ರಾಜ್ ಕುಂದ್ರಾ ಅವರ ಸಂಪಾದನೆ ಎಷ್ಟು? ಅರೆಸ್ಟ್ ನಂತರ ಕಪಿಲ್ ಶರ್ಮಾ ಅವರ ವಿಡಿಯೋ ವೈರಲ್!

ಶಿಲ್ಪ ಶೆಟ್ಟಿ ಅವರ ಬಿಸಿನೆಸ್ ಮನ್ ಪತಿ ರಾಜ್ ಕುಂದ್ರಾ ಅವರ ಅರೆಸ್ಟ್ ನಂತರ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಕಪಿಲ್ ಶರ್ಮ ಅವರು ರಾಜ್ ಕುಂದ್ರಾ ಅವರ ಗಳಿಕೆಯ ಬಗ್ಗೆ ‘ ಪಾಜಿ, ಹಮೆ ಭಿ ಕುಚ್ ಐಡಿಯಾ ಬತಾವೋ ಕಿ ಬಿನಾ ಕುಚ್ ಕಿಯೆ ಪೈಸಾ ಕೈಸೆ ಕಮಾತೆ ಹೋ ಆಪ್’? ( ಅಣ್ಣಾ, ನಮಗೂ ಸ್ವಲ್ಪ ಐಡಿಯಾ ಕೊಡಿ, ಯಾವ ರೀತಿಯ ಪರಿಶ್ರಮವೂ ಪಡದೆ ನೀವೂ ಹಣವನ್ನು ಹೇಗೆ ಗಳಿಸುತ್ತಿರಿ?) ಎಂದು ಕೇಳುತ್ತಾರೆ.

ಶಿಲ್ಪ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಅಧೀನದಲ್ಲಿದ್ದಾರೆ. ಅಶ್ಲೀಲ ಚಿತ್ರಗಳನ್ನು ತಯಾರಿಸುವುದು ಮತ್ತು ಅವುಗಳನ್ನು ಪೇಡ್ ಆಪ್ಸ್ ಮತ್ತು ವೆಬ್ಸೈಟ್ಗಳ ಮೇಲೆ ಪ್ರಸಾರ ಮಾಡುವ ಆರೋಪದ ಅಡಿಯಲ್ಲಿ ರಾಜ್ ಕುಂದ್ರಾ ಅವರಿಗೆ ಆರಸ್ಟ್ ಮಾಡಲಾಗಿದೆ. ಇವರೊಂದಿಗೆ ಅವರ ಒಬ್ಬ ಜೊತೆಗಾರನನ್ನು ಸಹ ಅರೆಸ್ಟ್ ಮಾಡಲಾಗಿದೆ. ಇವರನ್ನು ಅರೆಸ್ಟ್ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಂಚಲನ ಮೂಡಿದೆ. ಏತನ್ಮಧ್ಯೆ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯವರ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಕಪಿಲ್ ಶರ್ಮ ಅವರು ರಾಜ್ ಕುಂದ್ರಾ ಅವರಿಗೆ ಅವರ ಗಳಿಕೆಯ ಬಗ್ಗೆ ಹಾಗೂ ಲಕ್ಸುರಿ ಲೈಫ್ ಸ್ಟೈಲ್ ಬಗ್ಗೆ ಕೇಳುತ್ತಿದ್ದಾರೆ.

ಈ ವಿಡಿಯೋ ಕೆಲವರ್ಷಗಳ ಹಿಂದಿನದ್ದಾಗಿದೆ. ಆಗ ರಾಜ್ ಕುಂದ್ರಾ ಅವರು ಪತ್ನಿ ಶಿಲ್ಪಾ ಶೆಟ್ಟಿಯ ಜೊತೆಗೆ ಕಪಿಲ್ ಶರ್ಮ ಅವರ ಫೇಮಸ್ ಕಾಮಿಡಿ ಶೋ ‘ದ ಕಪಿಲ್ ಶರ್ಮಾ ಶೋ’ ನಲ್ಲಿ ಭಾಗವಹಿಸಿದ್ದರು. ಆಗ ಕಪಿಲ್ ಶರ್ಮ ಅವರು ರಾಜ ಅವರಿಗೆ ತಮಾಷೆಯಲ್ಲಿ, ನೀವು ಏನನ್ನು ಮಾಡದೆ ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತೀರಿ ಮತ್ತು ಹೇಗೆ ಗಳಿಸುತ್ತೀರಿ ಎಂದು ಕೇಳಿದ್ದರು. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಪ್ರಸ್ತುತ ವಿಡಿಯೋವನ್ನು ಶೇರ್ ಮಾಡಿ ಒಬ್ಬ ಯೂಸರ್ ಟ್ವಿಟರ್ನಲ್ಲಿ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಅಶ್ಲೀಲ ಚಿತ್ರಗಳನ್ನು ತಯಾರಿಸುವ ಆರೋಪದ ಅಡಿಯಲ್ಲಿ ಅರೆಸ್ಟ್ ಮಾಡಿದ್ದಾರೆ. ಕಪಿಲ್ ಶರ್ಮ ಶೋ ನಿಂದ ಕೊನೆಗೂ ರಾಜ್ ಕುಂದ್ರಾ ಅವರು ಹೇಗೆ ಹಣ ಗಳಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕೇ ಸಿಕ್ಕಿತು, ಎಂದು ಹೇಳಿದ್ದಾರೆ.

ಈ ವೈರಲ್ ವಿಡಿಯೋದಲ್ಲಿ ಕಪಿಲ್ ಶರ್ಮಾ ಅವರು ರಾಜ್ ಕುಂದ್ರಾ ಅವರಿಗೆ ಈ ರೀತಿ ಕೇಳುತ್ತಾರೆ, ನೀವು ಫಿಲಂ ಸ್ಟಾರ್ ಜೊತೆಗೆ ಪುಟ್ಬಾಲ್ ಆಡುತ್ತೀರಿ, ಮತ್ತೆ ಫ್ಲೈಟ್ ನಲ್ಲಿ ಕಾಣುತ್ತೀರಿ, ಒಮ್ಮೆಲೇ ನ್ಯೂಸ್ ನಲ್ಲಿ ಬರುತ್ತೀರಿ, ಕೆಲವೊಂದು ಸಲ ಸುತ್ತಾಡುತ್ತೀರಿ, ನಂತರ ಶಿಲ್ಪಾಳ ಜೊತೆ ಶಾಪಿಂಗ್ ನಲ್ಲಿಯೂ ಕಾಣುತ್ತೀರಿ ಆದ್ದರಿಂದ ನಿಮಗೆ ಕೇಳುತ್ತೇನೆ ನೀವು ಏನು ಮಾಡುತ್ತೀರಿ? ಇಷ್ಟೊಂದು ಈಜಿಯಾಗಿ ಹಣ ಹೇಗೆ ಗಳಿಸುತ್ತೀರಿ? ಸ್ವಲ್ಪ ಏನಾದ್ರೂ ಐಡಿಯಾ ಇದ್ದಾರೆ ನಮಗೂ ಹೇಳಿ ಅನ್ನುವ ವಿಡಿಯೋ ಇದಾಗಿದೆ.

ಮುಂಬಯಿ ಪೊಲೀಸ್ ಕಮಿಷನರ್ ಹೇಮಂತ್ ನಾಗರಾಲೆ ಅವರ ಪ್ರಕಾರ, 21 ಫೆಬ್ರುವರಿಯಂದು ಕ್ರೈಮ್ ಬ್ರಾಂಚ್ ಅಶ್ಲೀಲ ಚಿತ್ರಗಳನ್ನು ತಯಾರಿಸುವುದು ಮತ್ತು ಅವುಗಳನ್ನು ಕೆಲವು ಆಪ್ ಗಳ ಮೇಲೆ ತೋರಿಸುವುದು ಈ ಅಪರಾಧಗಳಿಗೆ ಸಂಬಂಧಿಸಿದಂತೆ ಆರೋಪ ಪಾತ್ರ ದಾಖಲು ಮಾಡಿತ್ತು. ಇದೇ ಕಾರಣಕ್ಕೆ ಈಗ ಇವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೋ ನೋಡಿ

ಇದೇ ಕಾರಣಕ್ಕೆ ಸಂಬಂಧಿಸಿದಂತೆ ನಟಿ ಗಹನಾ ವಶಿಷ್ಠ ಸಹಿತ ಆರು ಜನರನ್ನು ಅರೆಸ್ಟ್ ಮಾಡಲಾಗಿತ್ತು. ಆ ತನಿಖೆಯಲ್ಲಿ ತಿಳಿದು ಬಂದ ವಿಷಯವೇನೆಂದರೆ, ಪೋರ್ನ್ ಫಿಲಂಗಳು ಮುಂಬಯಿಯಲ್ಲಿ ಶೂಟ್ ಆಗುತ್ತಿದ್ದರೂ ವೀಡಿಯೋಗಳನ್ನು ಮಾತ್ರ ಅಪ್ಲೋಡ್ ಮಾಡುವ ಸಲುವಾಗಿ ವಿದೇಶಗಳ ಐಪಿ ಅಡ್ರೆಸ್ ಮತ್ತು ಸರ್ವರ್ ಉಪಯೋಗಿಸಲಾಗುತ್ತಿತ್ತು. ಇದರ ಹಿಂದಿನ ಉದ್ದೇಶ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.