ರಾನು ಮಂಡಲ್ ಹೊಸ ಅವತಾರ್; ಬೈಕ್ ಮೇಲೆ ಕುಳಿತು ಹುಡುಗನ ಜೊತೆ ರೋಮಾನ್ಸ್! ನೆಟ್ಟಿಗರೆಂದರು ಈ ಜೋಡಿ ವಿಕ್ರಂ ಬೇತಾಳ..!
ರಾನು ಮಂಡಲ್ ಏನೇ ಮಾಡಲಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಯಾಗಿ ಹರಡಿಬಿಡುತ್ತದೆ. ಒಂದು ಒಳ್ಳೆಯ ಪ್ರಾರಂಭದ ನಂತರ ರಾನು ಮಂಡಲ್ ಗೆ ತನಗೆ ಸಿಕ್ಕ ಬ್ರೆಕ್ ಅಥವಾ ಸ್ಟೇಟಸ್, ಕೊನೆಯವರೆಗೂ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಕೆಲವೇ ಕೆಲವು ದಿನಗಳ ನಂತರ ಗಾಯನದ ಬದಲಾಗಿ ಅವರ ವಿಚಿತ್ರ ಡಾನ್ಸ್ ಮತ್ತು ಅಷ್ಟೇ ವಿಚಿತ್ರ ಮೇಕಪ್ ಸಾಕಷ್ಟು ವೈರಲ್ ಆಗತೊಡಗಿದವು. ಇಂದು ರಾನು ಮಂಡಲ್ ರ ಹತ್ತಿರ ಯಾವುದೇ ಕೆಲಸವಿಲ್ಲ ಆದರೂ ಅವರ ಫನ್ನಿ ಹಾಗೂ ವಿಚಿತ್ರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಲೇ ಇರುತ್ತವೆ. ಸದ್ಯ ಇಂಟರ್ನೆಟ್ ನಲ್ಲಿ ರಾನು ಅವರ ಹೊಸ ವಿಡಿಯೋ ಒಂದು ಧೂಳ್ ಎಬ್ಬಿಸುತ್ತಿದೆ. ಏನಿದೆ ಈ ವಿಡಿಯೋದಲ್ಲಿ ಬನ್ನಿ ನೋಡೋಣ.
ಪ್ರಸ್ತುತ ವಿಡಿಯೋದಲ್ಲಿ ರಾನು ಮಂಡಲ್ ಹೊಸ ರೂಪದಲ್ಲಿ ಕಂಡು ಬರುತ್ತಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೈಕ್ ಮೇಲೆ ಕುಳಿತು ಹ್ಯಾಂಡ್ಸಮ್ ಹುಡುಗನ ಜೊತೆಗೆ ರೋಮ್ಯಾಂಟಿಕ್ ಹಾಡನ್ನು ಹಾಡುತ್ತಿದ್ದಾರೆ. ಜೊತೆಯಲ್ಲಿ ಕುಳಿತ ಹುಡುಗ ಇಲ್ಲಿ ಹಿಂದಿ ಬಾಲಿವುಡ್ ಸಾಂಗ್ ಹಾಡುತ್ತಿರುವುದು ಕಂಡುಬರುತ್ತಿದೆ. ಹಿಂದೆ ಕುಳಿತ ರಾನು ಮಂಡಲ್ ಅದಕ್ಕೆ ತಕ್ಕಂತೆ ಹಾವ ಮಾಡುತ್ತಾ ಎಂದಿನಂತೆ ವಿಚಿತ್ರ ಡಾನ್ಸ್ ಮಾಡುತ್ತಿದ್ದಾಳೆ. ಇಲ್ಲಿ ರಾನು ಮಂಡಲ್ ತೊಟ್ಟ ಒನ್ ಪೀಸ್ ಡ್ರೆಸ್ ಗಮನ ಸೆಳೆಯುವಂತಿದೆ. ಹುಡುಗ ಮಾತ್ರ ರಾನು ಮಂಡಲ್ ಅವರಿಗಿಂತ ತುಂಬಾ ಚಿಕ್ಕವನಾಗಿದ್ದಾನೆ. ಒಟ್ಟಿನಲ್ಲಿ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನೋಡಿ ಈ ವಿಡಿಯೋ…
View this post on Instagram
ಹಾಗೆ ನೋಡಲಾಗಿ ರಾನು ಮಂಡಲ ತಮ್ಮ ಪ್ರತಿಯೊಂದು ವಿಡಿಯೋದಲ್ಲಿ ಜನರ ಮಧ್ಯೆ ಮುಜುಗರ ಪಡುವಂತಹ ಕೃತ್ಯ ಮಾಡುತ್ತಿರುತ್ತಾಳೆ. ಈ ಬಾರಿ ಅಂತೂ ಆಕೆಯ ಜೊತೆಗೆ ಆ ಹುಡುಗನಿಗೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಫೇಮಸ್ ಆಗಲು ಜನ ಏನು ಬೇಕಾದರೂ ಮಾಡುತ್ತಿದ್ದಾರೆಂದು ಜನ ಎನ್ನುತ್ತಿದ್ದಾರೆ. ನೆಟ್ಟಿಗರು ವಿಡಿಯೋದಲ್ಲಿರುವ ಪ್ರಸ್ತುತ ಯುವಕ ತನ್ನ ತಾಯಿಯ ವಯಸ್ಸಿನ ಮಹಿಳೆಯ ಜೊತೆಗೆ ರೋಮ್ಯಾಂಟಿಕ್ ರೀಲ್ ಮಾಡುತ್ತಿದ್ದಾನೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ Rohan Shaw ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಕಮೆಂಟ್ ನಲ್ಲಿ ಒಬ್ಬನು ಈ ಜೋಡಿಗೆ ವಿಕ್ರಂ ಬೇತಾಳ ಎಂದಿದ್ದಾನೆ.