಿ ಹಣ ಹೂಡಿಕೆ ಮಾಡಬಹುದು.

ಗ್ರಾಹಕರಿಗೆ ಪ್ರಿಮಿಯಮ ತುಂಬುವ ಸಲುವಾಗಿ 30 ದಿವಸಗಳ ಕಾಲಾವಕಾಶ ಸಹ ಕೊಡಲಾಗುತ್ತದೆ. ಪಾಲಿಸಿ ಚಾಲ್ತಿಯಲ್ಲಿರುವಾಗ ಯಾವುದೇ ಕಾರಣದಿಂದ ಕಂತು ತುಂಬಲು ಆಗದಿದ್ದರೆ, ಗ್ರಾಹಕ ಹಿಂದುಳಿದ ಕಂತನ್ನು ತುಂಬಿ ಪಾಲಿಸಿಯನ್ನು ಪುನರುಜ್ಜೀವನ ಸಹ ಮಾಡಬಹುದು.

3 ವರ್ಷಗಳ ನಂತರ ಸರೆಂಡರ್ ಮಾಡಬಹುದು.:ಪಾಲಿಸಿ ಗ್ರಾಹಕರು 3 ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡಬಹುದು ಆದರೆ  ಅಂತಹ ಸಂದರ್ಭದಲ್ಲಿ  ಪಾಲಿಸಿ ನಿಲ್ಲಿಸಿದ ಗ್ರಾಹಕರಿಗೆ ಯೋಜನೆಯ ಯಾವುದೇ ಲಾಭ ದೊರೆಯುವದಿಲ್ಲ. 

ಪಾಲಿಸಿಯ ದೊಡ್ಡ ವೈಶಿಷ್ಟ್ಯವೆಂದರೆ ಭಾರತೀಯ ಅಂಚೆ ಇಲಾಖೆ ನೀಡುವ ಬೋನಸ್.

ಪ್ರತಿ 1,000 ರೂ.ಗೆ ವರ್ಷಕ್ಕೆ 65 ರೂ.ಗಳ ಬೋನಸ್ ನೀಡುವ  ಭರವಸೆ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನೂ ಪಡೆಯಬಹುದು. ಆದರೆ ಪಾಲಿಸಿಯನ್ನು ಖರೀದಿಸಿದ 4 ವರ್ಷಗಳ ನಂತರ  ಈ ಪ್ರಯೋಜನವನ್ನು ಪಡೆಯಬಹುದು. ಅಂದರೆ ಪಾಲಿಸಿದಾರರು ನಾಲ್ಕು ವರ್ಷಗಳ ನಂತರ ತಮ್ಮ ಹೂಡಿಕೆಯ ಮೇಲೆ ಲೋನ್ ಪಡೆಯಬಹುದು.

ಪಾಲಿಸಿ ಮೆಚ್ಯೂರಿಟಿ ನಂತರದ ಪ್ರಯೋಜನಗಳು.

ಒಬ್ಬ 19 ವರ್ಷದ ವ್ಯಕ್ತಿ  10 ಲಕ್ಷ ರೂಪಾಯಿಯ ಗ್ರಾಮ ಸುರಕ್ಷಾ ಪಾಲಿಸಿ ತೆಗೆದುಕೊಂಡಿದ್ದರೆ ಆತನಿಗೆ, 55 ವರ್ಷದ ಸಲುವಾಗಿ ಮಾಸಿಕ ಪಾಲಿಸಿ 1515 ರೂಪಾಯಿ, 58 ವರ್ಷಗಳ ಸಲುವಾಗಿ ಮಾಸಿಕ ಪ್ರೀಮಿಯಂ 1463 ರೂಪಾಯಿ, ಮತ್ತು 60 ವರ್ಷಗಳ ಸಲುವಾಗಿ 1411 ರೂಪಾಯಿಗಳು ತುಂಬಾ ಬೇಕಾಗುವದು. ಪಾಲಿಸಿ ಖರೀದಿದಾರರಿಗೆ 55 ವರ್ಷಗಳ  ನಂತರ 31.60 ಲಕ್ಷ ರೂಪಾಯಿ, 58 ವರ್ಷಗಳ ನಂತರ 33.40 ಲಕ್ಷ ರೂಪಾಯಿ ಮತ್ತು 60 ವರ್ಷಗಳ ಸಲುವಾಗಿ ಮ್ಯಾಚುರಿಟಿ ಲಾಭ 34.60 ಲಕ್ಷ ರೂಪಾಯಿಗಳು ದೊರೆಯುತ್ತವೆ.

ಈ ಯೋಜನೆಯ ಮಾಹಿತಿ ಇಲ್ಲಿ ಪಡೆಯಬಹುದು.

ಯೋಜನೆಯ ವಿವರಗಳನ್ನು ಪಡೆಯಲು,  ಜೊತೆಗೆ ಸ್ಕೀಮ್ ತೆಗೆದುಕೊಂಡ ನಂತರ ನಾಮಿನಿ ಹೆಸರು ಅಥವಾ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸುವ ಸಲುವಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರು ಟೋಲ್ ಫ್ರೀ ಸಹಾಯವಾಣಿ 1800 180 5232/155232 ಗೆ ಕರೆ ಮಾಡಬಹುದು ಅಥವಾ ಅಧಿಕೃತ ವೆಬ್‌ಸೈಟ್ www.postallifeinsurance.gov.in ಗೆ ಭೇಟಿ ನೀಡಬಹುದು.