ಅಯೋಧ್ಯೆಯಲ್ಲಿಯ ರಾಮ ಮಂದಿರದಲ್ಲಿ ನಿರ್ಮಾಣ ಮಾಡುವ ರಾಮನ ಮೂರ್ತಿ ರಚನೆ ಮಾಡುವ ಶಿಲ್ಪಕಾರ ಇವರೇ ನೋಡಿ! ತಿಳಿದುಕೊಳ್ಳಿ….

ಕಳೆದ ಎರಡು ಮೂರು ವರ್ಷಗಳಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ರಾಮ ಮಂದಿರದ ನಿರ್ಮಾಣ ಕಾರ್ಯ ಇತಿಹಾಸ ವಾಗಲಿದೆ. ಎಷ್ಟೊ ವರ್ಷಗಳಿಂದ ವಾಗ್ವಾದಗಳಿಂದ ಈ ಕಾರ್ಯ ನಿಲ್ಲಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಸರಕಾರ ಈ ಕಾರ್ಯವನ್ನು ಸುಗಮ ಗೊಳಿಸಿದೆ. ಇಂದು ಈ ಕಾರ್ಯ ಒಂದು ಮಹತ್ವದ ಘಟ್ಟದಲ್ಲಿ ಬಂದಿದೆ. ಮಂದಿರದಲ್ಲಿ ಶ್ರೀ ರಾಮನ ಮೂರ್ತಿಯ ನಿರ್ಮಾಣಕ್ಕಾಗಿ ಬೇಕಾಗುವ ಕಲ್ಲು ಬಹಳಷ್ಟು ವಿಶೇಷವಾದ ಹಾಗೂ ಪ್ರಸಿದ್ಧ ಸ್ಥಳದಿಂದ ತರಲಾಗಿದೆ.

ರಾಮನ ಮೂರ್ತಿ ತಯಾರು ಮಾಡುವ ಸಲುವಾಗಿ ಪವಿತ್ರ ಶಾಲಿಗ್ರಾಮ ಶಿಲೆಯನ್ನೇ ಆಯ್ಕೆ ಮಾಡಲು ಮುಖ್ಯ ಕಾರಣ

ಪವಿತ್ರ ಶಾಲಿಗ್ರಾಮ್: ಅಯೋಧ್ಯೆಯಲ್ಲಿ ರಾಮನ ವಿಗ್ರಹಕ್ಕೆ 140 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಕಲ್ಲುಗಳನ್ನು ಬಳಸಲಾಗುವುದು. ನೇಪಾಳದ ಗಂಡಕಿ ನದಿಯ ಉಪನದಿಯಾದ ಕಾಳಿ ಗಂಡಕಿಯ ನದಿಪಾತ್ರಗಳಲ್ಲಿ ಅಥವಾ ದಡದಲ್ಲಿ ಹೆಚ್ಚಾಗಿ ಇಂತಹ ಕಲ್ಲುಗಳು ಕಂಡುಬರುವವು. ಶಾಲಿಗ್ರಾಮ್ ಶಿಲೆಯನ್ನು ಹಿಂದೂ ಭಕ್ತರು ಪೂಜಿಸುತ್ತಾರೆ ಏಕೆಂದರೆ ಇದು ವಿಷ್ಣುವಿನ ಪ್ರಾತಿನಿಧ್ಯ ಎಂದು ಅವರು ನಂಬುತ್ತಾರೆ.

ಗುರುವಾರ (ಫೆಬ್ರವರಿ 2) 31 ಟನ್ ಮತ್ತು 15 ಟನ್ ತೂಕದ ಎರಡು ಪವಿತ್ರ ಶಾಲಿಗ್ರಾಮ ಕಲ್ಲುಗಳು ಉತ್ತರ ಪ್ರದೇಶದ ಅಯೋಧ್ಯೆಗೆ ಆಗಮಿಸಿವೆ. ರಾಮಮಂದಿರದಲ್ಲಿ ಭಗವಾನ್ ರಾಮ ಮತ್ತು ಜಾನಕಿ ವಿಗ್ರಹಗಳನ್ನು ನಿರ್ಮಿಸಲು ಈ ಕಲ್ಲುಗಳನ್ನು ಬಳಸುವ ನಿರೀಕ್ಷೆಯಿದೆ..

ನೇಪಾಳದ ಪೋಖರಾದಿಂದ 100 ಕಿ.ಮೀ ದೂರದಲ್ಲಿರುವ ಜನಕ್‌ಪುರದ ಗಲೇಶ್ವರ ಧಾಮದಿಂದ ಜನಕ್‌ಪುರದ ಜಾನಕಿ ದೇವಸ್ಥಾನದ ಅರ್ಚಕರು ಮತ್ತು ವಿಎಚ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ಸೇರಿದಂತೆ 150 ಜನರ ನಿಯೋಗದಿಂದ ಈ ಕಲ್ಲುಗಳನ್ನು ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ತರಲಾಯಿತು.

ಈ ಪವಿತ್ರ ಶಾಲಿಗ್ರಾಮ ಶಿಲೆಯಿಂದ ರಾಮನ ಮೂರ್ತಿ ರಚನೆ ಮಾಡುವ ಶಿಲ್ಪಕಾರ ಯಾರು?

ಅಯೋಧ್ಯೆಯ ರಾಮ ಮಂದಿರದಲ್ಲಿ ನಿರ್ಮಿಸಲಾಗುವ ಶ್ರೀ ರಾಮನ ಮೂರ್ತಿಯ ರಚನೆಯನ್ನು ನಮ್ಮ ಬದಿಯ ರಾಜ್ಯ ವಾದ ಮಹಾರಾಷ್ಟ್ರದ ಪ್ರಸಿದ್ಧ ಶಿಲ್ಪಕಾರ ಶ್ರೀ ರಾಮ ವ್ಹಿ ಸುತಾರ ಇವರು ರಚನೆ ಮಾಡುವ ವರಿದ್ದಾರೆ. ಇಂತ ಸೌಭಾಗ್ಯ ದೊರೆಯುವದು ತುಂಬಾ ಹೆಮ್ಮೆಯ ವಿಷಯವಾಗಿದೆ. ದೇಶದ ಪ್ರಸಿದ್ಧ ಸ್ಥಳದಲ್ಲಿ ಇವರ ಅಮೃತ ಹಸ್ತದಿಂದ ರಚನೆಯಾದ ಮೂರ್ತಿ ಮಂದಿರದಲ್ಲಿ ನಿರ್ಮಿಸಲಾಗುತ್ತಿದೆ ಎಂದರೆ ಇವರು ಸಹ ಪುಣ್ಯ ಮಾಡಿರಬೇಕು. ಇವರು ಬಹಳಷ್ಟು ಪ್ರತಿಮೆಯನ್ನು ನಿರ್ಮಾಣ ಮಾಡಿ ಪದ್ಮಶ್ರೀ , ಪದ್ಮಭೂಷಣ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಗುಜರಾತ್ ನಲ್ಲಿಯ ಸ್ಟ್ಯಾಚು ಆಫ್ ಯೂನಿಟಿ ಸಹ ಇವರೇ ರಚನೆ ಮಾಡಿದ್ದಾರೆ.