ರಾಮಾಯಣದ ನಿರ್ಮಾಪಕ ರಮಾನಂದ್ ಸಾಗರ್ ಅವರ ಮರಿ ಮೊಮ್ಮಗಳ ಹಾಟ್ ಅವತಾರ ನೋಡಿ ದಂಗಾದ ನೆಟ್ಟಿಗರು!
ರಮಾನಂದ ಸಾಗರ್ ಎನ್ನುವ ಹೆಸರು ಭಾರತ ದೇಶದ ಕಿರುತೆರೆಯ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಹೆಸರು. ಈ ಹೆಸರು ಕೇಳಿದ ಕೂಡಲೇ ಮನಸ್ಸಿನಲ್ಲಿ ಒಂದು ಗೌರವ ಭಾವ ಮೂಡುತ್ತದೆ ಅಲ್ಲದೇ ಅವರ ಬಗ್ಗೆ ಅನೇಕರು ತಮ್ಮ ಅಭಿಮಾನವನ್ನು ಸಹಾ ವ್ಯಕ್ತಪಡಿಸುತ್ತಾರೆ. ರಮಾನಂದ ಸಾಗರ್ ಅವರು ರಾಮಾಯಣ ಮಹಾಕಾವ್ಯ ವನ್ನು ಧಾರಾವಾಹಿಯ ರೂಪದಲ್ಲಿ ಜನರ ಮುಂದೆ ಇರಿಸಿದ ಮಹಾನ್ ನಿರ್ಮಾಪಕ.
ದಶಕಗಳ ಹಿಂದೆ ಕಿರುತೆರೆಯಲ್ಲಿ ರಾಮಾಯಣ ಒಂದು ಹೊಸ ದಾಖಲೆಯನ್ನು ಸೃಷ್ಟಿಮಾಡಿತ್ತು. ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಈ ಧಾರಾವಾಹಿ ಮರು ಪ್ರಸಾರ ಕಂಡಿತ್ತು. ಈ ವೇಳೆಯಲ್ಲಿಯೂ ಅಂತಹದೇ ಒಂದು ದಾಖಲೆಯನ್ನು ಬರೆಯುವ ಮೂಲಕ ರಮಾನಂದ ಸಾಗರ ಅವರ ನಿರ್ಮಾಣದ ರಾಮಾಯಣ ಧಾರಾವಾಹಿಯು ಮತ್ತೊಮ್ಮೆ ಜನರ ಅಪಾರ ಮೆಚ್ಚುಗೆಯನ್ನು ಪಡೆಯಿತು.

ರಮಾನಂದ್ ಸಾಗರ್ ಅವರ ಮರಿ ಮೊಮ್ಮಗಳ ಹೆಸರು ಸಾಕ್ಷಿ ಚೋಪ್ರಾ. ಈಕೆ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿದ್ದು, ಆಗಾಗ ತನ್ನ ಬೋಲ್ಡ್ ಹಾಗೂ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ.
ಇವರ ಫೋಟೋಗಳನ್ನು ನೋಡಿದಾಗ ಒಂದು ಕ್ಷಣ ಇವರು ರಮಾನಂದ ಸಾಗರ ಅವರ ಮೊಮ್ಮಗಳು ಎಂದರೆ ನಂಬುವುದಕ್ಕೆ ಕಷ್ಟ ಆಗುತ್ತದೆ. ಏಕೆಂದರೆ ರಮಾನಂದ ಸಾಗರ್ ಎಂದರೆ ಒಂದು ಭಕ್ತಿಯ ಭಾವ ಮೂಡುವ ಜನರ ಮನಸ್ಸಿನಲ್ಲಿ ಅವರ ಮರಿ ಮೊಮ್ಮಗಳ ಮಾಡ್ರನ್ ಲುಕ್ ಎಲ್ಲೋ ಒಂದು ಕಡೆ ಒಂದು ಆಶ್ಚರ್ಯವನ್ನು ಮೂಡಿಸುತ್ತದೆ.
ಕಾಲಕ್ಕೆ ತಕ್ಕಂತೆ ಆಧುನಿಕ ಜೀವನ ಶೈಲಿಗೆ ಸಾಕ್ಷಿ ಚೋಪ್ರಾ ಒಗ್ಗಿಕೊಂಡಿದ್ದು, ಅವರು ಯಾವುದೇ ಸಿನಿಮಾ ನಟಿ ಅಥವಾ ರೂಪದರ್ಶಿ ಗಿಂತ ಕಡಿಮೆ ಏನಿಲ್ಲ ಎನ್ನುವಂತಹ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಸಾಕ್ಷಿ ಚೋಪ್ರಾ ಅವರನ್ನು ಭಾರತದ ಕೈಲಿ ಜನೆರ್ ಎಂದು ಕರೆಯಲಾಗುತ್ತದೆ.

ಇದಕ್ಕೆ ಪ್ರಮುಖ ಕಾರಣ ಗ್ಲಾಮರಸ್ ಹಾಗೂ ಬೋಲ್ಡ್ ಲುಕ್ ಹಾಗೂ ದೇಹದ ಆಕಾರ ಎನ್ನಲಾಗಿದೆ ಸಾಕ್ಷಿ ಚೋಪ್ರಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚಿನ ಹಿಂಬಾಲಕರು ಇದ್ದಾರೆ. ಸಾಕ್ಷಿ ಶೇರ್ ಮಾಡುವ ಫೋಟೋಗಳಿಗೆ ಭರ್ಜರಿಯಾಗಿ ಲೈಕ್ ಮತ್ತು ಕಾಮೆಂಟ್ಗಳು ಹರಿದುಬರುತ್ತವೆ.
ಸೋಶಿಯಲ್ ಮೀಡಿಯಾ ಸೆನ್ಸೇಶನ್ ಎನಿಸಿರುವ ಸಾಕ್ಷಿ ಚೋಪ್ರಾ ಮೋತಿ ಸಾಗರ್ ಅವರ ಮೊಮ್ಮಗಳು ಹಾಗೂ ನಿರ್ಮಾಪಕಿ ಮೀನಾಕ್ಷಿ ಸಾಗರ್ ಅವರ ಮಗಳು ಆಗಿದ್ದಾರೆ. ಒಂದು ಸಂದರ್ಶನದ ವೇಳೆಯಲ್ಲಿ ಮೋತಿ ಸಾಗರ್ ಅವರು, “ನನ್ನ ಮೊಮ್ಮಗಳು ತಮ್ಮ ಮನೆತನದ ಪರಂಪರೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವಳು” ಎಂದು ಹೆಮ್ಮೆಯಿಂದ ಹೇಳಿದ್ದರು.

ಸಾಕ್ಷಿ ಚೋಪ್ರಾ ಒಬ್ಬ ನಟಿಯಾಗಿ ಅಲ್ಲ ಬದಲಾಗಿ ಆಕೆ ಒಬ್ಬ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಯಾಗಿ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಸಾಕ್ಷಿ ಒಂದು ಟ್ಯಾಲೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ ಸೋಶಿಯಲ್ ಮೀಡಿಯಾ ಗಳಲ್ಲಿ ಅವರು ತನ್ನನ್ನು ತಾನು ಒಬ್ಬ ಸಿಂಗರ್ ಹಾಗೂ ರೈಟರ್ ಎಂದು ಹೇಳಿಕೊಂಡಿದ್ದಾರೆ.
ಸಾಕ್ಷಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಅವರು ಸಿನಿಮಾ ಮತ್ತು ನಟನೆಯ ತರಬೇತಿಯನ್ನು ಪಡೆದಿದ್ದಾರೆ. ಸಾಕ್ಷಿ ಇಂಗ್ಲೆಂಡ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದು, ವೆಸ್ಟರ್ನ್ ಲೋಕಲ್ಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರ ಮೊದಲ ಮ್ಯೂಸಿಕ್ ವಿಡಿಯೋ ನೀನಾ ಸಿಮೋನೆ ಅವರ ಕ್ಲಾಸಿಕ್ ಹಿಟ್ ಆಗಿದ್ದು ಇದು ‘ಫೀಲಿಂಗ್ ಗುಡ್’ ನ ಮುಖಪುಟವಾಗಿತ್ತು.
ಇದು ಅವರ ಅಭಿಮಾನಿಗಳಲ್ಲಿ ಭಾರಿ ಯಶಸ್ಸನ್ನು ಕಂಡಂತಹ ಮ್ಯೂಸಿಕ್ ವೀಡಿಯೋ ಆಗಿತ್ತು. ಸಾಕ್ಷಿ ತಮ್ಮ 17 ನೇ ವಯಸ್ಸಿನಿಂದಲೇ ವೃತ್ತಿಪರವಾಗಿ ಹಾಡಲು ಪ್ರಾರಂಭಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಬಾಲಿವುಡ್ ನ ನಟಿ ಪೂಜಾ ಬೇಡಿ ಅವರ ಮಗಳು ಅಲಾಯ ಜೊತೆಗೆ ಪಬ್ ಒಂದರಲ್ಲಿ ಸಾಕ್ಷಿ ಯಾವುದೋ ವಿಚಾರಕ್ಕೆ ಜಗಳವನ್ನು ಮಾಡಿಕೊಂಡಾಗ, ಆ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು.

ಅದು ಬಿಟ್ಟರೆ ಅವರು ಬೇರೆ ಯಾವ ವಿಚಾರದಲ್ಲೂ ಮೀಡಿಯಾಗಳ ಸುದ್ದಿಯಲ್ಲಿ ಹರಿದಾಡಿಲ್ಲ. ಆದರೆ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕ್ಷಿ ಹಾಕುವ ಫೋಟೋಗಳಿಂದಾಗಿಯೇ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದು, ಅತಿಶೀಘ್ರದಲ್ಲೇ ಸಾಕ್ಷಿ ಬಾಲಿವುಡ್ ಗೆ ಎಂಟ್ರಿ ನೀಡಲೂಬಹುದು ಎನ್ನುವ ನಿರೀಕ್ಷೆಗಳು ಇವೆ.