VIDEO : ಅದೇನ್ ತಲೆ ಕಣ್ರಿ ಇವರದು, ಪೆಟ್ರೋಲ್ ಬೆಲೆ ಏರಿಕೆ ಖಂಡಿಸೋಕೆ ಬೈಕ್ ತಗೊಂಡು ಹೋಗಿ ಹೊಳೆಗೆ ಹಾಕೊದಾ!? ವಿಡಿಯೊ ನೋಡಿ

ಪೆಟ್ರೋಲ್ ಡಿಸೆಲ್ ಸೇರಿದಂತೆ ಇಂಧನ ಬೆಲೆ ಗಗನಕ್ಕೆ ಏರಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದೆ. ಹೈದರಾಬಾದ್ ನಲ್ಲಿ ಯೂತ್ ಕಾಂಗ್ರೆಸ್ ನವರ ಹೋರಾಟ, ಹೋರಾಟವಾಗಿ ಉಳಿಯದೇ ಹುಚ್ಚಾಟವಾಗಿದ್ದು, ಅವರು ಮಾಡಿದ ಘನಂಧಾರಿ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡಲು ಓದ ಪುಣ್ಯಾತ್ಮರು ಬೈಕನ್ನೇ ಹರಿಯುವ ನದಿಗೆ ಎಸೆದಿದ್ದಾರೆ.ಆ ವಿಡಿಯೊ ಕೆಳಗಿದೆ ನೋಡಿ. ಈ ಪ್ರತಿಭಟನೆಯಲ್ಲಿ ಅಲಳಿನ ಕಾಂಗ್ರೆಸ್ ನಾಯಕರಾದ ಉತ್ತಮ್ ಕುಮಾರ್ ರೆಡ್ಡಿ, ರೇವಂತ್ ರೆಡ್ಡಿ, ಜಯಪ್ರಕಾಶ್ ರೆಡ್ಡಿ, ಪೊನ್ನಪ್ಪ ಮುಂತಾದವರು ಭಾಗಿಯಾಗಿದ್ದರು.

ಇವರೆಲ್ಲ ಅಲ್ಲಿನ ಪೆಟ್ರೋಲ್ ಬಂಕ್ ನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬೆಲೆ ನಿಯಂತ್ರಣ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಅವರೆಲ್ಲ ಘೋಷಣೆ ಕೂಗಿದರು. ಈ ನಡುವೆ, ಹೋರಾಟದ ಹುಮ್ಮಸ್ಸಿನಲ್ಲಿದ್ದ ಅವರೆಲ್ಲ ಅಲ್ಲಿದ್ದ ಅಪಾಚಿ ಬೈಕನ್ನು ಎತ್ತಿ ತುಂಬಿ ಹರಿಯುವ ಹೊಳೆಗೆ ಹಾಕಿದ್ದಾರೆ!

ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಅವರ ಘನಂಧಾರಿ ಕೆಲಸವನ್ನು ಹೊಗಳುತ್ತಿದ್ದಾರೆ. ಬೈಕ್ ನಿಮಗೆ ಬೇಡವಾಗಿದ್ದರೆ ಯಾರಿಗಾದರೂ ದಾನ ಮಾಡಬಹುದಿತ್ತು, ಅಥವಾ ಅದನ್ನೇ ಮಾರಿ ಕೊರೊನದಿಂದ ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ನಿಮಗೆ ನಾಶ ಮಾಡುವುದು ಮಾತ್ರ ಗೊತ್ತಾ? ಉಳಿಸುವುದು, ಸಹಾಯ ಮಾಡುವುದು ಇಂಥ ಗುಣಾನೇ ಇಲ್ವಾ? ದು ಅನೇಕರು ಅವರು ಮಾಡಿದ ಕೆಲಸವನ್ನು ಖಂಡಿಸಿ ಬೈದಿದ್ದಾರೆ. ಅವರ ಆ ವಿಡಿಯೊ ಮೇಲಿದೆ, ನೋಡಿ, ನಿಮಗನಿಸಿದ್ದು ಕಾಮೆಂಟ್ ಮಾಡಿ.
-Team Infotrend