ವೈರಲ್ ಆಗಿರುವ ಈ ಚಿತ್ರದಲ್ಲಿ ಇರುವುದು ರಾಹುಲ್ ಗಾಂಧಿಯವರಾ? ಈ ಫೋಟೊದ ಅಸಲಿಯತ್ತೇನು?
ರಾಹುಲ್ ಗಾಂಧಿ ವೈರಲ್ ಫೋಟೋ : ಸೋಷಿಯಲ್ ಮೀಡಿಯಾದಲ್ಲಿ ಯಾವುದ್ಯಾವುದೋ ಫೋಟೊ – ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ನೀವು-ನಾವು ಊಹಿಸಲೂ ಸಾಧ್ಯವಾಗದಂತಹ ಸಂಗತಿಗಳು ಏಕಾಏಕಿ ವೈರಲ್ ಆಗಿಬಿಡುತ್ತವೆ. ಜನರು ಕೂಡ ಹಿಂದೆ ಮುಂದೆ ಯೋಚಿಸದೇ ವೈವಿಧ್ಯಮಯ ಕಾಮೆಂಟ್ಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಅಂತಹ ಒಂದು ಚಿತ್ರ ಇಲ್ಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿನಲ್ಲಿ ಈ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿ ರಾಹುಲ್ ಗಾಂಧಿ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಫೋಟೋದಲ್ಲಿ ಹುಡುಗನು ಹುಡುಗಿಯನ್ನು ಎತ್ತಿಕೊಂಡಿರುವುದನ್ನು ಕಾಣಬಹುದು. ಈ ಹುಡುಗನ ಮುಖ ಸೈಡ್ ನಿಂದ ಮಾತ್ರ ಗೋಚರಿಸುತ್ತದೆ.

ಇದನ್ನು ನೋಡಿದ ಹಲವರು ಇದು ರಾಹುಲ್ ಗಾಂಧಿ ಎಂದು ಹೇಳಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಅವರು ಎತ್ತಿಕೊಂಡಿರುವ ಹುಡುಗಿ ರಾಹುಲ್ ಗಾಂಧಿಯ ಗೆಳತಿ ಎಂದು ಕೂಡ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಹಲವರು ಅವರನ್ನು ಕಾಮೆಂಟ್ ಮೂಲಕ ವ್ಯಂಗ್ಯವಾಗಿ ಅಭಿನಂದಿಸಿದ್ದಾರೆ ಕೂಡ.
ವೈರಲ್ ಚಿತ್ರದ ಸತ್ಯ :
ವಾಸ್ತವವಾಗಿ ಇಲ್ಲಿರುವುದು ರಾಹುಲ್ ಗಾಂಧಿ ಅಲ್ಲ, ಈ ಚಿತ್ರ ಫಿಫ್ಟಿ ಷೇಡ್ಸ್ ಆಫ್ ಗ್ರೇ (Fifty Shades of Grey) ಚಲನಚಿತ್ರದ ದೃಶ್ಯವಾಗಿದೆ. ಈ ಚಿತ್ರದ ನಾಯಕನ ಈ ಭಾಗವು ರಾಹುಲ್ ಗಾಂಧಿಯವರಂತೆ ಕಾಣುತ್ತದೆ ಅಷ್ಟೇ. ಅವರು ನಿಜವಾಗಿ ರಾಹುಲ್ ಗಾಂಧಿ ಅಲ್ಲ. ಇದು ಹಾಲಿವುಡ್ ನಟ ಜೇಮಿಯವರ ಫೋಟೊ, ಅವರು ಚಿತ್ರದ ನಾಯಕಿಯೊಂದಿಗೆ ಪೋಸ್ ನೀಡಿದ ದೃಶ್ಯ ಇದು.

ಬ್ಲರ್ ಮಾಡಿ ವೈರಲ್ :
ಇದನ್ನು ಮೊದಲು ಯಾರು ಅಪ್ ಲೋಡ್ ಮಾಡಿದ್ದು ಅಂತ ಗೊತ್ತಾಗಿಲ್ಲವಾದರೂ, ಆ ಫೋಟೊದಲ್ಲಿ ಹೀರೊನ ಮುಖವನ್ನು ಸ್ವಲ್ಪ ಬ್ಲರ್ ಮಾಡಿ ವೈರಲ್ ಮಾಡಲಾಗಿದೆ. ಚಿತ್ರ ಕ್ಲಿಯರ್ ಆಗಿದ್ದರೆ ಅದು ರಾಹುಲ್ ಅಲ್ಲ ಎಂಬುದು ಯಾರಿಗೆ ಬೇಕಾದರೂ ಗೊತ್ತಾಗುತ್ತಿತ್ತು. ವೈರಲ್ ಮಾಡಿದವರಿಗೆ ಇದರಿಂದ ಏನು ಲಾಭವಾಯಿತೊ ಭಗವಂತನೇ ಬಲ್ಲ.
-Team Infotrend