51 ನೇ ಜನ್ಮದಿನದ ಖುಷಿಯಲ್ಲಿರುವ ರಾಹುಲ್ ಗಾಂಧಿಯವರು ರಾಜಕೀಯಕ್ಕೆ ಬರುವ ಮೊದಲು ಹೇಗಿದ್ದರು? ಏನಾಗಿದ್ದರು ಗೊತ್ತಾ?

51 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ರಾಷ್ಟೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ಆ ಪಕ್ಷದ ಅಧಿನಾಯಕ, ಹಾಗೂ ಸದ್ಯ ಕೇರಳದ ವಯನಾಡಿನ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ರಾಹುಲ್ ಗಾಂಧಿಯವರು ರಾಜಕೀಯಕ್ಕೆ ಬರುವ ಮೊದಲು ಏನಾಗಿದ್ದರು ಎಂಬ ವಿಷಯ ಬಹುಶ ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ, ಅದರ ವಿವರ ಈ ಕೆಳಗಿವೆ…

1970 ರ ಜೂನ್ 19 ರಂದು ಜನಿಸಿದ ರಾಹುಲ್ ಗಾಂಧಿಯವರು ನೆಹರು ಗಾಂಧಿ ಪರಿವಾರದ 4 ನೇ ತಲೆಮಾರಿನವರಾಗಿದ್ದು, ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಮರಿ ಮೊಮ್ಮಗ, ಇಂಧೀರಾ ಗಾಂಧಿಯವರ ಮೊಮ್ಮಗ, ಹಾಗೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಮಗನಾಗಿದ್ದಾರೆ.

ಇವರು ಹುಟ್ಟಿದಾಗ ಇವರ ಅಜ್ಜಿ ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿದ್ದರು, ಬಾಲ್ಯದಲ್ಲಿಯೇ ಸಾರ್ವಜನಿಕ ಜೀವನದಿಂದ ದೂರವೇ ಇದ್ದ ರಾಹುಲ್ ಗಾಂಧಿಯವರ ಬಾಲ್ಯ ಜೀವನ ಡೆಹ್ರಡೂನ್ ಹಾಗೂ ದೆಹಲಿಯ ಮಧ್ಯೆಯೇ ಇತ್ತು. 1981-83 ರಲ್ಲಿ ಇವರು ಉತ್ತರಾಖಂಡದ ಡೆಹ್ರಾಡೂನ್ ನ ಶಾಲೆಯಲ್ಲಿ ಓದಿದ್ದಾರೆ, ಅದೇ ಶಾಲೆಯಲ್ಲಿಯೇ ಅವರ ತಂದೆ ರಾಜೀವ್ ಗಾಂಧಿಯವರು ಕೂಡ ಓದಿದ್ದಾರೆ ಎಂಬುದು ವಿಶೇಷ.

1984 ರಲ್ಲಿ ಇಂದಿರಾ ಗಾಂಧಿಯವರ ಹ'”ತ್ಯೆಯಾದಾಗ, ಸುರಕ್ಷತೆಯ ದೃಷ್ಟಿಯಿಂದ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿಯವರನ್ನು ಮನೆಯಿಂದ ಹೊರಗೆ ಕಳುಹಿಸದೆ 1989 ರವರೆಗೆ, ಅಂದರೆ ಬರೋಬ್ಬರಿ 5 ವರ್ಷಗಳ ಕಾಲ ಮನೆಯಲ್ಲಿಯೇ ಇಟ್ಟು ಶಿಕ್ಷಣ ನೀಡಲಾಯಿತು.

1989 ರಲ್ಲಿ ದೆಹಲಿಯ ಸ್ಟಿಫನ್ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದರು, ಅಲ್ಲಿ ರಾಹುಲ್ ಗಾಂಧಿಯವರಿಗೆ ರ್ಯಾ’ಗಿಂ’ಗ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. 1990 ರಲ್ಲಿ ಕಾಲೇಜು ಬದಲಿಸಿದ ರಾಹುಲ್ ಗಾಂಧಿ, ಅರ್ಥಶಾಸ್ತ್ರ ಅಧ್ಯಯನಕ್ಕಾಗಿ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಅಡ್ಮಿಶನ್ ತೆಗೆದುಕೊಂಡರು.

ಆದರೆ ದುರದೃಷ್ಟವಶಾತ್ 1991 ರಲ್ಲಿ ಅವರ ತಂದೆ ರಾಜೀವ್ ಗಾಂಧೀಯವರನ್ನು ಎಲ್ ಟಿ ಟಿ ಇ ಉ'”ಗ್ರ’ರು ಹ'”ತ್ಯೆ ಮಾಡಿದ ಕಾರಣ ಮತ್ತೊಮ್ಮೆ ಸುರಕ್ಷತೆಯ ದೃಷ್ಟಿಯಿಂದ ಅಮೆರಿಕಾದ ಫ್ಲೋರಿಡಾದಲ್ಲಿನ ರೋಲಿನ್ಸ್ ಕಾಲೇಜಿಗೆ ಹೋದರು, ಅಲ್ಲಿ ಅವರು 1994 ರಲ್ಲಿ ಬಿ. ಏ ಪದವಿ ಪೂರ್ಣಗೊಳಿಸಿದರು.

ಬೇರೆ ಹೆಸರಿನಿಂದ ಎಂ ಫಿಲ್ ಪದವಿ ಪಡೆದ ರಾಹುಲ್ ಗಾಂಧಿ..!
ತಂದೆ ಹಾಗೂ ಅಜ್ಜಿಯ ಹತ್ಯೆಯ ಕಾರಣದಿಂದಾಗಿ ಗಾಂಧಿ ವಂಶದ ಕುಡಿಗಳಾಗಿದ್ದ ರಾಹುಲ್ ಹಾಗೂ ಪ್ರಿಯಾಂಕ ಗಾಂಧೀಯವರ ಸುರಕ್ಷತೆ ಅತ್ಯಂತ ಮುಖ್ಯವಾಗಿತ್ತು. ಇವರು ಅವರ ತಂದೆ ರಾಜೀವ್ ಗಾಂಧಿ ಹಾಗೂ ಅವರ ಮುತ್ತಜ್ಜ ಜವಾಹರ್ ಲಾಲ್ ಅವರು ಪದವಿ ಪಡೆದಿದ್ದ ಕೆಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ಡೆವಲಪ್ಮೆಂಟಲ್ ಸ್ಟಡೀಸ್ ನಲ್ಲಿ ಎಂ ಫಿಲ್ ಗೆ ಪ್ರವೇಶ ಪಡೆದರು ಅಲ್ಲಿ ರಾಹುಲ್ ಗಾಂಧಿ ಬದಲಾಗಿ ರಾಹುಲ್ ವಿನ್ಸಿ ಎಂಬ ಹೆಸರಿನಿಂದ ಪ್ರವೇಶ ಪಡೆದರು.

ಪದವಿ ಮುಗಿಸಿದ ನಂತರ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ದರು..!
ಪದವಿ ಮುಗಿದ ನಂತರ ಇವರು ಇಂಗ್ಲೆಂಡ್ ನಲ್ಲಿ ಮೈಕಲ್ ಪೋರ್ಟರ್ ಎಂಬುವರು ಸ್ಥಾಪಿಸಿದ ಮಾನಿಟರ್ ಗ್ರೂಪ್ ಎಂಬ ಒಂದು ಕಂಪನಿಯಲ್ಲಿ ಬರೋಬ್ಬರಿ 3 ವರ್ಷ ಕೆಲಸ ಮಾಡಿದ್ದಾರೆ..! 2002 ರಲ್ಲಿ ಮುಂಬೈಯ ಒಂದು ಔಟ್ ಸೋರ್ಸಿಂಗ್ ಕಂಪನಿಯಾದ ಬೈಕೋಪ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬುದರ ನಿರ್ದೇಶಕರುಗಳಲ್ಲಿ ಇವರು ಒಬ್ಬರಾಗಿದ್ದರು.

2004 ರಲ್ಲಿ ರಾಜಕೀಯ ಪ್ರವೇಶಿಸಿದ ರಾಹುಲ್ ಗಾಂಧಿ :
2004 ರವರೆಗೂ ಅಂದರೆ ತಮ್ಮ 34 ನೇ ವರ್ಷದ ವರೆಗೂ ರಾಜಕೀಯಯದಿಂದ ದೂರವಿದ್ದ ಇವರು, 2004 ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು, ಅಲ್ಲಿಂದಲೇ ಲೋಕಸಭೆ ಹಾಗೂ ರಾಜಕೀಯ ಎರಡನ್ನೂ ಪ್ರವೇಶಿಸಿದರು.

ನಂತರ ಅವರು ನಡೆದು ಬಂದ ಏಳು ಬೀಳಿನ ಹಾದಿ ನಿಮಗೆಲ್ಲ ಗೊತ್ತೇ ಇದೆ. ಏಳುವುದಕ್ಕಿಂತ ಬೀಳುವುದನ್ನೇ ಹೆಚ್ಚು ನೋಡಿರುವ ರಾಹುಲ್ ಗಾಂಧಿಯವರು ಹತ್ತಾರು ಸರಣಿ ಸೋಲಿನ ನಂತರವೂ ಎದೆಗುಂದದೇ ಅಥವಾ ದೃತಿಗೆಡದೇ ರಾಜಕೀಯದಲ್ಲಿ ಇರುವುದು ವಿಶೇಷ ಸಂಗತಿ. ಸಾಲು ಸಾಲು ಸೋಲುಗಳು ಅವರನ್ನು ರಾಜಕೀಯದಿಂದ ವಿಮುಖಗೊಳಿಸಲಿಲ್ಲ. ಇಂಥ ರಾಹುಲ್ ಗಾಂಧಿಯವರ 51 ನೇ ಜನ್ಮದಿನ ಇಂದು, ಅವರಿಗೆ ಶುಭಾಶಯಗಳು.