ಕೊರೋನ ಚಿಕಿತ್ಸೆಗೆ ಗಂಟೆ ಲೆಕ್ಕದಲ್ಲಿ ಬಿಲ್ ಮಾಡಿದ ಖಾಸಗಿ ಆಸ್ಪತ್ರೆ! ಬಿಲ್ ಮೊತ್ತ ಕೇಳಿದರೆ ದಂಗಾಗ್ತಿರಿ!
ಬಿಹಾರದ ರಾಜಧಾನಿಯಾದ ಪಾಟ್ನಾದ ಖಾಸಗಿ ಆಸ್ಪತ್ರೆಯೊಂದು ಕರೋನಾ ರೋಗಿಯಿಂದ ಮನಬಂಸಂತೆ ವಸೂಲಿ ಮಾಡಿದೆ. ಎಲ್ಲರೂ ದಿನದ ಲೆಕ್ಕ ದಲ್ಲಿ ಬಿಲ್ ಮಾಡಿದರೆ, ಈ ಆಸ್ಪತ್ರೆ ಗಂಟೆ ಲೆಕ್ಕದಲ್ಲಿ ಬಿಲ್ ಮಾಡಿ ಶಾಕ್ ಕೊಟ್ಟಿದೆ. ಕರೋನಾ ಸೋಂಕಿನ ಹಾವಳಿಯಿಂದ ಬಳಲುತ್ತಿರುವ ಬಿಹಾರದಲ್ಲಿ ಖಾಸಗಿ ಆಸ್ಪತ್ರೆಗಳ ಬೇಕಾಬಿಟ್ಟು ಬಿಲ್ ಮಾಡುತ್ತಿವೆ. ಹಾಗೆ ನೋಡಿದರೆ ಎಲ್ಲ ರಾಜ್ಯದಲ್ಲೂ ಈ ವಸೂಲಿ ನಡೆಯುತ್ತಿದೆಯಾದರೂ ಈ ಪ್ರಕರಣ ತೀರ ಅಪರೂಪದ್ದಾಗಿದೆ.
ಪಾಟ್ನಾದಲ್ಲಿಯಂತೂ ಕೋವಿಡ್ ರೋಗಿಗಳಿಂದ ಮನಸ್ಸಿಗೆ ತೋಚಿದ ಹಾಗೆ ಹಣವನ್ನು ಕೀಳಲಾಗುತ್ತಿದೆ. ರಾಜಧಾನಿ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ರೋಗಿಯೊಬ್ಬನಿಗೆ ಮಾಡಿದ ಬಿಲ್ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಇಲ್ಲಿ ಚಿಕಿತ್ಸೆ ಪಡೆದ ರೋಗಿ ಹಾಗೂ ಆತನಿಗೆ ಚಿಕಿತ್ಸೆ ಕೊಡಿಸಲು ಕರೆತಂದ ಮನೆಯವರು ಬಿಲ್ ಮೊತ್ತ ಕೇಳಿ ಶಾಕ್ ಆದರು.
ಪ್ರಕರಣ ಆರಂಭವಾಗುವುದು ಆ್ಯಂಬುಲೆನ್ಸ್ ಚಾಲಕನಿಂದ, ಈತನಿಗೆ ಕರೆ ಮಾಡಿದ ಮನೆಯಲ್ಲಿ ಇದ್ದ ವ್ಯಕ್ತಿಗೆ ಕೋವಿಡ್ ಇತ್ತಾದರೂ ಅದು ತೀರ ಮಾಮೂಲಿ ಲಕ್ಷಣಗಳಿದ್ದ ಸಾಮಾನ್ಯ ಪ್ರಕರಣವಾಗಿತ್ತು. ಆದರೆ ಆ್ಯಂಬುಲೆನ್ಸ್ ಚಾಲಕ ಮನೆಯವರಿಗೆ ರೋಗದ ಬಗ್ಗೆ ಹೆದರಿಸಿ ಯಾವುದಕ್ಕೂ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದನು.
ಆತನ ಮಾತು ಒಪ್ಪಿದ ಮನೆಯವರು ಆ ಖಾಸಗಿ ಆಸ್ಪತ್ರೆಗೆ ಹೋಗಲು ಒಪ್ಪಿದರು. ಸಿಟಿಯ ಬೈಪಾಸ್ ಹತ್ತಿರದ ರಾಮಕೃಷ್ಣನಗರದ ಆ ಖಾಸಗಿ ಆಸ್ಪತ್ರೆಗೆ ಹೋದ ಮೇಲೆ ಆ್ಯಂಬುಲೆನ್ಸ್ ಚಾಲಕ ಒಳಗೆ ಹೋಗಿ ಮಾತಾಡಿಕೊಂಡು ಬಂದು ರೋಗಿಯನ್ನು ಎಡ್ಮಿಟ್ ಮಾಡಿದರು. ಮೊದಲು ಹಿಂದೆಮುಂದೆ ನೋಡಿದ ಆಸ್ಪತ್ರೆಯವರು ಚಾಲಕ ಒಳಗೆ ಮಾತಾಡಿಕೊಂಡು ಬಂದ ಮೇಲೆ ಚಿಕಿತ್ಸೆ ನೀಡಲು ಒಪ್ಪಿದರು.
ನಂತರ ಮನೆಯವರಿಗೆ ಆ ಆಸ್ಪತ್ರೆಯ ಹಿರುವಿಕೆಯ ಬಗ್ಗೆ ಗೊತ್ತಾಗಿದೆ, ಹೀಗಾಗಿ ಡಿಸ್ಚಾರ್ಜ್ ಮಾಡಲು ಕೇಳಿದ್ದಾರೆ. ಅಷ್ಟೊತ್ತಿಗಾಗಲೇ 20 ಗಂಟೆಗಳ ಚಿಕಿತ್ಸೆ ನೀಡಲಾಗಿತ್ತು. ಆಗ ಆಸ್ಪತ್ರೆಯವರು ಗಂಟೆಗೆ 5 ಸಾವಿರದಂತೆ ರೋಗಿಯ ಕುಟುಂಬದಿಂದ 1 ಲಕ್ಷ 10 ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ! ಇಂಥ ಬಿಲ್ ಎಲ್ಲಾದರೂ ಕೇಳಿದ್ದೀರಾ?
ಒಂದು ವೇಳೆ ವಾರಗಟ್ಟಲೆ ಚಿಕಿತ್ಸೆ ಕೊಡಿಸಿದ್ದರೆ ಆ ಕುಟುಂಬವೇ ಬೀದಿಗೆ ಬರುತ್ತಿತ್ತು. ರೋಗಿಯ ಕುಟುಂಬದಿಂದ 1 ಲಕ್ಷ 10 ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿದ್ದರೂ ಅವರಿಗೆ ಕೇವಲ 50 ಸಾವಿರ ರೂಪಾಯಿಗಳ ಬಿಲ್ ಮಾತ್ರ ಕೊಟ್ಟಿದ್ದಾರೆ! ನಂತರ ರೋಗಿಯ ಕುಟುಂಬದ ವಿಜಯ್ ಕುಮಾರ್ ಎಂಬುವವರು ಜಿಲ್ಲಾಡಳಿತಕ್ಕೆ ದೂರು ನೀಡಿದರು.
ಸೋಮವಾರ ಜಿಲ್ಲಾಡಳಿತ ತಂಡವು ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ, ತನಿಖೆಯಲ್ಲಿ ದೂರು ಸರಿಯಾಗಿದೆ ಎಂದು ಗೊತ್ತಾಗಿದೆ. ತನಿಖೆಯಲ್ಲಿ ಇದು ಆಂಬುಲೆನ್ಸ್ ಚಾಲಕ ಮತ್ತು ಆಸ್ಪತ್ರೆಯ ನಡುವಿನ ಡೀಲ್ ಎಂದು ತಿಳಿದುಬಂದಿದೆ. ಅವನು ರೋಗಿಗಳನ್ನು ಆಸ್ಪತ್ರೆಗೆ ಕರೆತರುತ್ತಾನೆ ಮತ್ತು ಅದರಲ್ಲಿ ತನ್ನ ಕಮಿಷನ್ ತೆಗೆದುಕೊಳ್ಳುತ್ತಾನೆ.
ಎಲ್ಲ ವಿಷಯ ಅರಿತ ಮೇಲೆ ಈ ಬಗ್ಗೆ ಮ್ಯಾಜಿಸ್ಟ್ರೇಟ್ ಆಸ್ಪತ್ರೆಯ ಸಿಬ್ಬಂದಿಯ ಸುದೀರ್ಘ ವಿಚಾರಣೆ ನಡೆಸಿದರು. ಆದರೆ ಯಾರೂ ಸರಿಯಾದ ಉತ್ತರ ನೀಡಲಿಲ್ಲ ಮತ್ತು ಬಹುತೇಕ ಉದ್ಯೋಗಿಗಳು ಸ್ಥಳದಿಂದ ತಪ್ಪಿಸಿಕೊಂಡರು. ಕೆಲವರು ಏನೂ ಗೊತ್ತಿಲ್ಲ ಅನ್ನತೊಡಗಿದರು. ನಂತರ ಮ್ಯಾಜಿಸ್ಟ್ರೇಟ್ ಡಿಎಂಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ರಾಮಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೊಂದು ಅಚ್ಚರಿಯ ಸಂಗತಿಯೇನೆಂದರೆ, ಕೊರೋನ ರೋಗಿಗಳಿಗೆ ಚಿಕಿತ್ಸೆ ಕೊಡಲು ಈ ಆಸ್ಪತ್ರೆಗೆ ಅನುಮತಿಯನ್ನೇ ನೀಡಿರಲಿಲ್ಲ!
-Team Infotrend