PPE ಕಿಟ್ ತೊಟ್ಟು ಸಖತ್ ಡಾನ್ಸ್ ಮಾಡಿದ ಡಾಕ್ಟರ್; 5 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದ ವೈರಲ್ ವಿಡಿಯೋ!
ನಮ್ಮ ಬದಿಯ ರಾಜ್ಯವಾದ ಮಹಾರಾಷ್ಟ್ರ ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಕೋರೊನಾ ಮಹಾಮಾರಿಯಿಂದ ಮುಕ್ತರಾಗಿದ್ದಾರೆ. ಜುಲೈ ತಿಂಗಳ ಪ್ರಾರಂಭದಲ್ಲಿ ಒಂದೇ ದಿನಕ್ಕೆ 8018 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅದರಿಂದ ಇದುವರೆಗೆ ಕೋರೊನಾ ಸೋಂಕಿನಿಂದ ಮುಕ್ತರಾದವರ ಸಂಖ್ಯೆ ಒಂದು ಲಕ್ಷ ಒಂದು ಸಾವಿರದ 172 ರಷ್ಟಾಗಿದೆ. ಗುರುವಾರ ಅತಿ ಹೆಚ್ಚು ಗುಣಮುಖರಾದ ರೋಗಿಗಳು ಮುಂಬೈ ಮಂಡಳಿಯಿಂದ ಬಂದಿದ್ದು, 7033 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಕರೋನಾ ಬಿಕ್ಕಟ್ಟಿನಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲರೂ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ವೈದ್ಯರು ಸ್ವಲ್ಪವೂ ದಣಿವಾರಿಸಿಕೊಳ್ಳದೆ , ಅಥವಾ ವಿಶ್ರಾಂತಿ ತಗೆದುಕೊಳ್ಳದೆ ಹಗಲು ರಾತ್ರಿ ರೋಗಿಗಳನ್ನು ಗುಣಮುಖರನ್ನಾಗಿ ಮಾಡಲು ಸತತ ಪ್ರಯತ್ನ ಪಡುತ್ತಿದ್ದಾರೆ, ಇಂತಹ ಸಂಕಟದ ಪರಸ್ಥಿತಿಯಲ್ಲಿ ಕೆಲವು ವೈದ್ಯರು ತಮ್ಮನ್ನು ತಾವೇ ಸಂತೋಷವಾಗಿಡಲು ಪ್ರಯತ್ನಪಡುತ್ತಿರುವದು ಸಹ ಕಂಡು ಬರುತ್ತಿದೆ. ಇಂತಹದೇ ಒಂದು ವೈದ್ಯರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅದರಲ್ಲಿ ವೈದ್ಯರು ಡ್ಯಾನ್ಸಿಂಗ್ ಮಾಡುತ್ತಿರುವದನ್ನು ಕಾಣಬಹುದು. ಗರ್ಮಿ ಈ ಹಾಡಿನ ಮೇಲಿನ ಡ್ಯಾನ್ಸ್ ನ ವಿಡಿಯೋ ಇದುವರೆಗೆ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರು ವ್ಯೂವ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಡಾಕ್ಟರ್ ರೀಚಾ ನೇಗಿಯವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಎಲ್ಲ ವೈದ್ಯರು ವರುಣ್ ಧವನ್ ಮತ್ತು ನೋರಾ ಫತೇಹಿಯವರು ಅಭಿನಯಿಸಿದ ಗರ್ಮಿ ಈ ಹಾಡಿನ ಮೇಲೆ ಕುಣಿಯುವದನ್ನು ಕಾಣಬಹುದು. ಈ ವೈದ್ಯರು PPE ಕಿಟ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದರಿಂದ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಚರ್ಚೆಯ ವಿಷಯವಾಗಿದೆ.
ಡಾಕ್ಟರ್ ರೀಚಾ ನೇಗಿಯವರು ಪೋಸ್ಟ್ ಮಾಡುತ್ತ ಬರೆದಿದ್ದಾರೆ, ‘ ಈ ಸಂಕಟದ ಸಮಯದಲ್ಲಿ ಮತ್ತು ಕುದಿಯುತ್ತಿರುವ ಕಿಟ್ ನಲ್ಲಿ ಸಹ ನಾವು ರೋಗಿಗಳ ಸೇವೆ ಮಾಡುತ್ತಿದ್ದೇವೆ. ನಾವು ಈ ಪರಸ್ಥಿತಿಯಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದೇ ನಕಾರಾತ್ಮಕತೆಯನ್ನು ಹರಡಲು ಬಿಡುವದಿಲ್ಲ”. ಜುಲೈ 1 ರಂದು ಪೋಸ್ಟ್ ಮಾಡಿದ ಈ ವಿಡಿಯೋ ಇದುವರೆಗೆ ಸುಮಾರು 4 ಲಕ್ಷ 91,917 ಸಲ ವೀಕ್ಷಣೆ ಮಾಡಲಾಗಿದೆ.