Video; ರೀಲ್ ಮಾಧುರಿ ಡಾನ್ಸ್ ಗೆ ಮನೆಯಿಂದಲೇ ಚಾಲೆಂಜ್! ಈ ಮನೆಯ ಮಾಧುರಿಗೆ 10 ರಲ್ಲಿ ನೀವು ನೀಡುವ ಅಂಕಗಳೇಷ್ಟು?

“ಡಿಂಗ್ ಡಾಂಗ್ ಡಿಂಗ್” ಎನ್ನುತ್ತಾ 1988 ರಲ್ಲಿ ಪ್ರದರ್ಶನಗೊಂಡ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಇಬ್ಬರೂ ಕೂಡಿ ಮುಖ್ಯ ಪಾತ್ರದಲ್ಲಿ ನಟಿಸಿದ ‘ತೆಜಾಬ್’ ಚಿತ್ರದ ಹಾಡು ರಸಿಕರಿಗೆ ಸಾಕಷ್ಟು ಮೋಡಿ ಮಾಡಿತ್ತು. ಎಲ್ಲಿ ಕೇಳಿದಲ್ಲಿ ಇದೇ ಹಾಡಿನ ಸದ್ದು ಕೇಳಿ ಬರುತ್ತಿತ್ತು. ಈ ಹಾಡಿನಿಂದಾಗಿ ಬಾಲಿವುಡ್ ತಾರೆ ಮಾಧುರಿಯವರು ತುಂಬಾ ಪ್ರಸಿದ್ಧಿಯನ್ನು ಪಡೆದರು.

ಸದ್ಯ ಇದೇ ಹಾಡಿಗೆ ಯುವತಿಯೊಬ್ಬಳು ಮನೆಯಲ್ಲಿ ಸಖತ್ತಾಗಿ ಮೈ ಬಳುಕಿಸಿದ್ದಾಳೆ. ಇದೇ ತೆಜಾಬ್ ಚಿತ್ರದ ಫೇಮಸ್ ಹಾಡಾದ ಏಕ್, ದೋ, ತೀನ್, ಚಾರ್, ಪಾಚ್, ಛೇ, ಸಾತ್, ಆಠ, ನೌ, ದಸ್, ಗ್ಯಾರಾ…., ಬಾರಾ, ತೇರಾ ಎನ್ನುತ್ತಾ ಫುಲ್ ಬಿಂದಾಸ್ ಆಗಿ ಸೊಂಟವನ್ನು ಬಳುಕಿಸಿದ್ದಾಳೆ. ಹಳದಿ ಬಣ್ಣದ ಸೀರೆಯ ಮೇಲೆ ಯುವತಿ ಮತ್ತಷ್ಟು ಸುಂದರವಾಗಿ ಕಾಣುತ್ತ ತೀರ ಚೆನ್ನಾಗಿ ಹೆಜ್ಜೆಯನ್ನಿಟ್ಟಿದ್ದು ನೆಟ್ಟಿಗರಿಗೆ ಸಖತ್ ಇಷ್ಟವಾದಂತೆ ಕಾಣುತ್ತಿದೆ.

ವೀಡಿಯೋ ನೋಡಿ

 

View this post on Instagram

 

A post shared by Pooja Jagtap (@pooja_s_jagtap)

ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ pooja _s_jagatap ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದ್ದು ಸುಮಾರು 2 ಲಕ್ಷಗಳ ವರೆಗೆ ನೆಟ್ಟಿಗರು ಈ ವೀಡಿಯೋವನ್ನು ಇಷ್ಟಪಟ್ಟು ಲೈಕ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಯುವತಿಯ ನೃತ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು ನೋಡುಗರು ಮಾತ್ರ ತುಂಬಾ ಇಂಟರೆಸ್ಟಿಂಗ್ ನಿಂದ ನೋಡುತ್ತಿದ್ದಾರೆ.