ರಾಷ್ಟ್ರೀಯ ಕೃಷಿ ಪುರಸ್ಕಾರ ತನ್ನದಾಗಿಸಿಕೊಂಡ ಕರ್ಣ; ಇವರು ಕೃಷಿಯಿಂದ ವರ್ಷಕ್ಕೆ ಗಳಿಸುವುದು 14 ಲಕ್ಷ ರೂಪಾಯಿ!

ಹಿಮಾಚಲ ಪ್ರದೇಶ ರಾಜ್ಯವು ಚಿಕ್ಕದಾದರೂ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಮಾಡುತ್ತಲೇ ಇರುತ್ತದೆ. ಉಳುವಲು ಭೂಮಿಯು ಇಲ್ಲಿ ಕಡಿಮೆ ಇದ್ದರೂ ಸಹಿತ ನವನವೀನ ಪ್ರಯತ್ನಗಳನ್ನು ಕೃಷಿಯಲ್ಲಿ ಮಾಡುತ್ತಿರುತ್ತದೆ.

ಈ ರಾಜ್ಯದ ಸೋಲನ್ ಜಿಲ್ಲೆ ಧಾರ ಹಳ್ಳಿಯ ಯುವಕನಾದ ಕರ್ಣ ಸಿಂಗ್ ಠಾಕೂರ್ ಸ್ವಾವಲಂಬನೆಯ ಮಾರ್ಗವನ್ನು ಆರಿಸಿಕೊಂಡು ತನ್ನ ರಾಜ್ಯದ ಹೆಸರನ್ನೇ ಪ್ರಜ್ವಲಿಸಿದ್ದಾನೆ. ಯುವಕ ಕರ್ಣ ಸಿಂಗ್ ಠಾಕೂರ್ ನು ಡಾ. ಯಶವಂತ್ ಸಿಂಹ ಪರಮಾರ್ ಔದ್ಯೋಗಿಕ ಮತ್ತು ವಾಣಿಜ್ಯ ವಿಶ್ವವಿದ್ಯಾಲಯ ನೌನಿ ಯಿಂದ ಫಲ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ರಾಷ್ಟ್ರಮಟ್ಟದ ಕೃಷಿ ಪುರಸ್ಕಾರವನ್ನು ಪಡೆದಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ 92ನೇ ಸ್ಥಾಪನೆಯ ದಿನದ ಸಮಾರೋಹ ದಲ್ಲಿ ಕರ್ಣ ಸಿಂಗ್ ಠಾಕೂರ್ ಅವರಿಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಕೃಷಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು. ಕರ್ಣ ಅವರು ನೌನೀ ವಿವಿಯಿಂದ ವಿದ್ಯಾಭ್ಯಾಸವನ್ನು ಮಾಡುತ್ತಾ ಸ್ವಾವಲಂಬನೆಯ ಮಾರ್ಗವನ್ನು ಆರಿಸಿಕೊಂಡರು. ವರ್ಷ 2012-13 ನಲ್ಲಿ ಅವರು 100 ಚದರ್ ಮೀಟರ್ ಗಳ ಪಾಲಿಹೌಸ್ ನಲ್ಲಿ ಪುಷ್ಪಗಳ ಉತ್ಪಾದನೆಯ ಕೆಲಸವನ್ನು ಶುರು ಮಾಡಿದರು.

ಸದ್ಯ ಆಗಿನ 100 ಚದರ ಮೀಟರ್ಗಳ ಜಾಗ ಬೆಳೆಯುತ್ತಾ 3000 ಚದರ ಮೀಟರ್ ಗಳಲ್ಲಿ ಕಾರ್ನೇಶನ್ ಬೇಸಾಯದಿಂದ ವರ್ಷಕ್ಕೆ ಸುಮಾರು 13 ರಿಂದ 14 ಲಕ್ಷ ರೂಪಾಯಿಗಳ ಲಾಭ ಪಡೆಯುತ್ತಿದ್ದಾರೆ. ಹೂಗಳ ಉತ್ಪಾದನೆಯ ಜೊತೆಗೆ ಸೇಬು, ಎಪ್ರಿಕಾಟ್, ಪ್ಲಮ್, ಕೀವೀ ಇತ್ಯಾದಿ ಹಣ್ಣುಗಳ ನರ್ಸರಿಯನ್ನು ಸಹಿತ ತಯಾರಿಸುತ್ತಾರೆ. ಈ ನರ್ಸರಿಯ ಉತ್ಪಾದನೆಯಿಂದ ಇವರಿಗೆ ವರ್ಷಕ್ಕೆ 14 ಲಕ್ಷ ರೂಪಾಯಿಗಳವರೆಗೆ ಆದಾಯವಾಗುತ್ತದೆ. ಇಷ್ಟಲ್ಲದೆ ಅಲ್ಲಿಯ ಸ್ಥಾನಿಕರಿಗೆ ಕೆಲಸವನ್ನು ಸಹಿತ ಕೊಡುತ್ತಾರೆ. ಕರ್ಣ ಸಿಂಗ್ ಠಾಕೂರ್ ಅವರು ತಮ್ಮ ಈ ಯಶಸ್ಸಿಗೆ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಸೋಲನ್ ಎರಡು ಕೇಂದ್ರಗಳಿಗೆ ಧನ್ಯವಾದಗಳು ಹೇಳುತ್ತಾರೆ. ನೌನಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಪರ್ವಿಂದರ್ ಕೌಶಲ್ ಅವರು ಕರ್ಣ ಸಿಂಗ್ ಠಾಕೂರ್ ಅವರಿಗೆ ತುಂಬಾ ಅಭಿನಂದನೆಗಳನ್ನು ಸಲ್ಲಿಸುತ್ತಾರೆ.