ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ ಮನೆಗಾಗಿ ಬ್ಯಾಂಕ್ ಖಾತೆ ವಿವರ ನೀಡಿದ ರೈತನ ಮಗಳ ಖಾತೆಗೆ ಬಂತು ಬರೋಬ್ಬರಿ 10 ಕೋಟಿ! ಆಮೇಲೆ…
ಕೆಲವೊಮ್ಮೆ ನಡೆಯುವ ಕೆಲವು ಘಟನೆಗಳು ಊಹೆಗೂ ಮೀರಿದವಾಗಿರುತ್ತದೆ. ಅದೃಷ್ಟ ಒಲಿದು ಬಂದಿತೇನೋ ಎನ್ನುವಂತೆ ಕಾಣುತ್ತದೆ. ಇಂತಹದೇ ಒಂದು ಘಟನೆಯಲ್ಲಿ ರೈತನ ಮಗಳು ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ ತನ್ನ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಒಬ್ಬ ವ್ಯಕ್ತಿಗೆ ನೀಡಿದ್ದಳು. ಇದಾದ. ನಂತರ ಆಕೆಯ ಬ್ಯಾಂಕ್ ಖಾತೆಗೆ ಬರೋಬ್ಬರಿ 9 ಕೋಟಿ 99 ಲಕ್ಷ ರೂಪಾಯಿ ಜಮೆಯಾಗಿದೆ. ಖಾತೆಯಲ್ಲಿ ಭಾರಿ ಮೊತ್ತದ ಹಣ ಜಮೆಯಾಗಿರುವ ವಿಷಯವು, ರೈತನ ಮಗಳು ತನ್ನ ತಾಯಿಯ ಜೊತೆಗೆ ಬ್ಯಾಂಕಿಗೆ ಬಂದು ಅಲ್ಲಿನ ಸಿಬ್ಬಂದಿಯನ್ನು ತನ್ನ ಖಾತೆಯಲ್ಲಿರುವ ಹಣ ಎಷ್ಟು ಎಂದು ವಿಚಾರಿಸಿದಾಗ ಬ್ಯಾಂಕ್ ನೌಕರರು ಆಕೆಯ ಖಾತೆಯಲ್ಲಿ 10 ಕೋಟಿ ರೂಪಾಯಿಗಳು ಇರುವುದನ್ನು ಖಚಿತಪಡಿಸಿದ್ದಾರೆ. ಈ ಮಾತು ಕೇಳಿ ಆಕೆ ಗಾಬರಿಗೊಂಡಿದ್ದಾಳೆ.
ರಕುಲ್ ಪುರದಲ್ಲಿ ಸುಬೇದಾರ್ ಆಗಿರುವ ವ್ಯಕ್ತಿಯ ಮಗಳು ಸರೋಜ್. ಈಕೆಯ ಖಾತೆಯಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತದ ಹಣ ಜಮೆಯಾಗಿದೆ. ಭಾರಿ ಮೊತ್ತದ ಹಣ ಜಮೆಯಾದ ಹಿನ್ನೆಲೆಯಲ್ಲಿ ಯುವತಿಯು ಈ ವಿಚಾರವಾಗಿ ಸರಿಯಾದ ಕ್ರಮವನ್ನು ಜರಗಿಸುವಂತೆ ಲಿಖಿತ ದೂರನ್ನು ದಾಖಲಿಸಿದ್ದಾಳೆ. ಸರೋಜ್ ಅಲಹಾಬಾದ್ ಬ್ಯಾಂಕಿನ, ಬಾನ್ಸ್‌ಡೀಡ್ ಶಾಖೆಯಲ್ಲಿ ತನ್ನ ಖಾತೆಯನ್ನು ತೆರೆದಿದ್ದಳು. ಸರೋಜ್ ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ತಿಳಿಯುವುದಕ್ಕಾಗಿ ಬ್ಯಾಂಕಿಗೆ ಬಂದ ಸಮಯದಲ್ಲಿ ಬ್ಯಾಂಕ್ ನೌಕರರು ಆಕೆಯ ಖಾತೆಯಲ್ಲಿದ್ದ 10 ಕೋಟಿ ಹಣದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಈ ಘಟನೆ ಬಹಳ ಆಶ್ಚರ್ಯಕರವಾಗಿದ್ದು ಮಾತ್ರವೇ ಅಲ್ಲದೇ ಇದರ ಬಗ್ಗೆ ಹೇಳಿದರೆ ಬಹಳಷ್ಟು ಜನರು ಅದನ್ನು ನಂಬಲು ಸಿದ್ದವಾಗಿರಲಿಲ್ಲ. ಅನಂತರ ಸರೋಜ್ ಸಂಪೂರ್ಣ ವಿವರಣೆ ನೀಡುತ್ತಾ ಅಲಹಾಬಾದ್ ಬ್ಯಾಂಕಿಗೆ ಪತ್ರವೊಂದನ್ನು ಬರೆದಳು. ಅದರಲ್ಲಿ ಆಕೆ ತಾನು 2018 ರೂಪಾಯಿಗಳ ಮೂಲಕ ಬ್ಯಾಂಕ್ ಖಾತೆಯನ್ನು ತೆರೆದಿದ್ದೆ ಎಂದು ತಿಳಿಸುತ್ತಾ, 2 ವರ್ಷಗಳ ಹಿಂದೆ ಕಾನ್ಪುರ ಜಿಲ್ಲೆಯ ಪಾಕರ ಪೋಸ್ಟ್ ಬಾದರ ಗ್ರಾಮದ ನೀಲೇಶ್ ಕುಮಾರ್ ಎನ್ನುವವರು ನನಗೆ ಕರೆಯನ್ನು ಮಾಡಿ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಪಡೆಯಲು ಆಕೆಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳ ಕಾಪಿಯನ್ನು ಪೋಸ್ಟ್ ಮಾಡು ಎಂದು ತಿಳಿಸಿದ್ದಾರೆ.

ಇದಾದ ನಂತರ ಸರೋಜ್ ನಿಲೇಶ್ ಕುಮಾರ್ ಅವರಿಗೆ ತನ್ನ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ಸ್ವಲ್ಪ ದಿನದ ನಂತರ ತನಗೆ ಪೋಸ್ಟ್ ಮೂಲಕ ಎಟಿಎಂ ಕಾರ್ಡ್ ಬಂದಿತು ಎಂದಿರುವ ಸರೋಜ್, ಆನಂತರ ನೀಲೇಶ್ ಕುಮಾರ್ ಕೇಳಿದರು ಎನ್ನುವ ಕಾರಣಕ್ಕೆ ಹಿಂದೂ-ಮುಂದು ಆಲೋಚನೆ ಮಾಡದೆ ಆಕೆ ಎಟಿಎಂ ಕಾರ್ಡನ್ನು ಸಹಿತ ನಿಲೇಶ್ ವಿಳಾಸಕ್ಕೆ ಕಳುಹಿಸಿದ್ದಳು ಎನ್ನಲಾಗಿದ್ದು, ಅದರ ಪಿನ್ ನಂಬರ್ ಕೂಡಾ ತಿಳಿಸಿದ್ದಾಳೆ. ಆದರೆ ತನ್ನ ಖಾತೆಯಲ್ಲಿ ಹಣದ ವಹಿವಾಟಿನ ಬಗ್ಗೆ ಮಾತ್ರ ತನಗೆ ಯಾವುದೇ ವಿಚಾರ ತಿಳಿದಿಲ್ಲ ಎಂದು ಹೇಳಿದ್ದಾಳೆ.
ತನ್ನ ಖಾತೆಯಲ್ಲಿ ಹಣದ ವಹಿವಾಟಿನ ಕುರಿತಾದ ಯಾವುದೇ ವಿಚಾರ ಅಥವಾ ಮಾಹಿತಿ ತನಗೆ ತಿಳಿದಿಲ್ಲ ಎನ್ನುವ ಸಂಪೂರ್ಣ ವಿವರವನ್ನು ಸರೋಜ್ ತಿಳಿಸಿದ್ದಾಳೆ. ಅಲ್ಲದೇ ತನ್ನ ಖಾತೆಯಲ್ಲಿರುವ ಹಣದೊಂದಿಗೆ ತನಗೆ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಆಕೆ ಹೇಳಿದ್ದು, ಈ ಹಿಂದೆ ನಿಲೇಶ್ ಜೊತೆ ಯಾವ ಫೋನ್ ನಂಬರ್ ನಿಂದ ಸಂಪರ್ಕದಲ್ಲಿದ್ದಳೋ ಈಗ ಆ ನಂಬರ್ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ. ಸರೋಜ್ ನಿಂದ ಸಂಪೂರ್ಣ ಮಾಹಿತಿಯನ್ನು ಪಡೆದಿರುವ ಪೊಲೀಸರು ಈ ವಿಚಾರವಾಗಿ ಹೆಚ್ಚು ಗಮನ ವಹಿಸಿ ತನಿಖೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.