ಅಬ್ಬಾ! ಬಹು ಭಾಷಾ ನಟಿ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅವರ ಒಟ್ಟು ಆಸ್ತಿ ಕೇಳಿದರೆ ಶಾಕ್!
ನ್ಯಾಷನಲ್ ಕ್ರಶ್ ಎಂದೇ ಪರಿಚಿತವಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಆಯ್ತು, ತೆಲುಗು ಆಯ್ತು, ಈಗ ಸದ್ದಿಲ್ಲದೇ ಬಾಲಿವುಡ್ ನಲ್ಲಿಯೂ ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರಂತೆ! ಈ ವಿಷಯ ಕೇಳಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಈ ಬಹುಭಾಷಾ ನಟಿಯ ಒಟ್ಟು ಅಸ್ತಿ ಎಷ್ಟಿದೆ, ಎಂಥ ಕಾರ್ ಇದೆ ಎಂದು ನೋಡೋಣ ಬನ್ನಿ…
ಕನ್ನಡದ ನಟ ನಿರ್ಮಾಪಕ ರಕ್ಷಿತ್ ಶೆಟ್ಟಿಯವರ ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟ ಈ ನಟಿ, ನಂತರ ವಿಜಯ್ ದೇವರಕೊಂಡ ಅವರೊಂದಿಗೆ ತೆಲುಗಿನ ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ತೆಲುಗು ಫಿಲಂ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟರು. ಅಲ್ಲೂ ಕೂಡ ಅಲ್ಲೂ ಅರ್ಜುನ್ ರಂತಹ ದೊಡ್ಡ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿದ್ದು ಆಯ್ತು.
ಆಮೇಲೆ ಇದೇ ಅಲ್ಲೂ ಅರ್ಜುನ್ ಜೊತೆಗೆ ಒಂದು ಫ್ಯಾನ್ ಇಂಡಿಯಾ ಫಿಲಂ ಪುಷ್ಪದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇವರು ಸಿದ್ದಾರ್ಥ್ ಮಲ್ಹೋತ್ರ ಅವರೊಂದಿಗೆ ಬಾಲಿವುಡ್ ನ ಮಿಷನ್ ಮಜ್ನು ಎಂಬ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ! ಇದಷ್ಟೇ ಅಲ್ಲದೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ಬೈ ಎಂಬ ಚಿತ್ರದಲ್ಲಿ ಕೂಡ ನಟಿಸಲು ಸಜ್ಜಾಗಿದ್ದಾರೆ!

ಇನ್ನೊಂದು ಹೆಸರು ಅನೌನ್ಸ್ ಮಾಡದ ಚಿತ್ರದಲ್ಲಿ ನಟಿಸಲು ಕೂಡ ರಶ್ಮಿಕಾ ಸಹಿ ಹಾಕಿದ್ದಾರೆ. ಇಷ್ಟೆಲ್ಲ ಕೆಲಸ ಮಾಡುತ್ತಿರುವ ರಶ್ಮಿಕಾ ಅವರ ಅಸ್ತಿಯು ಕೂಡ ಹೆಚ್ಚಾಗಲೇಬೇಕಲ್ಲವೇ…. ಪ್ರಸ್ತುತ ಇವರು ದಕ್ಷಿಣ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.
ವರದಿಗಳ ಪ್ರಕಾರ ಅವರ ನೆಟ್ವರ್ಥ್ ಅಸ್ತಿಯ ಮೌಲ್ಯ 35 ಕೋಟಿ ರೂಪಾಯಿಗಳಾಗಿವೆ! ಇವರ ಬಳಿ ಇತ್ತೀಚಿಗಷ್ಟೇ ತಮ್ಮ ಹುಟ್ಟು ಹಬ್ಬದಂದು ಖರೀದಿಸಿದ ರೇಂಜ್ ರೋವರ್ SUV ಕಾರು ಇದೆ. ಇದಷ್ಟೇ ಅಲ್ಲದೇ ಈ ಹಿಂದೆ ಖರೀದಿ ಮಾಡಿದ್ದ 60 ಲಕ್ಷ ರೂಪಾಯಿ ಬೆಲೆಯ ಆಡಿ Q3, ಮರ್ಷಿಡಿಸ್ ಸಿ ಕ್ಲಾಸ್ ಬೆಂಜ್ ಕಾರಿನ ಬೆಲೆ 30 ಲಕ್ಷ ರೂಪಾಯಿ, ಹುಂಡೈ ಕ್ರೆಟಾ ಹಾಗೂ ಟೊಯೋಟಾ ಇನ್ನೋವಾ ಕಾರಿನ ಬೆಲೆಗಳು ಕ್ರಮವಾಗಿ 25 ಹಾಗೂ 20 ಲಕ್ಷ ರೂಪಾಯಿಗಳು.

ಈಗ ತಿಂಗಳಿಗೆ ಸುಮಾರು 35-40 ಲಕ್ಷ ರೂಪಾಯಿ ಆದಾಯವಿದೆ. ಇನ್ನೂ ಬಾಲಿವುಡ್ ಸಿನಿಮಾಗಳಿಂದ ಇವರು ಪ್ರತಿ ಸಿನಿಮಾಗಳಿಗೆ 4 ರಿಂದ 5 ಕೋಟಿ ರೂಪಾಯಿ ಪಡೆಯುತ್ತಾರೆಂಬ ವದಂತಿ ಇದೆ. ಇನ್ನು ಮುಂದೆ ರಶ್ಮಿಕಾ ಅವರ ಆಸ್ತಿ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ, ಕನ್ನಡದ ಹುಡುಗಿ ಇನ್ನೂ ಬೆಳೆಯಲಿ.
-ಮಂಜುನಾಥ್