Video; ರಿಯಲ್ ಪ್ರ್ಯಾಂಕ್; ನಾಯಿಯು ಸುಖದ ನಿದ್ರೆಯಲ್ಲಿದ್ದಾಗ ಘೇಂಡಾ ಮೆಲ್ಲಗೆ ಬಂದು ಎಬ್ಬಿಸಿದಾಗ! ನಾಯಿ ಕರಳು ಬಾಯಿಗೆ ಬಂದಿತ್ತು 😳😳

ಪ್ರಾಣಿಗಳ ವಿಡಿಯೋಗಳು ಮನುಷ್ಯನ ಜೀವನದಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಿಸರ್ಗ ಮನುಷ್ಯನಿಗೆ ಹೇಗೆ ನವನವೀನ ಪಾಠವನ್ನು, ಮನರಂಜನೆಯನ್ನು ನೀಡುತ್ತದೆ, ಅದೇ ರೀತಿ ಈ ಪ್ರಾಣಿಗಳೂ ಸಹ ಮನುಷ್ಯನಿಗೆ ಅನೇಕ ರೀತಿಯ ಪಾಠ, ಮನರಂಜನೆಯನ್ನು ನೀಡುತ್ತವೆ. ಈ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಂತೂ ಹರಿದು ಬರುವ ಪ್ರಾಣಿಗಳ ಭಿನ್ನ ಭಿನ್ನ ವಿಡಿಯೋಗಳು ಮನುಷ್ಯನಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ.

ಸದ್ಯ ಇಲ್ಲಿ ನೋಡುವ ವಿಡಿಯೋ ಸಖತ್ ಕಾಮಿಡಿಯಿಂದ ಕೂಡಿದೆ. ಈ ವಿಡಿಯೋ ನೋಡಿದಾಗ ನಾಯಿಯ ಪರಿಸ್ಥಿತಿ ಅಯೋಮಯ! ಈ ದೃಶ್ಯದ ಬಗ್ಗೆ ಸ್ವಲ್ಪ ಯೋಚಿಸಿದರೂ ಅಬ್ಬಾ ಎನ್ನುತ್ತದೆ ಜೀವ. ನಾಯಿಯೊಂದು ಬಿಸಿಲಿಗೆ ಮೈಯೊಡ್ಡಿ ಚೆನ್ನಾಗಿ ಸುಖದ ನಿದ್ರೆಯಲ್ಲಿದ್ದಾಗ ಘೇಂಡಾ ತನ್ನಷ್ಟಕ್ಕೆ ತಾನು ಬಂದು ಸಮಾಧಾನದಿಂದ ನಾಯಿಗೆ ಎಬ್ಬಿಸಿದೆ. ಏನಪ್ಪಾ ಚೆನ್ನಾಗಿದ್ದೀಯಾ? ಎಂಬಂತಿದೆ ಘೇಂಡಾ ಮೃಗದ ಗತ್ತು. ಇದ್ಯಾವುದರ ಈ ಪರಿವೆಯೇ ಇಲ್ಲದೆ ತುಂಬಾ ಆರಾಮಾಗಿ ಸಕ್ಕರೆ ನಿದ್ರೆಯಲ್ಲಿದ್ದ ನಾಯಿಗೇನು ಗೊತ್ತು? ಪಾಪ ತಾನು ಕಣ್ಣುಗಳನ್ನು ತೆರೆದಾಗ ತನ್ನ ಮುಂದೆ ಜೀವನದಲ್ಲಿ ತಾನೆಂದೂ ಎಂದಿಗೂ ಕಾಣದ ದೈತ್ಯ ಪ್ರಾಣಿಯೊಂದು ನೊಡಲಿದ್ದೇನೆಂದು. ಸಹಜವಾಗಿ ಎಚ್ಚರಗೊಂಡ ನಾಯಿ ಒಮ್ಮೆಲೆ ಕಣ್ಣುಗಳ ಮುಂದೆ ನಿಂತ ದೈತ್ಯ ಪ್ರಾಣಿಯನ್ನು ಕಂಡು ಹಠಾತ್ ಬೆಚ್ಚಿಬಿದ್ದಿದೆ ಹಾಗೂ ಹೌಹಾರಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮಲಗಿ ಎದ್ದ ನಾಯಿ ಕಣ್ಣು ತೆರೆದಾಗ ಒಮ್ಮೆಲೆ ಹೇಗಾಗಿರಬೇಡ? ನಾಯಿಯ ಸ್ಥಾನದಲ್ಲಿ ಆ ದೃಶ್ಯವನ್ನು ಸ್ವತಃ ನಾವೇ ನಿಂತು ಅನುಭವಿಸಿದರೆ ನಮ್ಮ ಮೈಯಲ್ಲೂ ಸಹ ನಡುಕ ಹುಟ್ಟುತ್ತದೆ, ಅಲ್ವಾ?

ವೀಡಿಯೋ ನೋಡಿ

 

View this post on Instagram

 

A post shared by Mikku Obsidian (@mikku_obsidian)

ಘೇಂಡಾ ಮತ್ತು ನಾಯಿಯ ಈ ವಿಶೇಷ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ mikku_obsidian ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ಸಾಕಷ್ಟು ಇಷ್ಟವಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 3.3 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ ಹಾಗೂ 2.65 ಲಕ್ಷ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.