ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ 6000mAh ಶಕ್ತಿಯುತ ಬ್ಯಾಟರಿ, 5 ಕ್ಯಾಮೆರಾಗಳನ್ನು ಹೊಂದಿರುವ ರಿಯಲ್ ಮೀ ಸ್ಮಾರ್ಟ್ ಫೋನ್!
ರಿಯಲ್ ಮೀ ತನ್ನ ಮೂರನೇ ವಾರ್ಷಿಕೋತ್ಸವದ ಮಾರಾಟವನ್ನು ಫ್ಲಿಪ್ ಕಾರ್ಟ್ ನಲ್ಲಿ ಆಯೋಜಿಸಿದೆ. ಮಾರಾಟವನ್ನು ಐದು ದಿನಗಳವರೆಗೆ ಇಡಲಾಗಿದೆ, ಮತ್ತು ಅದರ ಕೊನೆಯ ದಿನ ಜೂನ್ 8 ಆಗಿದೆ. ಈ ಸೇಲ್ ನಲ್ಲಿ ರಿಯಲ್ ಮೀ ಯವರ Realme C15 ಫೋನ್ ಎಲ್ಲರನ್ನೂ ಆಕರ್ಷಿಸುತ್ತಿದೆ. 6000mAh ಬ್ಯಾಟರಿ ಉಳ್ಳ ಫೋನ್ ಇಲ್ಲಿ ಅಗ್ಗವಾಗಿ ಲಭ್ಯವಾಗುತ್ತಿದೆ.
ಈ ಫೋನ್ನ ಪ್ರಮುಖ ವಿಷಯವೆಂದರೆ, ಕ್ವಾಡ್ ಕ್ಯಾಮೆರಾ ಸೆಟಪ್ ಮತ್ತು 6000mAh ಬ್ಯಾಟರಿ ಇದಕ್ಕಿವೆ. ಗ್ರಾಹಕರು ಈ ಫೋನ್ ಅನ್ನು 1 ಸಾವಿರ ರೂ.ಗಳ ರಿಯಾಯಿತಿಯಲ್ಲಿ ಕೊಳ್ಳಬಹುದು. ಅದನ್ನು ಅದರ ಎಲ್ಲಾ ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ರಿಯಲ್ ಮಿ ಸಿ 15 ನಲ್ಲಿ ಹಲವು ಮಾಡೆಲ್ ಗಳಿವೆ.
3 ಜಿಬಿ ರ್ಯಾಮ್ + 32 ಜಿಬಿ ಸ್ಟೋರೆಜ್ ಫೋನಿನ ಬೆಲೆ 9,999 ರೂ., ಆದರೆ ಮಾರಾಟದಲ್ಲಿ 1,000 ರೂ.ಗಳ ರಿಯಾಯಿತಿಯ ನಂತರ, ಇದನ್ನು 8,999 ರೂಗಳಿಗೆ ಮಾರಲಾಗುತ್ತಿದೆ. ಹಾಗೆಯೇ 4 ಜಿಬಿ ರ್ಯಾಮ್ + 64 ಜಿಬಿ ಸ್ಟೋರೆಜ್ ರೂಪಾಂತರವನ್ನು 10,999 ರೂಗಳ ಬದಲು 9,999 ರೂಗಳಿಗೆ ಕೊಳ್ಳಬಹುದು.
ರಿಯಲ್ ಮಿ ಯವರ ಈ ಸಾಧನವು 6.5-ಇಂಚಿನ ಎಚ್ಡಿ + (720×1600 ಪಿಕ್ಸೆಲ್ಗಳು) ಡಿಸ್ಪ್ಲೆ ಹೊಂದಿದೆ. ಇದು 4 ಜಿಬಿ ವರೆಗೆ LPDDR4x ರ್ಯಾಮ್ನೊಂದಿಗೆ ಬರುತ್ತದೆ. ಫೋನ್ನಲ್ಲಿ ಲಭ್ಯವಿರುವ 64 ಜಿಬಿ ವರೆಗೆ ಇಂಟರ್ನಲ್ ಮೆಮರಿಯನ್ನು ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ 256 ಜಿಬಿಗೆ ಹೆಚ್ಚಿಸಬಹುದು.

ಪವರ್ ಬ್ಲೂ ಮತ್ತು ಪವರ್ ಸಿಲ್ವರ್ ಎಂಬ ಎರಡು ಬಣ್ಣಗಳಲ್ಲಿ ಗ್ರಾಹಕರು ಈ ಫೋನ್ ಖರೀದಿಸಬಹುದು. ಫೋನ್ ನ ಹಿಂದಿನ ಪ್ಯಾನಲ್ ನಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಇದರಲ್ಲಿ 5 ಕ್ಯಾಮೆರಾಗಳಿದ್ದು, 4 ಹಿಂದಿನ + 1 ಮುಂಭಾಗ ಇವೆ.
ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ, ಫೋನ್ ನ ಕ್ವಾಡ್ ಕ್ಯಾಮೆರಾ ಸೆಟಪ್ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್, 8 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್, 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಮತ್ತು 2 ಮೆಗಾಪಿಕ್ಸೆಲ್ ರೆಟ್ರೊ ಲೆನ್ಸ್ ಹೊಂದಿದೆ.
ಸೆಲ್ಫಿಗಾಗಿ ರಿಯಲ್ ಮಿ ಸಿ 15 ನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಫೋನ್ ಪ್ರಬಲ 6000mAh ಬ್ಯಾಟರಿಯನ್ನು ಹೊಂದಿದ್ದು, ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಆಸಕ್ತಿ ಇರುವವರು ಈ Realme C15 ಫೋನ್ ಅನ್ನು ಖರೀದಿಸಬಹುದು.
-Team Infotrend