Video; ದೊಡ್ಮನೆಯ ಹುಡುಗನಿಗೆ ದೃಷ್ಟಿ ತಾಗಬಾರದೆಂದು ಲಟಿಗೆ ಮುರಿದು ಹರಿಸಿದ ಅಜ್ಜಿ! ಆದ್ರೂ ಕಾಣದಂತೆ ಮಾಯವಾದ್ರು; ನಮ್ಮ ಅಪ್ಪು.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುವುದನ್ನು ದಿನಾಲು ನೋಡುತ್ತೇವೆ. ಅವುಗಳಲ್ಲಿ ಕೆಲವು ವಿಡಿಯೋಗಳು ತುಂಬಾ ಅಪರೂಪದ್ದಾಗಿರುತ್ತದೆ. ಅಂತ ವಿಡಿಯೋಗಳನ್ನು ನೋಡಿದಾಗ ಸಹಜವಾಗಿಯೇ ಕಣ್ಣಂಚಿನಿಂದ ನೀರು ಹರಿಯುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರೀತಿಯ ಅಪ್ಪು ಅವರ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಅವರ ಸಹಜ ಪ್ರೀತಿಯ ಸ್ವಭಾವ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಮೋಡಿ ಮಾಡಿತ್ತು.

ಕನ್ನಡ ಚಿತ್ರರಂಗ ಕಂಡ ಅಜಾತಶತ್ರು ನಟ ಅಪ್ಪು. ಪುನೀತ್‍ರವರ (ಮೊದಲ ಹೆಸರು ಲೋಹಿತ್) ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ದಂಪತಿಗಳಿಗೆ ಐದನೇ ಮತ್ತು ಕಿರಿಯ ಮಗ. ಪುನೀತ್ ಆರು ವರ್ಷ ವಯಸ್ಸಿನವರಾಗಿದ್ದಾಗ ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಪುನೀತ್ 1 ಡಿಸೆಂಬರ್ 1999 ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಬ್ಬರಿಗೂ ಎರಡು ಹುಡುಗಿಯರಿದ್ದಾರೆ.

ಹಠಾತ್ತಾಗಿ ಕಾಣಿಸಿಕೊಂಡ ಹೃದಯ ಸ್ತಂಭನದಿಂದಾಗಿ 29 ಅಕ್ಟೋಬರ್ 2021 ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ಪುನೀತ್ ಸದ್ದಿಲ್ಲದೆ ನಮ್ಮನ್ನು ಬಿಟ್ಟು ಕಣ್ಮರೆಯಾದರು. ಕರ್ನಾಟಕದ ಜನತೆಗೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ಈ ಸುದ್ದಿ ನುಂಗಲಾರದ ತುತ್ತಾಗಿದೆ.

ಸದ್ಯ ಪುನೀತ್ ಅವರ ಒಂದು ಸುಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪುನೀತ್ ಅವರು ಪ್ರವಾಸದಲ್ಲಿರುವಾಗ ದಾರಿ ಮಧ್ಯೆ ಅಜ್ಜಿಯೊಬ್ಬರಿಗೆ ಭೇಟಿಯಾಗಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅಜ್ಜಿಯ ಜೊತೆಗೆ ಅವರು ನಡೆದುಕೊಂಡ ನಡತೆ ಎಷ್ಟೊಂದು ಸಭ್ಯತೆಯಿಂದ ಕೂಡಿತ್ತು ನೋಡಿ. ಕೆಲವೇ ಕ್ಷಣಗಳ ಈ ವಿಡಿಯೋದಲ್ಲಿ ಅಜ್ಜಿ ಪ್ರೀತಿಯಿಂದ ಮನೆಯ ಮೊಮ್ಮಗನಿಗೆ ವಿಚಾರಿಸುವ ಹಾಗೆ ಪುನೀತ್ ಏನು? ಅಂತ ಕೇಳುತ್ತಾಳೆ. ಅದಕ್ಕೆ ಪುನೀತ್ ಅವರು ತುಂಬಾ ವಿನಯದಿಂದ ಹೌದು ಎನ್ನುತ್ತಾರೆ. ಆಗ ಅಜ್ಜಿ ಪುನೀತ್ ಅವರಿಗೆ ಯಾರ ದೃಷ್ಟಿಯು ತಗುಲಬಾರದೆಂದು ತಲೆಗೆ ಲಟಿಗೆಯನ್ನು ಮುರಿಯುತ್ತಾಳೆ. ಅಜ್ಜಿಯ ಪವಿತ್ರ ಮಾಯೆ, ಪ್ರೀತಿಯೂ ಸಹ ನಮ್ಮ ಪುನೀತ್ ಅವರಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ.

ನೋಡಿ ಪುನೀತ್ ಸರ್ ಅವರ ಈ ವಿಶೇಷ ವಿಡಿಯೋ…

ಪ್ರಸ್ತುತ ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಫೇಮಸ್ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ appueditz.xp ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 2.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 3 ಲಕ್ಷ 59 ಸಾವಿರ ಜನರು ಲೈಕ್ ಮಾಡಿದ್ದಾರೆ.