Metro Train ಜೊತೆಗೆ ರೇಸ್ ಮಾಡಿ ರೋಚಕವಾಗಿ ಗೆದ್ದ ಯುವಕ! ನೋಡಿ ಈ 49 ಮಿಲಿಯನ್ ವೀಕ್ಷಣೆ ಪಡೆದ ವೈರಲ್ ವಿಡಿಯೋ…

ಜಗತ್ತಿನಲ್ಲಿ ಅನೇಕ ವಿಶೇಷ ಗುಣಗಳನ್ನು ಹೊಂದಿದ ವ್ಯಕ್ತಿಗಳು ತುಂಬಾ ಇದ್ದಾರೆ. ಅವರಲ್ಲಿರುವ ವಿಶೇಷ ವ್ಯಕ್ತಿತ್ವ, ವಿಶೇಷ ಗುಣ, ಅವರನ್ನು ಎಲ್ಲರಿಗಿಂತ ಭಿನ್ನವಾಗಿಸುತ್ತದೆ. ಅವರು ಮಾಡುವ ವಿಶೇಷ ಕೆಲಸ ಎಲ್ಲಡೆಯೂ ಸುದ್ದಿಯಾಗುತ್ತದೆ.

ಅದರಲ್ಲೂ ಈ ಇಂಟರ್ನೆಟ್ ಯುಗದಲ್ಲಿ ವಿಶೇಷ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಕ್ಷಣದಲ್ಲಿ ಜಗತ್ತಿನ ಮೂಲೆ ಮೂಲೆಗೆ ಮುಟ್ಟುತ್ತಾರೆ. ಸದ್ಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾಡಿದ ದಾಖಲೆ ನಿಜಕ್ಕೂ ಅದ್ಭುತವಾಗಿದೆ.

ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ ಎರಿಕ್ ಸೋಲೆಮ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಮೆಟ್ರೋ ಟ್ರೈನ್ ನಿಂದ ಇಳಿದು ವೇಗವಾಗಿ ಓಡಲು ಶುರು ಮಾಡುತ್ತಾನೆ. 1 ನಿಮಿಷ 37 ಸೆಕೆಂಡುಗಳಲ್ಲಿ ಆ ವ್ಯಕ್ತಿಯು ತಾನಿಳಿದ ಮೆಟ್ರೋ ಟ್ರೈನಿನಿಂದ ಓಡುತ್ತಾ ಹೋಗಿ ಮುಂದಿನ ಸ್ಟೇಷನ್ನಿನಲ್ಲಿ ಎಂಟ್ರಿ ಮಾಡಿ ಮತ್ತೆ ತಾನೇ ಇಳಿದ ಮೆಟ್ರೋ ಟ್ರೈನ್ ನ ಡೋರ್ ಮುಖಾಂತರವೇ ಪ್ರವೇಶ ಮಾಡಿ ಒಳಗೆ ಬರುತ್ತಾನೆ. ಈ ಎಲ್ಲಾ ಪ್ರೋಸೆಸ್ಗೆ ಯುವಕನಿಗೆ ಒಟ್ಟು 1 ನಿಮಿಷ 37 ಸೆಕೆಂಡುಗಳು ತಾಗುತ್ತದೆ. ಇದೇ ಸಮಯದಲ್ಲಿ ಆತ ಯಾವ ಟ್ರೈನಿನಿಂದ ಸ್ಟೇಷನ್ನಿಗೆ ಇಳಿಯುತ್ತಾನೋ ಮುಂದಿನ ಸ್ಟೇಷನ್ನಿಗೆ ಅದೇ ಟ್ರೈನಿನಲ್ಲಿ ಮತ್ತೆ ಏರುತ್ತಾನೆ.

ನೋಡಿ ಈ ವಿಡಿಯೋ.

ಪ್ರಸ್ತುತ ಈ ವಿಡಿಯೋ ಇಲ್ಲಿಯವರೆಗೆ ದಾಖಲೆಯ ಲೆಕ್ಕದಲ್ಲಿ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋ ಇಲ್ಲಿಯವರೆಗೆ 49.7 ಮಿಲಿಯನ್ ಗಳವರೆಗೆ ಜನರು ನೋಡಿದ್ದಾರೆ. ಹಾಗೂ ಈ ಸುಂದರವಾದ ವಿಡಿಯೋಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಲೈಕ್ ಮಾಡಿದ್ದಾರೆ.