VIDEO : ರಫೆಲ್ ಯು’ದ್ಧ ವಿಮಾನ ಮತ್ತು 26 ಕೋಟಿಯ ಕಾರಿನ ನಡುವೆ ರೇಸ್! ಗೆದ್ದಿದ್ಯಾರು ನೋಡಿ

ನೀವು ಬೈಕ್ ರೇಸ್, ಕಾರ್ ರೇಸ್, ಮಡ್ ಕಾರ್ ರೇಸ್ ಮುಂತಾದ ಹಲವು ಬಗೆಯ ರೇಸ್ ಗಳನ್ನು ನೋಡಿದ್ದೀರಿ, ಆದರೆ ಕಾರು ಮತ್ತು ಯು’ದ್ಧ ವಿಮಾನಗಳ ನಡುವಿನ ರೇಸ್ ನೋಡಿರಲಿಕ್ಕಿಲ್ಲ. ಅಂತಹ ರೇಸ್ ಕೂಡ ಮಾಡಿದ್ದಾರಾ? ಎಲ್ಲಿ ಯು’ದ್ಧ ವಿಮಾನ – ಎಲ್ಲಿ ಕಾರು ಎರಡಕ್ಕೂ ಸಾಟಿ ಸರಿನಾ ಎಂದು ನೀವು ಆಶ್ಚರ್ಯ ಪಡಬಹುದು, ಆದರೆ ಇಲ್ಲಿ ಆಗಿದ್ದೇ ಬೇರೆ.

ನಿಮಗೆ ಆಶ್ಚರ್ಯವಾಗಬಹುದು, Bugatti Chiron Pur ಸ್ಪೋರ್ಟ್ಸ್ ಕಾರ್ ಮತ್ತು ಡಸಾಲ್ಟ್ ರಾಫೆಲ್ ಫೈ’ಟ’ರ್ ಜೆಟ್ ನಡುವಿನ ಈ ರೇಸ್ ನಲ್ಲಿ ಬುಗಾಟಿ ನೆಲದ ಮೇಲಿನ ರೇಸ್ ಗೆದ್ದಿದೆ! ಬುಗಾಟ್ಟಿಯ ಚಾಲಕ, “ನಾನು 100 ಮೀಟರ್ ನಂತರ ರಫೇಲ್ ನ ಹಿಂದೆ ಇದ್ದೆ, ಆದರೆ ಅದರ ನಂತರ ನಾನು ಕೆಲವು ಮೀಟರ್ ಗಳವರೆಗೆ ಜೆಟ್ ಗಿಂತ ಮುಂದಿದ್ದೆ. ಅದರ ನಂತರ ಅದದು ಆಕಾಶಕ್ಕೆ ಹಾರಿದಾಗ, ನನಗಿಂತ ಹೆಚ್ಚು ಮುಂದೆ ಹೋಯಿತು. ಆದಾಗ್ಯೂ ಇದು ಅದ್ಭುತ ಓಟವಾಗಿತ್ತು ಎಂದಿದ್ದಾರೆ.

ರಫೆಲ್ ಹಿಂದೆ ಉಳಿದಿತ್ತು!
ಈ ವಿಶ್ವದ ಈ ಪ್ರಸಿದ್ಧ ಯು’ದ್ಧ ವಿಮಾನದ ವೇಗವು 150 ಮೀಟರ್ ನಂತರ 165 ಕಿ.ಮೀ ವೇಗವನ್ನು ತಲುಪಿತು ಮತ್ತು ಅದು ಸ್ಪಷ್ಟವಾಗಿ ಬುಗಾಟಿಯ ಹಿಂದೆ ಇತ್ತು. 350 ಮೀಟರ್ ನಂತರ ಜೆಟ್ ವೇಗ 210 ಕಿ.ಮೀ ವೇಗಕ್ಕೆ ಏರಿತು, ಆಮೇಲೆ 450 ಮೀಟರ್ ನಂತರ, ಜೆಟ್ 260 ಕಿ.ಮೀ ವೇಗವನ್ನು ಪಡೆಯಿತು.

ಓಟವನ್ನು ಗೆದ್ದವರು ಯಾರು?
ರೇಸ್ ಕಾರ್ ಮತ್ತು ಜೆಟ್ ನಡುವೆ ನಡೆದ ರೇಸ್ ನಲ್ಲಿ ವೇಗದ ದೃಷ್ಟಿಯಿಂದ ಜೆಟ್ ಮುಂದಿದೆ, ರೇಸ್ ಪ್ರಾರಂಭದಲ್ಲಿ ಬುಗಾಟಿ ರಫೇಲ್ ಅನ್ನು ಹಿಂದಿಕ್ಕಿತು. ಬುಗಾಟ್ಟಿಯ ಚಾಲಕ ಕೇವಲ 2.4 ಸೆಕೆಂಡುಗಳಲ್ಲಿ ಕಾರಿನ ವೇಗವನ್ನು 100 ಕಿ.ಮೀ ಗೆ ತಂದನು! ಕೇವಲ 6.1 ಸೆಕೆಂಡುಗಳಲ್ಲಿ 200 ಕಿ.ಮೀ ವೇಗದಲ್ಲಿ ಚಲಿಸಲು ಪ್ರಾರಂಭಿಸಿತು! ನಂತರ 13 ಸೆಕೆಂಡುಗಳಲ್ಲಿ ಇದು 300 ನಿಮಿಷ ಮತ್ತು ಅರ್ಧ ನಿಮಿಷದಲ್ಲಿ 400 ಕಿ.ಮೀ ವೇಗವನ್ನು ಸಾಧಿಸಿತು!

ವೇಗಗಳ ನಡುವೆ ತುಂಬಾ ವ್ಯತ್ಯಾಸ :
Bugatti Chiron Pur ಸ್ಪೋರ್ಟ್ ಕಾರ್ ‘Les Légendes du Ciel’ ಟ್ರ್ಯಾಕ್ ನಲ್ಲಿ ಗಂಟೆಗೆ 490 ಕಿ.ಮೀ ವೇಗವನ್ನು ಹೊಂದಿದೆ. ಆದಾಗ್ಯೂ ಇದು ರಫೇಲ್ ಫೈ’ಟ’ರ್ ಜೆಟ್‌ ಗಿಂತ ಬಹಳ ಕಡಿಮೆ, ಅದು ಗಂಟೆಗೆ 1912 ಕಿ.ಮೀ ವೇಗವನ್ನು ಹೊಂದಿದೆ. ಈ ಇಡೀ ಓಟದ ವೀಡಿಯೊವನ್ನು ಬುಗಾಟ್ಟಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕಾರಿನ ಬೆಲೆ 3.6 ಮಿಲಿಯನ್ಗಿಂತ ಹೆಚ್ಚು, ಅಂದರೆ 26 ಕೋಟಿ ರೂಪಾಯಿಗಳಿಗಿಂತ ಹೆಚ್ಚು!!

ಡಸಾಲ್ಟ್ ಹೆಡ್ ಕ್ವಾರ್ಟರ್ ಲ್ಲಿ ರೇಸ್ ನಡೆಯಿತು :
ವೇಗಕ್ಕೆ ಹೆಸರುವಾಸಿಯಾದ ಬುಗಾಟ್ಟಿ ಮತ್ತು ರಾಫೆಲ್ ನಡುವಿನ ರೇಸನ್ನು ಫ್ರಾನ್ಸ್‌ನ ಡಸಾಲ್ಟ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಬುಗಾಟ್ಟಿ ಚಿರೋನ್ ಪುರ್ ಸ್ಪೋರ್ಟ್ಸ್ 8.0 ಲೀಟರ್ ಡಬ್ಲ್ಯು 16 ಎಂಜಿನ್ ಹೊಂದಿದ್ದು ಅದು 1500 ಎಚ್‌ಪಿ ಮತ್ತು 1600 ಎನ್ಎಂ ಟಾರ್ಕ್ ನೀಡುತ್ತದೆ. ವಿಡಿಯೊ ಮೇಲಿದೆ ನೋಡಿ…
-Team Infotrend