ಪ್ರೀತಿಯ ಸಂಕೇತದ ಕೆಂಪು ದಿನದಂದು, ಮರೆಯಬೇಡಿ, ಪುಲ್ವಾಮಾದ ಕಪ್ಪು ದಿನ. ಅಷ್ಟಕ್ಕೂ ಹೇಗೆ ನಡೆದಿತ್ತು ಕುತಂತ್ರ? ನೋಡಿ Video.
ಭಾರತ ಶಾಂತಿಪ್ರೀಯ ದೇಶವಾಗಿರುವದು ಜಗತ್ತಿಗೆ ಗೊತ್ತಿದೆ. ಭಾರತೀಯರ ರಕ್ತದಲ್ಲಿ ಮತ್ತು ಸಂಸ್ಕೃತಿಯಲ್ಲಿ ಇದು ಮೊದಲಿನಿಂದ ಸಮ್ಮಳಿತವಾಗಿ ಬಂದಿದೆ. ಆದರೆ ಯಾರಾದರೂ ನಮ್ಮ ದೇಶದ ಮೇಲೆ ಕೆಟ್ಟ ದೃಷ್ಟಿ ಹಾಕಿದರೆ ಆ ಕಣ್ಣುಗಳನ್ನು ಅದೇ ಸಮಯದಲ್ಲಿ ಕಿತ್ತಿ ಹಾಕುವ ಶಕ್ತಿಯು ನಮ್ಮ ದೇಶ ಹೊಂದಿದೆ.
ಒಳಗಿನ ದುಷ್ಟ ಶಕ್ತಿಗಳ ಜೊತೆಗೆ ಕೂಡಿ ಹೊರಗಿನವರು ಒಮ್ಮೊಮ್ಮೆ ನಮ್ಮನ್ನು ಹೆದರಿಸಲು ವಿವಿಧ ಕುತಂತ್ರಗಳನ್ನು ಮಾಡುತ್ತಿರುತ್ತಾರೆ. ಭಾರತೀಯರು ಇಂಥದ್ದಕ್ಕೆಲ್ಲ ಹೆದರುವವರಲ್ಲ ಎಂಬುದನ್ನು ಪ್ರತಿಬಾರಿಯೂ ತೋರಿಸಿಕೊಡುತ್ತಾರೆ.
ನಾಲ್ಕು ವರ್ಷಗಳ ಹಿಂದೆ ಇದೇ ದಿನ (14 ಫೆಬ್ರವರಿ) ದಂದು ನಮ್ಮ ರಾಷ್ಟ್ರ ಕಾಯುವ ಸೈನಿಕರ (CRPF ಜವಾನರು) ಮೇಲೆ ಎದುರಿನಿಂದ ಬರದೆ ಹೇಡಿಯಂತೆ ಹಿಂದಿನಿಂದ ಬಂದು ಆತ್ಮಾಹುತಿ ಬಾಂಬ್ ಸಿಡಿಸಿ ವಾಹನದಲ್ಲಿ ಹೋಗುತ್ತಿದ್ದ ಯೋಧರಿಗೆ ಕ್ಷಣಾರ್ಧದಲ್ಲಿ ಬಲಿ ತೆಗೆದುಕೊಂಡರು. ಈ ಸುದ್ದಿ ತಿಳಿದ ನಂತರ ಭಾರತೀಯರ ರಕ್ತ ಆ ದಿನ ಅಕ್ಷರಶಃ ಕುದಿಯತೊಡಗಿತ್ತು.
ನಂತರ ಸರಕಾರ CRPF ಜವಾನರ ಈ ಬಲಿದಾನವನ್ನು ವ್ಯರ್ಥ ಹೋಗಗೊಡಲಿಲ್ಲ. ಕೆಲವೇ ದಿನಗಳಲ್ಲಿ ಸರಕಾರ ಸರಿಯಾಗಿ ಇದರ ಸೇಡು ತಿರಿಸಿಕೊಂಡಿತು. ಆದರೂ ನಮ್ಮ ಜವಾನರ ಮೇಲೆ ಆದ ಆ ಕೆಟ್ಟ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
14 ಫೆಬ್ರುವರಿ 2019 ರಂದು ನಮ್ಮ 40 ಜವಾನರನ್ನು ಹೊತ್ತು ವಾಹನ ದಕ್ಷಿಣ ಕಾಶ್ಮೀರದ ಪುಲ್ವಾಮಾದ ಹೆದ್ದಾರಿಯಿಂದ ಹೋಗುತ್ತಿರುವಾಗ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ದಾಳಿ ಮಾಡಿದ ಬೆನ್ನಲ್ಲೇ ಉಗ್ರವಾದಿ ಸಂಘಟನೆ ‘ಜೈಶ್ ಇ ಮೊಹಮ್ಮದ್’ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಸದ್ಯ ಈ ಆತ್ಮಾಹುತಿ ದಾಳಿಯನ್ನು ಯಾವ ರೀತಿ ಮಾಡಿದ್ದರು ಮತ್ತು ನಮ್ಮ CRPF ಜವಾನರನ್ನು ಹೇಗೆ ಬಲಿ ತೆಗೆದುಕೊಂಡರು ಎಂಬುದನ್ನು ತೋರಿಸುವ ವಿಡಿಯೋ ದೃಶ್ಯ ನಿಮ್ಮ ಮುಂದೆ ತಂದಿದ್ದೇವೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ರೇಸರ್ ಫೋಜಿ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಸಂಖ್ಯೆಯಲ್ಲಿ ವೈರಲ್ ಆಗಿದ್ದು ಈ ವಿಡಿಯೋಗೆ ನೆಟ್ಟಿಗರು 1 ಮಿಲಿಯನ್ ಗಿಂತಲೂ ಹೆಚ್ಚು ಮೆಚ್ಚುಗೆಯನ್ನು ನೀಡಿದ್ದಾರೆ.